
ನವಲಗುಂದ(ಅ.14): ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ರಾಮದೇವರ ಗುಡಿ ಓಣಿಯ ಖುಲ್ಲಾ ಜಾಗೆಯಲ್ಲಿ ಭೂಕುಸಿತವಾಗಿದೆ. ಇದರಿಂದ ಸುತ್ತಮುತ್ತಲಿನ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಲೀಲಾ ಮದ್ವರಾಯನವರ ಎಂಬವರ ಮನೆಯ ಪಕ್ಕದಲ್ಲಿನ ಖುಲ್ಲಾ ಜಾಗೆಯಲ್ಲಿ ಏಕಾಏಕಿ ಮಂಗಳವಾರ ಸಂಜೆ ಭೂಕುಸಿತಗೊಂಡಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.
ನರಗುಂದದಲ್ಲಿ ನಿಲ್ಲದ ಭೂಕುಸಿತ: ಆತಂಕದಲ್ಲಿ ಜನತೆ
ಕಳೆದ ನಾಲ್ಕಾರು ದಿನಗಳಿಂದ ಆಗಾಗ ನಿರಂತರವಾಗಿ ಮಳೆ ಸುರಿಯುತ್ತಿತ್ತು. ಇದರಿಂದಾಗಿ ಭೂಕುಸಿದಿರಬಹುದು ಎಂದು ಶಂಕಿಸಲಾಗಿದೆ. ಆದರೆ ಭೂಕುಸಿತದಿಂದಾಗಿ ಪಕ್ಕದ ಮನೆಯ ಗೋಡೆಯೂ ಹಾನಿಗೊಳಗಾಗಬಹುದೆಂಬ ಆತಂಕ ಶುರುವಾಗಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಕಳೆದೊಂದು ವರ್ಷದಲ್ಲಿ ಸಾಕಷ್ಟು ಬಾರಿ ಭೂಕುಸಿತಗಳು ಉಂಟಾಗುತ್ತಿವೆ.