ಅಕ್ಕಿಯಿಂದ ಸಿಕ್ಕಿತು 17 ಲಕ್ಷ ರು.

By Kannadaprabha NewsFirst Published Oct 14, 2020, 11:43 AM IST
Highlights

ಬರೇ ಅಕ್ಕಿಯಿಂದ ಸಿಕ್ಕಿತು 17 ಲಕ್ಷ ರು ಲಾಭ.. ಏನಿದು .. ಲಕ್ಷ್ಮಿಗೆ  ಲಾಕ್‌ಡೌನ್‌ನಿಂದ ಮತ್ತಷ್ಟು ವರಮಾನ ಸಿಕ್ಕಿದೆ. 

ಹೊಳವನಹಳ್ಳಿ (ಅ.14):  ಲಕ್ಷಾಂತರ ಭಕ್ತರ ಕಾಣಿಕೆ ಮತ್ತು ನೆರವಿನಿಂದ ಮಹಾಲಕ್ಷ್ಮಿ ದೇವಾಲಯದ ಉಗ್ರಾಣದಲ್ಲಿ ಕಳೆದ 8 ತಿಂಗಳಿಂದ ಸಂಗ್ರಹವಾಗಿದ್ದ ಹಂಸ ಅಕ್ಕಿ, ಮೀಡಿಯಂ ಅಕ್ಕಿ, ಬೆಲ್ಲ, ಕೊಬ್ಬರಿಯ ಬಹಿರಂಗ ಹರಾಜು ಕೊರಟಗೆರೆ ತಹಶೀಲ್ದಾರ್‌ ಗೋವಿಂದರಾಜು ಸಮ್ಮುಖದಲ್ಲಿ  ನಡೆದಿದೆ.

ಕಲ್ಪತರು ನಾಡಿನ ಸುಪ್ರಸಿದ್ಧ ಪುಣ್ಯಕ್ಷೇತ್ರ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಕಳೆದ 8 ತಿಂಗಳಿಂದ ದಾಸೋಹ ಸ್ಥಗಿತವಾಗಿ ಶೇಖರಣೆ ಮೀಡಿಯಂ ಅಕ್ಕಿ 730 ಕ್ವಿಂಟಲ್‌ ಮೀಡಿಯಂ ಅಕ್ಕಿಯ ಪ್ರತಿಕ್ವಿಂಟಲ್‌ಗೆ 2030 ರು. ನಂತೆ 14 ಲಕ್ಷದ 80 ಸಾವಿರ, 120 ಕ್ವಿಂಟಲ್‌ ಹಂಸ ಅಕ್ಕಿಯ ಪ್ರತಿಕ್ವಿಂಟಲ್‌ಗೆ 2050 ರು. ನಂತೆ 2 ಲಕ್ಷದ 40 ಸಾವಿರಕ್ಕೆ ಬಹಿರಂಗ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ.

ಮತ್ತೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ : ಆತಂಕಗೊಂಡ ಜನ .

ಉಳಿದಂತೆ 12 ಕ್ವಿಂಟಲ್‌ ಬೆಲ್ಲದ ಪ್ರತಿಕ್ವಿಂಟಲ್‌ಗೆ 5 ಸಾವಿರದಂತೆ 60 ಸಾವಿರ ಮತ್ತು 2 ಕ್ವಿಂಟಲ್‌ ಕೊಬ್ಬರಿಗೆ ಪ್ರತಿಕ್ವಿಂಟಲ್‌ಗೆ 1250 ರು. ನಂತೆ 2500ಹಣ ದೇವಾಲಯದ ಖಜಾನೆಗೆ ಬಂದಿದೆ. ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಮಧುಸೂದನ್‌, ರಮೇಶ್‌ ಸೇರಿದಂತೆ ಇತರರು ಇದ್ದರು.

click me!