ಮೀನಾ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ಪ್ರಾಸೀಕ್ಯೂಟರ್ ನೇಮಕ: ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ ಪರಮೇಶ್ವರ್

By Govindaraj S  |  First Published May 16, 2024, 7:44 PM IST

ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿಗೆಯಲ್ಲಿ ನಡೆದ ಅಪ್ರಾಪ್ತ ಪಾಲಕಿ ಮೀನಾ ಹತ್ಯೆ ಪ್ರಕರಣದ ವಿಚಾರಣೆಗಾಗಿ ಹಾಗೂ ಶೀಘ್ರ ವಿಚಾರಣೆಗಾಗಿ ವಿಶೇಷ ಪ್ರಾಸೀಕ್ಯೂಟರ್ ನೇಮಕ ಮಾಡಲಾಗುವುದು ಎಂದಿದ್ದಾರೆ. 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮೇ 16): ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿಗೆಯಲ್ಲಿ ನಡೆದ ಅಪ್ರಾಪ್ತ ಪಾಲಕಿ ಮೀನಾ ಹತ್ಯೆ ಪ್ರಕರಣದ ವಿಚಾರಣೆಗಾಗಿ ಹಾಗೂ ಶೀಘ್ರ ವಿಚಾರಣೆಗಾಗಿ ವಿಶೇಷ ಪ್ರಾಸೀಕ್ಯೂಟರ್ ನೇಮಕ ಮಾಡಲಾಗುವುದು ಎಂದಿದ್ದಾರೆ. ಬಾಲಕಿ ಹತ್ಯೆಯನ್ನು ಸಹಿಸಲು ಸಾಧ್ಯವಿಲ್ಲ. ಮನುಷ್ಯರು ಯಾರೂ ಕೂಡ ಈ ಕೊಲೆಯನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಸರ್ಕಾರ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಆ ಮೂಲಕ ಮೀನಾ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ ಎಂದಿದ್ದಾರೆ. ಇನ್ನು ಚುನಾವಣೆ ಕಳೆದ ಬಳಿಕ ಕುಟುಂಬಕ್ಕೆ ಸೂಕ್ತ ಪರಿಹಾರದ ಬಗ್ಗೆ ಚರ್ಚೆಲಾಗುವುದು ಎಂದಿರುವ ಅವರು, ವೈಯಕ್ತಿಕವಾಗಿ ಪರಿಹಾರ ವಿತರಣೆ ಮಾಡಿದರು. 

Tap to resize

Latest Videos

ಕುಟುಂಬ ಆರ್ಥಿಕವಾಗಿ ದುರ್ಬಲವಾಗಿದ್ದು ಸರ್ಕಾರ ಅವರಿಗೆ ನೆರವಾಗಲಿದೆ ಎಂದರು. ರಾಜ್ಯದ ಅಲ್ಲಲ್ಲಿ ಹೆಚ್ಚಾಗುತ್ತಿರುವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಜನ ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ಆದರೆ ಈ ಕೊಲೆಗಳು ಪೂರ್ವಯೋಜಿತ ಕೃತ್ಯಗಳಲ್ಲ. ಆ ಕ್ಷಣಕ್ಕೆ ಮಾಡಿದ ಕೃತ್ಯ ಎಂದು ಕಾಣುತ್ತಿದೆ. ಈ ಬಗ್ಗೆ ತನಿಖೆ ಆದ ಬಳಿಕ ಸತ್ಯಾಂಶ ಬಯಲಿಗೆ ಬರಲಿದೆ. ಅದಕ್ಕೂ ಮುಂಚೆ ಯಾವುದೇ ನಿರ್ಧಾರ ಮಾಡುವುದು ತಪ್ಪು ಎಂದಿದ್ದಾರೆ. ಪೊಲೀಸ್ ಇಲಾಖೆ ಸಮರ್ಥವಾಗಿದೆ ತನಿಖೆ ನಡೆಸುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ರಾಜ್ಯದಲ್ಲಿ ಎಷ್ಟೊಂದು ಕ್ರೈಂ ರೇಟ್ ಇತ್ತು ಎನ್ನುವುದು ಗೊತ್ತಾ. 

