* ಚಿತ್ರದುರ್ಗದಲ್ಲಿ ಒಮ್ಮೆಲೆ ಕುಸಿದ ಕೋವಿಡ್ ಸೋಂಕಿತರ ಸಂಖ್ಯೆ
*ಹೊಸ ಆಶಾಭಾವನೆ ಮೂಡಿಸಿದ ಭಾನುವಾರದ ಕೊರೋನಾ ವರದಿ
* ಆತಂಕದಲ್ಲಿ ಜಿಲ್ಲೆಯ ಜನರಿಗೆ ಕೊಂಚ ರಿಲೀಫ್
ಚಿತ್ರದುರ್ಗ, (ಮೇ.09): ರಾಜ್ಯದಲ್ಲಿ ಕೊರೋನಾ ಸೋಂಕು ಹಾಗೂ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಮೀತಿ ಮೀರುತ್ತಿದೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೋನಾ ಅಟ್ಟಹಾಸನ ಮೆರೆಯುತ್ತಿದ್ದು, ಜನರು ಆತಂಕಗೊಂಡಿದ್ದಾರೆ.
ಇದರ ಮಧ್ಯೆ ಗುಡ್‌ನ್ಯೂಸ್ ಒಂದಿದೆ. ಏನಪ್ಪಾ ಅಂದ್ರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು (ಭಾನುವಾರ) ಕೊರೋನಾ ಸೋಂಕಿತರಿಗಿಂತ ಹುಷಾರ್ ಆಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಿದೆ. ಇದು ಹೊಸ ಆಶಾಭಾವನೆ ಮೂಡಿಸಿದೆ.
undefined
ರೋಗ ನಿರೋಧಕ ಶಕ್ತಿ ಬೇಕೆ? ಹಾಗಿದ್ದರೆ ಹೀಗೆ ಮಾಡಿ....!
ಹೌದು.... ಚಿತ್ರದುರ್ಗದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಒಮ್ಮೆಲೆ ಕುಸಿದಿದೆ. ಭಾನುವಾರದ ವರದಿಯಲ್ಲಿ 73 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ರೆ, ಮೂರು ಸಾವನ್ನಪ್ಪಿದ್ದಾರೆ. ಇನ್ನು 107 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಂತಸವನ್ನುಂಟು ಮಾಡಿದೆ.
ಇನ್ನೂ ಮೂರನೇ ಅಲೆ ಬರುತ್ತೆ ಅಂತೆಲ್ಲಾ ಸುದ್ದಿಗಳು ಕೇಳಿಬರುತ್ತಿವೆ. ಇದರ ಮಧ್ಯೆ ಚಿತ್ರದುರ್ಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕುಸಿದಿರುವುದು ಒಳ್ಳೆ ಬೆಳವಣಿಗೆ.
ಹೀಗೆ ಈ ಜಿಲ್ಲೆಯ ಮಾದರಿಯಲ್ಲಿ ಇತರೆ ಜಿಲ್ಲೆಗಳಲ್ಲೂ ಅನುಸರಿಸಿದ್ರೆ, ಮಹಾಮಾರಿಯನ್ನು ಆದಷ್ಟೂ ಬೇಗ ಕಟ್ಟಿಹಾಕಲು ಸಾಧ್ಯವಾಗಬಹುದು.
ಕೊರೋನಾವನ್ನು ಕಟ್ಟಿಹಾಕಬೇಕೆಂದರೆ ಜನರು ಭಯವಿಲ್ಲದೇ ಧೈರ್ಯದಿಂದ ಮನೆಯಲ್ಲೇ ಇದ್ದರೇ ಸಾಕು. ಸೋಂಕು ಹರಡುವುದನ್ನು ತಡೆಯಬಹುದು.