ಶಿವಮೊಗ್ಗ ಹಾಗೂ ಬೆಂಗಳೂರು ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್. ಜನಶತಾಬ್ದಿ ಹಾಗೂ ಮೈಸೂರು ರೈಲ್ವೆ ಸೇವೆಯಲ್ಲಾಗಿದೆ ಅನುಕೂಲಕರ ಬದಲಾವಣೆ. ಏನದು..?
ಶಿವಮೊಗ್ಗ (ಜ.23): ಇನ್ನು ಮುಂದೆ ಶಿವಮೊಗ್ಗದಿಂದ ಮೈಸೂರಿಗೆ ಹೊರಡುವ ರಾತ್ರಿ ರೈಲು ಬೆಳಗ್ಗೆ 5 ಗಂಟೆಗೆ ಬೆಂಗಳೂರು ತಲುಪುತ್ತದೆ ಹಾಗೂ ಜನಶತಾಬ್ದಿ ರೈಲು ಮೆಜೆಸ್ಟಿಕ್‌ನಿಂದ ಹೊರಡುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಿಂದ ಮೈಸೂರಿಗೆ ತೆರಳುವ ರಾತ್ರಿ ರೈಲು ಬೆಂಗಳೂರನ್ನು ಪ್ರತಿನಿತ್ಯ ಬೆಳಗಿನ ಜಾವ 3.50, 4ಗಂಟೆಗೆ ತಲುಪುತ್ತಿದ್ದರಿಂದ ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆಯನ್ನು ತಪ್ಪಿಸುವ ಸಲುವಾಗಿ ಬೆಳಗ್ಗೆ 5 ಗಂಟೆಗೆ ತಲುಪುವಂತೆ ಮಾಡಲು ರೈಲ್ವೆ ಇಲಾಖೆಗೆ ಒತ್ತಾಯಿಸಿದ್ದರ ಫಲವಾಗಿ ಇನ್ನು ಮುಂದೆ ಪ್ರತಿ ದಿನ ಬೆಳಗ್ಗೆ 5ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್ ತಲುಪಲಿದೆ ಎಂದು ತಿಳಿಸಿದ್ದಾರೆ.
ಬೆಂಗ್ಳೂರು ಸಬರ್ಬನ್ ರೈಲು ಯೋಜನೆ: ಮಾರ್ಗ ನಿರ್ಮಾಣ ಅಂತಿಮ ...
ಅಲ್ಲದೆ, ಪ್ರತಿನಿತ್ಯ ಯಶವಂತಪುರದಿಂದ ಹೊರಟು ಶಿವಮೊಗ್ಗ ಹಾಗೂ ಶಿವಮೊಗ್ಗದಿಂದ ಹೊರಟು ಯಶವಂತಪುರದವರೆಗೆ ಮಾತ್ರ ಚಲಿಸುತ್ತಿದ್ದ ಜನಶತಾಬ್ದಿ ರೈಲಿನ ಸೇವೆಯನ್ನು ಮೆಜೆಸ್ಟಿಕ್‌ವರೆಗೆ ವಿಸ್ತರಿಸುವಂತೆ ರೈಲ್ವೆ ಇಲಾಖೆಗೆ ಒತ್ತಾಯಿಸುತ್ತಿದ್ದರ ಫಲವಾಗಿ ಇನ್ನು ಮುಂದೆ ಜನಶತಾಬ್ದಿ ರೈಲು ಪ್ರತಿದಿನ ಮೆಜೆಸ್ಟಿಕ್ ನಿಂದ ಹೊರಡಲಿದೆ ಹಾಗೂ ಶಿವಮೊಗ್ಗದಿಂದ ತೆರಳುವ ಜನಶತಾಬ್ದಿ ರೈಲು ಮೆಜೆಸ್ಟಿಕ್‌ವರೆಗೆ ಪ್ರಯಾಣಿಸಲಿದೆ. ಈ ಎರಡೂ ರೈಲುಗಳ ಸೇವೆಯನ್ನು ಪ್ರಯಾಣಿಕರ ಅನುಕೂಲಕ್ಕಾಗಿ ವಿಸ್ತರಿಸಿಕೊಟ್ಟರೈಲ್ವೆ ಜನರಲ್ ಮ್ಯಾನೇಜರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೂ ಹಲವಾರು ರೈಲ್ವೆ ಸೇವೆಗಳ ಅವಶ್ಯಕತೆ ಇದ್ದು, ಇವುಗಳನ್ನು ಆದಷ್ಟುತ್ವರಿತವಾಗಿ ಕಾರ್ಯಗತಗೊಳಿಸಲು ರೈಲ್ವೆ ಜನರಲ್ ಮ್ಯಾನೇಜರ್ ಅವರಲ್ಲಿ ವಿನಂತಿಸಿದ್ದಾರೆ.