ಅವರ ಕಾಲದ ಅಂಕಿ ಅಂಶಗಳನ್ನು ಬಿಚ್ಚಿಡಲಾ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಜಗದೀಶ್ ಶೆಟ್ಟರ್ ಅವರ ವಿರುದ್ಧ ಗರಂ ಆದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ಅಧಿಕಾರಿಗಳ ಮೇಲೆ ಯಾವುದೇ ಹಿಡಿತವಿಲ್ಲ. ಕೊಲೆಯಂತಹ ಪ್ರಕರಣಗಳನ್ನು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಸಿಲ್ಲಿಯಾಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದ ಜಗದೀಶ್ ಶೆಟ್ಟರ್ ಅವರಿಗೆ ತಿರುಗೇಟು ನೀಡಿದರು. ಅವರ ಕಾಲದಲ್ಲಿ ಎಷ್ಟು ರೇಪ್ ಆಗಿದ್ದವು, ಎಷ್ಟು ಹತ್ಯೆಯಾಗಿದ್ದವು ಸುಲಿಗೆ ನಡೆದಿದ್ದವು, ಅವರು ಸಿಎಂ ಆಗಿದ್ದಾಗ ಎಷ್ಟು ಪ್ರಕರಣ ದಾಖಲಾಗಿವೆ. ಅವರ ಕಾಲದ ಅಂಕಿಅಂಶ ತೆಗೆದು ನೋಡಿದರೆ ಗೊತ್ತಾಗುತ್ತೆ. ಅವುಗಳನ್ನು ಬಿಚ್ಚಿಡಲಾ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಬಗ್ಗೆ ಅವರಿಂದ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ. 

Kodagu: ಮಹಿಳೆಯ ಕೊಂದಿದ್ದ ದಕ್ಷ ಹೆಸರಿನ ಒಂಟಿ ಸಲಗ ಸೆರೆ ಹಿಡಿದ ಅರಣ್ಯ ಇಲಾಖೆ!

ಜನರು ನಮಗೆ ಸರ್ಟಿಫಿಕೇಟ್ ಕೊಡ್ತಾರೆ ಎಂದು ಸಚಿವ ಪರಮೇಶ್ವರ್ ಹೇಳಿದರು. ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ವಿಚಾರದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ವಿಚಾರದಲ್ಲಿ ಮಾಧ್ಯಮದವರು ಪ್ರಶ್ನಿಸುತ್ತಿದ್ದ ವೇಳೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾಧ್ಯಮದವರೊಂದಿಗೆ ಸಿಡಿಮಿಡಿಗೊಂಡರು. ಎಸ್ಐಟಿ ತನಿಖೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಇಲ್ಲಿಯ ವಿಚಾರಗಳನ್ನು ಮಾತ್ರ ಕೇಳಿ ಎಂದ ಸಚಿವ ಪರಮೇಶ್ವರ್ ಅವರು ಅದಕ್ಕೆ ನಾನು ಉತ್ತರಿಸಲ್ಲ ಎಂದರು. ತಾವು ಗೃಹಸಚಿರಾಗಿದ್ದು ಇದಕ್ಕೆ ಪ್ರತಿಕ್ರಿಯಿಸಬೇಕು ಎಂದ ಮಾಧ್ಯಮಗಳೊಂದಿಗೆ ಎಲ್ಲದಕ್ಕೂ ಪ್ರತಿಕ್ರಿಯಿಸಲೇಬೇಕು ಎಂದು ನೀವು ಒತ್ತಾಯ ಹಾಕಬೇಕಾಗಿಲ್ಲ ಎಂದರು. ನಾನು ಬಂದಿರುವ ಉದ್ದೇಶವೇ ಬೇರೆ, ಎಲ್ಲೆಡೆಯಲ್ಲಿಯೂ ನೀವು ಎಲ್ಲಾ ವಿಚಾರಗಳಿಗೆ ಪ್ರತಿಕ್ರಿಯಿಸಬೇಕು ಎಂದು ಒತ್ತಡ ಹೇರಬೇಕಾಗಿಲ್ಲ ಎಂದರು.

click me!