Bengaluru: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಪ್ರಿ-ಫಿಕ್ಸೆಡ್‌ ಆಟೋ ಕೌಂಟರ್‌ ಆರಂಭ

By Sathish Kumar KHFirst Published Jan 4, 2023, 7:39 PM IST
Highlights

ಮೆಟ್ರೋ ನಿಲ್ದಾಣದಿಂದ ಮನೆಗೆ ಹೋಗುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೇಲ್‌ ಕಾರ್ಪೋರೇಶನ್‌ ಲಿ. (ಬಿಎಂಆರ್‌ಸಿಎಲ್‌) ಸಿಹಿ ಸುದ್ದಿಯನ್ನು ನೀಡಿದೆ. ನಗರದ ಕೆಲವು ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್‌ ಆಟೋ ಕೌಂಟರ್‌ಗಳನ್ನು ಆರಂಭಿಸಿದೆ.

ಬೆಂಗಳೂರು (ಜ.04): ಕಚೇರಿ ಅಥವಾ ಇನ್ಯಾವುದೇ ಕೆಲಸ ಕಾರ್ಯಗಳಿಗೆ ಹೋಗಿ ವಾಪಸ್‌ ಮನೆಗೆ ಹೋಗುವಾಗ ಟ್ರಾಫಿಕ್‌ ರಹಿತ ಸಂಚಾರಕ್ಕೆ ಪ್ರಸಿದ್ಧವಾದ ಮೆಟ್ರೋ ರೈಲಿನಲ್ಲಿ ಬರುತ್ತೇವೆ. ಇನ್ನು ಮೆಟ್ರೋ ನಿಲ್ದಾಣದಿಂದ ಮನೆಗೆ ಹೋಗುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೇಲ್‌ ಕಾರ್ಪೋರೇಶನ್‌ ಲಿ. (ಬಿಎಂಆರ್‌ಸಿಎಲ್‌) ಸಿಹಿ ಸುದ್ದಿಯನ್ನು ನೀಡಿದೆ. ನಗರದ ಕೆಲವು ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್‌ ಆಟೋ ಕೌಂಟರ್‌ಗಳನ್ನು ಆರಂಭಿಸಿದೆ.

ಬೆಂಗಳೂರಿನ ಕೆಲವು ಜನನಿಬಿಡ ಮೆಟ್ರೋ ನಿಲ್ದಾಣಗಳಲ್ಲಿ ಪೂರ್ವ ನಿಶ್ಚಿತ ಆಟೋರಿಕ್ಷಾ ದರದ ಕೌಂಟರ್‌ಗಳನ್ನು ಬಿಎಂಆರ್‌ಸಿಎಲ್ ಮತ್ತು ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಆರಂಭಿಸಲಾಗಿದೆ. ಇದರಿಂದ ಮೆಟ್ರೋ ರೈಲು ಇಳಿದ ನಂತರ ಮನೆಯಬರೆಗೆ ಹೇಗೆ ಹೋಗಬೇಕು ಎಂದು ಚಿಂತೆ ಮಾಡುತ್ತಿದ್ದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಬೆಂಗಳೂರು ಸಂಚಾರ ಪೊಲೀಸ್ ಹಾಗೂ ಬಿಎಂಆರ್ಸಿಎಲ್ ಸಹಯೋಗದೊಂದಿಗೆ ಪೂರ್ವ ನಿಶ್ಚಿತ ಆಟೋ ದರ ಕೌಂಟರ್ ಸ್ಥಾಪನೆ ಮಾಡಲಾಗಿದೆ. ಇಂದು ಎಂ.ಜಿ.ರಸ್ತೆ ಮತ್ತು ಕಬ್ಬನ್ ಪಾರ್ಕ್ ನಲ್ಲಿ ಆಟೋ ರಿಕ್ಷಾ ಕೌಂಟರ್ ಪ್ರಾರಂಭ ಮಾಡಲಾಗಿದೆ. ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಚಾಲನೆ ನೀಡಿದರು.

Bengaluru : ಮಾರುಕಟ್ಟೆ, ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಕೇಂದ್ರ ಆರಂಭ

ಆರಂಭದ ಎರಡು ಕಿಮೀಗೆ 30 ರೂ. ದರ: ಮುಂದಿನ ದಿನಗಳಲ್ಲಿ ಬೈಯಪ್ಪನಹಳ್ಳಿ, ಬನಶಂಕರಿ ಮತ್ತು ನಾಗಸಂದ್ರ ನಿಲ್ದಾಣಗಳಲ್ಲಿ ಕೌಂಟರ್  ಸ್ಥಾಪನೆ ಮಾಡಲಾಗುತ್ತದೆ. ಬೆಳಿಗ್ಗೆ 7 ಗಂಟೆಯಿಂದ ಮಧ್ಯರಾತ್ರಿ 12.30 ವರೆಗೆ ಸೇವೆ ಸಲ್ಲಿಸಲಿರುವ ಪೂರ್ವ ನಿಶ್ಚಿತ ಆಟೋರಿಕ್ಷಾ ಕೌಂಟರ್ ಗಳು ಪ್ರಯಾಣಿಕರ ಸೇವೆಗಾಗಿ ಕಾರ್ಯ ನಿರ್ವಹಿಸಲಿವೆ. ಸರ್ಕಾರ ನಿಗದಿ ಪಡಿಸಿರುವ ಪ್ರತಿ 2 ಕಿ.ಮೀವರೆಗೆ 30 ರೂಪಾಯಿ, ಹಾಗೂ ನಂತರದ ಪ್ರತಿ ಎರಡು ಕಿ.ಮೀಟರ್‌ಗೆ 15 ರೂಪಾಯಿ ದರವನ್ನು ವಿಧಿಸಲಾಗುವುದು. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಒಂದೂವರೆಪಟ್ಟು ಹೆಚ್ಚಿಗೆ ದರವನ್ನು ಆಟೋಗಳು ಪಡೆಯಲಿವೆ. 