ಶಿವಮೊಗ್ಗ-ರೆನಿಗುಂಟಾ ತತ್ಕಾಲ್ ವಿಶೇಷ ರೈಲು: ಈಗಿರುವ ಸಮಯದಂತೆ ವಾರದ ಮಧ್ಯದ ದಿನ ಅಂದರೆ ಬುಧವಾರ ತಿರುಪತಿಗೆ ತಲುಪಿ, ಅದೇ ದಿನ ರಾತ್ರಿ ಅಲ್ಲಿಂದ ವಾಪಸ್ಸು ಹೊರಟು ಮಾರನೇ ದಿನ ಶಿವಮೊಗ್ಗ ಬರುತ್ತಿದೆ. ತಿರುಪತಿಗೆ ಹೋಗುವ ಭಕ್ತರಿಗೆ ಈ ರೈಲಿನ ಸಮಯವು ಅನಾನುಕೂಲವಾಗಿದೆ. ಆದ್ದರಿಂದ ಇದರ ಸಮಯವನ್ನು ಬುಧವಾರದ ಬದಲಿಗೆ ಪ್ರತಿ ಶುಕ್ರವಾರ ಹೊರಟು ಶನಿವಾರ ತಿರುಪತಿ ತಲುಪಿ, ಅದೇ ಶನಿವಾರ ರಾತ್ರಿ ಅಲ್ಲಿಂದ ವಾಪಸ್ ಹೊರಟು ಭಾನುವಾರ ಶಿವಮೊಗ್ಗವನ್ನು ತಲುಪುವಂತಾಗಬೇಕು.
KRS ರೈಲ್ವೆ ನಿಲ್ದಾಣದಿಂದ ಏರ್‌ಪೋರ್ಟ್‌ಗೆ ರೈಲು..! ಇಲ್ನೋಡಿ ಫೋಟೋಸ್ ...
ಶಿವಮೊಗ್ಗ-ಚೆನ್ನೈ-ಶಿವಮೊಗ್ಗ ರೈಲು ಯಶವಂತಪುರವನ್ನು ಬಿಟ್ಟು ಹೋಗುತ್ತಿದೆ. ಬಯ್ಯಪ್ಪನಹಳ್ಳಿ ಟರ್ಮಿನಲ್ ಪ್ರಾರಂಭವಾಗುತ್ತಿರುವುದರಿಂದ, ಈ ರೈಲು ಯಶವಂತಪುರ ನಿಲ್ದಾಣದ ಮೂಲಕ ಹೋಗುವಂತೆ ಮಾಡಬೇಕು. ಕೋವಿಡ್ ಅವಧಿಯಲ್ಲಿ ಈ ಎರಡು ರೈಲುಗಳನ್ನು ನಿಲ್ಲಿಸಲಾಯಿತು. ಸಾಮಾನ್ಯ ಸ್ಥಿತಿಗೆ ಬರುತ್ತಿರುವುದರಿಂದ, ಈ ರೈಲುಗಳನ್ನು ಶೀಘ್ರವಾಗಿ ಪುನಃ ಜಾರಿಗೊಳಿಸಬೇಕು.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ, ಬೆಂಗಳೂರು-ತಾಳಗುಪ್ಪ ಇಂಟರ್‌ಸಿಟಿ, ಬೆಂಗಳೂರು-ಶಿವಮೊಗ್ಗ ಜನಶತಬ್ದಿ ಎಕ್ಸ್‌ಪ್ರೆಸ್ ಮತ್ತು ಮೈಸೂರು-ತಾಳಗುಪ್ಪ ರಾತ್ರಿಯ ಎಕ್ಸ್‌ಪ್ರೆಸ್ ಮೂರು ರೈಲು ಸೇವೆಗಳಿದ್ದು, ಈ ಸೇವೆಗಳು ಸಾರ್ವಜನಿಕರಿಗೆ ಹೆಚ್ಚಿನ ಸಹಾಯವನ್ನು ನೀಡುತ್ತಿದೆ. ಆದಾಗ್ಯೂ, ಕೋವಿಡ್ ಕಾರಣದಿಂದ ಈ ರೈಲುಗಳಲ್ಲಿ ಕೇವಲ ರಿಸವ್‌ರ್ ಬೋಗಿಗಳು ಮತ್ತು ರಿಜವ್‌ರ್ ಟಿಕೆಟ್ ಮಾತ್ರ ನೀಡಲಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಈ ವಿಶೇಷ ರೈಲುಗಳಲ್ಲಿ ಕೂಡಲೇ ಅನ್ ರಿಸವ್‌ರ್ ಬೋಗಿ ಮತ್ತು ಟಿಕೆಟ್ ನೀಡುವ ವ್ಯವಸ್ಥೆ ಪ್ರಾರಂಭಿಸುವಂತೆ ಕೋರಿದೆ.
ಅರಸಾಳು ರೈಲ್ವೆ ನಿಲ್ದಾಣವನ್ನು 24 ಕೋಚುಗಳು ನಿಲ್ಲುವ ಸಲುವಾಗಿ ಫ್ಲಾಟ್ ಫಾರಂಗಳನ್ನು ವಿಸ್ತರಿಸಲಾಗಿದ್ದು, ಮಾಲ್ಗುಡಿ ಡೇಸ್ ನೆನಪಿನಾರ್ಥವಾಗಿ ಅರಸಾಳು ರೈಲ್ವೆ ನಿಲ್ದಾಣವನ್ನು ಅಭಿವೃದ್ದಿಪಡಿಸಲಾಗಿರುವುದರಿಂದ, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹುಂಚದಲ್ಲಿರುವ ಜೈನರ ಪ್ರಸಿದ್ಧ ಪದ್ಮಾವತಿ ದೇವಾಲಯಕ್ಕೆ ಅರಸಾಳು ರೈಲ್ವೆ ನಿಲ್ದಾಣ ಅತ್ಯಂತ ಸಮೀಪದಲ್ಲಿರುವುದರಿಂದ, ರಾಷ್ಟಾ್ರದ್ಯಂತ ಜೈನ ಭಕ್ತಾದಿಗಳು ಹುಂಚ ದೇವಲಾಯಕ್ಕೆ ಬರುವುದರಿಂದ, ಎಲ್ಲ ಎಕ್ಸ್‌ಪ್ರೆಸ್ ರೈಲುಗಳಿಗೆ ಇಲ್ಲಿ ನಿಲುಗಡೆ ಮಾಡುವಂತೆ ಕೋರಿದೆ.
ಬೆಂಗಳೂರು ಮತ್ತು ಮೈಸೂರು ನಡುವೆ ಇದಲ್ಲದೆ ಡೆಮು, ಮೆಮು ಪ್ಯಾಸೆಂಜರ್ ರೈಲು ಸೇವೆಗಳನ್ನು ನೀಡಿರುವಂತೆಯೇ ಬೆಂಗಳೂರು ಮತ್ತು ಶಿವಮೊಗ್ಗ ಪಟ್ಟಣದ ನಡುವೆ ಈ ರೈಲುಗಳ ಸೇವೆಗಳನ್ನು ಪ್ರಾರಂಭಿಸಲು ಸೇರಿದಂತೆ ವಿವಿಧ ರೈಲುಗಳ ಅವಶ್ಯಕವಿದ್ದು ಕಾರ್ಯಗತಗೊಳಿಸುವಂತೆ ವಿನಂತಿಸಿದ್ದಾರೆ.