ಹದಗೆಟ್ಟ ರಸ್ತೆಗೆ ಡಿಸಿಎಂ ಫುಲ್‌ ಗರಂ: ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕಾರಜೋಳ

By Suvarna NewsFirst Published Jan 23, 2021, 2:39 PM IST
Highlights

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಹಾಗೂ ತೊದಲಬಾಗಿ ರಸ್ತೆ ಬಳಿ ನಡೆದ ಘಟನೆ| ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಕಾರ್ಯಕ್ರಮಕ್ಕೆ ಸಚಿವ ಸುರೇಶ್ ಕುಮಾರ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಡಿಸಿಎಂ ಗೋವಿಂದ ಕಾರಜೋಳ| 

ಬಾಗಲಕೋಟೆ(ಜ.23): ಹದಗೆಟ್ಟ ರಸ್ತೆಯನ್ನ ಕಂಡು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಗರಂ ಆಗಿ ಮಾರ್ಗ ಮಧ್ಯೆಯೇ ಕಾರು ನಿಲ್ಲಿಸಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಹಾಗೂ ತೊದಲಬಾಗಿ ರಸ್ತೆ ಬಳಿ ಇಂದು(ಶನಿವಾರ) ನಡೆದಿದೆ. 

ರಸ್ತೆ ಹದಗೆಟ್ಟಿದ್ದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಜಮಖಂಡಿ ವಿಭಾಗದ ಎಇಇ ಪಾಂಡುರಂಗ ಅವರನ್ನ ಸ್ಥಳಕ್ಕೆ ಕರೆದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 

SSLC, PUC ಪರೀಕ್ಷೆ ಯಾವಾಗ? ದಿನಾಂಕ ಘೋಷಿಸಿದ ಸಚಿವ ಸುರೇಶ್ ಕುಮಾರ್

ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಕಾರ್ಯಕ್ರಮಕ್ಕೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹದಗೆಟ್ಟ ರಸ್ತೆಯನ್ನ ಕಂಡು ಗರಂ ಆದ ಕಾರಜೋಳ ನೋಡಿದ್ರಾ ಇಷ್ಟೊತ್ತು ಗಾಡಿ ಹೇಗೆ ಬಂತು, ಬರಿ ಬೋಗಸ್ ರಿಪೋರ್ಟ್ ಕೊಡ್ತಿರಿ ನೀವು, ರಿಕನ್ಟ್ರಕ್ಷನ್‌ ಟೆಂಡರ್ ಮಾಡಿದಿರಾ?, ಮೊದಲು ರಸ್ತೆ ಪ್ಯಾಚ್ ವರ್ಕ್ ಮಾಡಿ, ಪ್ಲಡ್ ಡ್ಯಾಮೆಜ್ ಒಳಗೆ ರಸ್ತೆ  ಕೆಲಸ ಮಾಡಬೇಕು. 100 ಪ್ರತಿಶತ ಕೆಲಸ ಆಗಬೇಕು, ನಾ ಮತ್ತೆ ಬರ್ತೀನಿ ಎಂದು ಅಧಿಕಾರಿಗೆ ಕಾರಜೋಳ ವಾರ್ನ್ ಮಾಡಿದ್ದಾರೆ. 
 

click me!