ದೇಶದಲ್ಲೇ ಬೆಂಗಳೂರು ವಾಸಯೋಗ್ಯ ನಗರ ನಂ. 1, ಸಿಎಂ ಅಭಿನಂದನೆ

By Suvarna NewsFirst Published Mar 4, 2021, 10:00 PM IST
Highlights

ಬೆಂಗಳೂರಿಗೆ ಮತ್ತೊಂದು ಗರಿ/ ವಾಸಯೋಗ್ಯ ನಗರಗಳ  ಪಟ್ಟಿಯಲ್ಲಿ  ಮೊದಲ ಸ್ಥಾನ/ ಅಭಿನಂದನೆ ಸಲ್ಲಿಸಿದ ಸಿಎಂ ಬಿಎಸ್ ಯಡಿಯೂರಪ್ಪ/ ದಾವಣಗೆರೆಗೂ ಗೌರವ

ಬೆಂಗಳೂರು (ಮಾ.  04) ವಾಸಯೋಗ್ಯ ನಗರಗಳ ಸೂಚ್ಯಂಕದಲ್ಲಿ ಬೆಂಗಳೂರಿಗೆ ಅಗ್ರಸ್ಥಾನ ದೊರೆತಿದೆ.  ಮಾ.04 ರಂದು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹತ್ತುಲಕ್ಷಕ್ಕೂ ಮೀರಿದ ಜನಸಂಖ್ಯೆ ಇರುವ ನಗರಗಳ ವಿಭಾಗಗಳಲ್ಲಿ ವಾಸಯೋಗ್ಯ ನಗರಗಳ ಸೂಚ್ಯಂಕದಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ ದೊರೆತಿದ್ದು ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಸಹ ಟ್ವೀಟ್ ಮಾಡಿದ್ದಾರೆ.

ಒಟ್ಟು 111 ನಗರಗಳ ಪೈಕಿ ಬೆಂಗಳೂರಿಗೆ ಅಗ್ರ ಸ್ಥಾನ ಸಿಕ್ಕಿದೆ.  ಆದರೆ ಆಡಳಿತ, ಸೇವೆ, ಹಣಕಾಸು, ಯೋಜನೆ ರೂಪಿಸುವಿಕೆ  ವಿಭಾಗದಲ್ಲಿ  51 ನಗರಗಳ ಪೈಕಿ  31ನೇ ಸ್ಥಾನ ಪಡೆದುಕೊಂಡಿದೆ.

ಡಿಜೆ ಹಳ್ಳಿ  ಪ್ರಕರಣದ ಹಿಂದೆ ಯಾರ ಕೈವಾಡ?

ದಶಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳ ಪೈಕಿ ದಾವಣಗೆರೆ ನಗರ 9 ನೇ ಸ್ಥಾನ ಪಡೆದಿದೆ. ಈ ವಿಭಾಗದಲ್ಲಿ ಶಿಮ್ಲಾ ಮೊದಲ ಸ್ಥಾನ ಪಡೆದಿದೆ. ಬೆಂಗಳೂರು ಹಾಗೂ ದಾವಣಗೆರೆ ನಗರಗಳು  ಕರ್ನಾಟಕದಿಂದ  ಪಟ್ಟಿಯಲ್ಲಿ ಸ್ಥಾನ ಗಳಿಸಿವೆ. 

ಸಂಸದ ಪಿಸಿ ಮೋಹನ್, ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಬೆಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಿಎಂ ಬಿಎಸ್ ಯಡಿಯೂರಪ್ಪ ಸಹ ಮೆಚ್ಚುಗೆ ಸೂಚಿಸಿದ್ದು ಉತ್ತಮ ಜೀವನಮಟ್ಟ,ನಗರಾಭಿವೃದ್ಧಿ, ನಾಗರಿಕ ಸೇವೆಗಳಿಂದಾಗಿ ಇಡೀ ದೇಶದಲ್ಲೇ, ಸುಲಭ ಜೀವನ ನಡೆಸಲು ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎನ್ನುವ ಹಿರಿಮೆ ಗಳಿಸಿದ್ದು, ಇದಕ್ಕೆ ಕಾರಣವಾಗಿರುವ ಎಲ್ಲ ಇಲಾಖೆ, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು. ಬೆಂಗಳೂರಿನ ಸರ್ವಾಂಗೀಣ ಪ್ರಗತಿಗಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ  ಎಂದು ಹೇಳಿದ್ದಾರೆ. 

 

ಉತ್ತಮ ಜೀವನಮಟ್ಟ,ನಗರಾಭಿವೃದ್ಧಿ, ನಾಗರಿಕ ಸೇವೆಗಳಿಂದಾಗಿ ಇಡೀ ದೇಶದಲ್ಲೇ, ಸುಲಭ ಜೀವನ ನಡೆಸಲು ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎನ್ನುವ ಹಿರಿಮೆ ಗಳಿಸಿದ್ದು, ಇದಕ್ಕೆ ಕಾರಣವಾಗಿರುವ ಎಲ್ಲ ಇಲಾಖೆ, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು. ಬೆಂಗಳೂರಿನ ಸರ್ವಾಂಗೀಣ ಪ್ರಗತಿಗಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ.

— CM of Karnataka (@CMofKarnataka)
click me!