ಭತ್ತದ ಬೆಳೆಗೆ ತಜ್ಞರು ಶಿಫಾರಸು ಮಾಡಿದ ಔಷಧಿ, ಗೊಬ್ಬರ ಬಳಸಿದರೆ ಮಾತ್ರ ಉತ್ತಮ ಇಳುವರಿ

By Kannadaprabha News  |  First Published Dec 20, 2023, 8:59 AM IST

ಭತ್ತದ ಬೆಳೆ ಬೆಳೆಯುವಾಗ ತಜ್ಞರು ಶಿಫಾರಸ್ಸು ಮಾಡಿದ ಗೊಬ್ಬರ ಮತ್ತು ಔಷಧಿಗಳನ್ನು ಮಾತ್ರ ಬಳಕೆ ಮಾಡಿದಾಗ ಮಾತ್ರ ಉತ್ತಮ ಇಳುವರಿ ಪಡಿಯಲು ಸಾಧ್ಯ ಎಂದು ಸಿಕಿಂದರಾಬಾದ್ ಹರ್ ಲಾಲ್ ಸೀಡ್ಸ್ ನ ವಲಯ ವ್ಯವಸ್ಥಾಪಕ ಎಸ್.ಜಿ. ಪಾಟೀಲ್ ಹೇಳಿದರು


  ಸಾಲಿಗ್ರಾಮ :  ಭತ್ತದ ಬೆಳೆ ಬೆಳೆಯುವಾಗ ತಜ್ಞರು ಶಿಫಾರಸ್ಸು ಮಾಡಿದ ಗೊಬ್ಬರ ಮತ್ತು ಔಷಧಿಗಳನ್ನು ಮಾತ್ರ ಬಳಕೆ ಮಾಡಿದಾಗ ಮಾತ್ರ ಉತ್ತಮ ಇಳುವರಿ ಪಡಿಯಲು ಸಾಧ್ಯ ಎಂದು ಸಿಕಿಂದರಾಬಾದ್ ಹರ್ ಲಾಲ್ ಸೀಡ್ಸ್ ನ ವಲಯ ವ್ಯವಸ್ಥಾಪಕ ಎಸ್.ಜಿ. ಪಾಟೀಲ್ ಹೇಳಿದರು.

ತಾಲೂಕಿನ ಹೊಸೂರು ಸಮೀಪ ಸಾಲೇಕೊಪ್ಪಲು ಗ್ರಾಮದ ಎಸ್.ಪಿ. ಅಕಾಶ್ ಅವರ ಜಮೀನಿನಲ್ಲಿ ಏರ್ಪಡಿಸಿದ್ದ ಸಿಕಿಂದರಾಬಾದ್ ನ ಹರ್ ಲಾಲ್ ಸೀಡ್ಸ್ ನ ಆಸ್ಮಿತಾ ಭತ್ತದ ಬೆಳೆಯ ಕ್ಷೇತ್ರತ್ಸೋವನ್ನು ಉದ್ಘಾಟಿಸಿ ಅವರು ಮಾತನಾಡಿದರು

Latest Videos

undefined

ಆಶ್ಮಿತಾದ ತಳಿಯು 130 ದಿನದಲ್ಲಿ ಕಟಾವಿಗೆ ಬರಲಿದ್ದು, ರೋಗ ರುಜಿನಗಳು ಕಡಿಮೆ ಇದ್ದು, ಪ್ರತಿ ಎಕರೆಗೆ 25 ರಿಂದ 30 ಕ್ವಿಂಟಾಲ್ ಭತ್ತದ ಇಳುವರಿ ಬರಲಿದೆ. ರೈತರು ಬೆಳೆಯವ ಗುಣಮಟ್ಟದ ಆಧಾರದಲ್ಲಿ ಇನ್ನು ಹೆಚ್ಚು ಇಳುವರಿ ಪಡೆಯ ಬಹುದು ರೈತರಿಗೆ ಈ ತಳಿಯು ವರದಾನವಾಗಿದೆ ಎಂದು ಮಾಹಿತಿ ನೀಡಿದರು.

ಆಸ್ಮಿತಾ ಭತ್ತ ತಳಿ ಬೆಳೆದ ಯುವ ರೈತ ಎಸ್.ಪಿ. ಆಕಾಶ್ ಬೆಳೆ ಮತ್ತು ಇಳುವರಿಯ ಕುರಿತು ಮಾತನಾಡಿದರು ಇದೇ ಸಂದರ್ಭದಲ್ಲಿ ರೈತ ಗವಿರಂಗೇಗೌಡ ಅವರನ್ನು ಸನ್ಮಾನಿಸಲಾಯಿತು

ಹರ್ ಲಾಲ್ ಸೀಡ್ಸ್ ನ ಮೈಸೂರು ವಿಭಾಗದ ವ್ಯವಸ್ಥಾಪಕ ವೀರೇಶ ಕುಮಾರ್, ತಾಲೂಕು ವ್ಯವಸ್ಥಾಪಕ ಶ್ವೇತರಾಜು, ಬಿತ್ತನೆ ಬೀಜ ವಿತರಕರಾದ ಚೌಡಶೆಟ್ಟಿ, ಅನಿಲ್ ಕುಮಾರ್, ಹರೀಶ್ ಕುಮಾರ್, ಎಚ್.ಎಲ್. ಸುದರ್ಶನ್, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಆರ್. ದಿನೇಶ್, ಉಪಾಧ್ಯಕ್ಷ ನೂತನ್, ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ, ರೈತರಾದ ಶ್ರೀನಿವಾಸ, ವಾಸುದೇವ, ಕಟೇಶ್ ಇದ್ದರು.

ರಾಜ್ಯಕ್ಕೂ ಬಂತು ಡಯಾಬಿಟಿಸ್ ಭತ್ತ

ಬಸವರಾಜ ಹಿರೇಮಠ

ಧಾರವಾಡ (ನ.13) :  ಕಡಿಮೆ ಗ್ಲೆಸಿಮಿಕ್‌ ಸೂಚ್ಯಂಕ ಹೊಂದಿರುವ ಹಾಗೂ ಮಧುಮೇಹಿ ರೋಗಿಗಳಿಗೂ ಅನ್ನ ಊಟ ಮಾಡಲು ಅನುಕೂಲವಾಗುವ ಭತ್ತದ ತಳಿಯೊಂದನ್ನು ಪರಿಚಯಿಸುವ ಕಾರ್ಯಕ್ಕೆ ಇಲ್ಲಿಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಮುಂದಾಗಿದೆ.

ಈ ಹಿಂದೆ ವಾಲ್ಮಿ ಕೆರೆಯ ಕೆಳಭಾಗದ ಹಿಂದೆ ಇರುವ 9 ಎಕರೆ ಪ್ರದೇಶ ಹಲವು ವರ್ಷಗಳಿಂದ ಸಾಗುವಳಿಯಾಗದೆ ಪಾಳು ಬಿದ್ದಿತ್ತು. ವಾಲ್ಮಿ ನಿರ್ದೇಶಕರಾಗಿದ್ದ ಡಾ. ರಾಜೇಂದ್ರ ಪೋದ್ದಾರ ಮತ್ತು ಸದ್ಯದ ನಿರ್ದೇಶಕರಾದ ಬಸವರಾಜ ಬಂಡಿವಡ್ಡರ ಸಲಹೆಯಿಂದ ಬೀಳು ಪ್ರದೇಶವನ್ನು ಅಭಿವೃದ್ಧಿಪಡಿಸಿ ಇದೀಗ ಬಂಗಾರದಂತಹ ಭತ್ತದ ಬೆಳೆಯನ್ನು ಬೆಳೆಯಲಾಗಿದೆ.

ಮಧುಮೇಹಿಗಳಿಗೆ ಇನ್ಮುಂದೆ ನೋವಿನ ಕಿರಿಕಿರಿಯಿಲ್ಲ, ಇಂಜೆಕ್ಷನ್ ಬದಲು ಬರಲಿದೆ ಇನ್ಸುಲಿನ್ ಸ್ಪ್ರೇ

ತೆಲಂಗಾಣದ ರೈಸ್ ಮತ್ತು ನ್ಯೂಟ್ರಿಷನ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ ಇತ್ತೀಚೆಗೆ ಆರ್‌ಎನ್‌ಆರ್ –15048 ಎಂಬ ಭತ್ತದ ತಳಿ ಬಿಡುಗಡೆ ಮಾಡಿದೆ. ಇದಕ್ಕೆ “ತೆಲಂಗಾಣ ಸೋನಾ” ಎಂತಲೂ ಕರೆಯುತ್ತಾರೆ. ಈ ಭತ್ತವು ಕಡಿಮೆ ಗ್ಲೆಸಿಮಿಕ್ ಇಂಡೆಕ್ಸ್ (51.0ರಷ್ಟು) ಹೊಂದಿರುವುದರಿಂದ ಇದಕ್ಕೆ `ಡಯಾಫಿಟ್ ಪ್ಯಾಡಿ’ ಎಂತಲೂ ಕರೆಯುತ್ತಾರೆ. ಇದೀಗ ವಾಲ್ಮಿಯಲ್ಲಿ ಈ ಭತ್ತದ ತಳಿಯನ್ನು ಯಶಸ್ವಿಯಾಗಿ ಬೆಳೆದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸೇರಿದಂತೆ ರಾಜ್ಯದಲ್ಲಿ ಬತ್ತ ಬೆಳೆಯುವ ರೈತರಿಗೆ ಕ್ಷೇತ್ರೋತ್ಸವದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.

ಕಡಿಮೆ ಗ್ಲೆಸಿಮಿಕ್‌ ಸೂಚ್ಯಂಕ ಹೊಂದಿರುವುದರಿಂದ ಇದು ಸಕ್ಕರೆ ಕಾಯಿಲೆ ಹೊಂದಿರುವವರಿಗೂ ಉಪಯುಕ್ತವಾಗಿದೆ. ಈ ತಳಿಯು ಸೋನಾ ಮಸೂರಿ ಹಾಗೆಯೇ ಸೂಪರ್ ಫೈನ್ ಭತ್ತವಾಗಿದ್ದು, ಬೆಂಕಿ ರೋಗ ಮತ್ತು ಶೀತ್ ಬ್ಲೆಟ್ ರೋಗಕ್ಕೆ ನಿರೋಧಕತೆ ಹೊಂದಿದೆ ಎಂದು ವಾಲ್ಮಿ ನಿರ್ದೇಶಕ ಬಸವರಾಜ ಬಂಡಿವಡ್ಡರ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಈ ಡಯಾಬಿಟೀಸ್‌ ಔಷಧಿ ತಗೊಂಡ್ರೆ ಶುಗರ್‌ ಲೆವೆಲ್‌ ಜತೆಗೆ ತೂಕನೂ ಇಳಿಸ್ಬೋದು!

click me!