ಗಮ್ಯಸ್ಥಾನ ತಿಳಿಸಿದರೆ ಸಾಕು: ಆಟೋದಲ್ಲಿ ಸಂಚರಿಸಲು ಪ್ರಯಾಣಿಕರು ನಿಲ್ದಾಣದಲ್ಲಿ ಗಮ್ಯಸ್ಥಾನ ತಿಳಿಸಬೇಕು. ಚಾಲಕನ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಟೋ ನಂಬರ್, ಪ್ರಯಾಣಿಕರು ತಲುಪಬೇಕಾದ ವಿಳಾಸ, ಪ್ರಯಾಣಿಕರ ಮೊಬೈಲ್ ಸಂಖ್ಯೆ, ಪ್ರಯಾಣಿಕರು ಪಾವತಿಸಬೇಕಾದ ಮೊತ್ತ ಸೇರಿದಂತೆ ಕೌಂಟರ್ ನಲ್ಲಿ ಪ್ರಯಾಣ ಚೀಟಿ ನೀಡಲಾಗುವುದು. ಇದಕ್ಕೆ ಪ್ರತಿಯಾಗಿ ಪ್ರಯಾಣಿಕರು ಕೌಂಟರ್ ಗೆ ಸೇವಾ ಶುಲ್ಕವಾಗಿ 2 ರೂಪಾಯಿ ಪಾವತಿಸಬೇಕು. ಇದಾದ ನಂತರ ನೀವು ನಿಮ್ಮ ಮನೆಗೆ ಸುಲಭವಾಗಿ, ಸುರಕ್ಷಿತವಾಗಿ ಮತ್ತು ಕಡಿಮೆ ದರದಲ್ಲಿ ತಲುಪಬಹುದು.

ಸಂಚಾರಿ ಪೊಲೀಸರಿಂದ ಪ್ರಸ್ತಾವನೆ: ಬೆಂಗಳೂರಿನಿಂದ ಊರಿಗೆ ಹೋಗುವವರು ಮತ್ತು ಊರಿನಿಂದ ಬರುವವರಿಗೆ ಹಾಗೂ ಕಚೇರಿ ಕೆಲಸಗಳಿಗೆ ಹೋಗಿ -ಬರುವವರಿಗೆ ರೈಲು, ಬಸ್ಸು, ಮೆಟ್ರೋ ಮತ್ತು ಬಿಎಂಟಿಸಿ ಬಸ್‌ ಇಳಿದ ನಂತರ ತಮ್ಮ ಮನೆಗಳಿಗೆ ತಲುಪಲು (ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ) ಆಟೋಗಳ ಅಗತ್ಯವಿರುತ್ತದೆ. ಹೀಗಾಗಿ, ರಾಜಧಾನಿಯ ಸಂಚಾರ ಪೊಲೀಸ್ ಇಲಾಖೆಯು ಆಟೋ ಕೇಂದ್ರಗಳನ್ನು ತೆರೆಯಲು ಬಿಎಂಆರ್‌ಸಿಎಲ್‌ ಮುಖ್ಯಸ್ಥರೊಂದಿಗೆ ಚರ್ಚೆ ಮಾಡಿತ್ತು. ಇದಾದ ನಂತರ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, ಚರ್ಚೆಯಾದ ಒಂದು ತಿಂಗಳ ಅವಧಿಯಲ್ಲಿ ಆಟೋ ಕೌಂಟರ್‌ಗಳನ್ನುಯ ಆರಂಭಿಸಲಾಗಿದೆ.

Namma Metro: ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ 1.70 ಕೋಟಿ ಆದಾಯ: ಹಿಂದಿನ ದಾಖಲೆ ಉಡೀಸ್

ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಗೆ ಅನುಕೂಲ: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಟ್ರಾಫಿಕ್‌, ಟ್ರಾಫಿಕ್‌, ಟ್ರಾಫಿಕ್. ಬೆಳಗ್ಗೆ ಮತ್ತು ಸಂಜೆ ವೇಳೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ಕಿವಿಗಡಚಿಕ್ಕುವಂತೆ ವಾಹನಗಳ ಸದ್ದು ಕೇಳಿಬರುತ್ತದೆ. ಇಷ್ಟು ವಾಹನಗಳಿದ್ದರೂ ನಮ್ಮ ಮನೆ ಅಥವಾ ವಾಸದ ಸ್ಥಳಗಳಿಗೆ ತಲುಪಲು, ಮಾರುಕಟ್ಟೆ ಪ್ರದೇಶಗಳಲ್ಲಿ ಹೋಗಲು ಆಟೋಗಳ ಸೇವೆ ತೀವ್ರ ಅಗತ್ಯವಾಗಿದೆ. ಆದರೆ, ಆಟೋಗಳ ಸೇವೆ ವಿಚಾರ, ದರಗಳ ಹೊಂದಾಣಿಕೆ, ಕೆಲವು ಕಂಪನಿಗಳಿಂದ ಆಟೋ ಸೇವೆಗಳನ್ನು ಒದಗಿಸುವುದು ಸೇರಿ ಇತ್ಯಾದಿ ಸೌಲಭ್ಯಗಳ ಬಗ್ಗೆ ಸಮಸ್ಯೆಗಳು ಎದುರಾಗಿದ್ದವು. ಇತ್ತೀಚೆಗೆ ಸರ್ವಿಸ್‌ ಪ್ರೊವೈಡರ್‌ ಕಂಪನಿಗಳು ಗ್ರಾಹಕರಿಗೆ ವಿಧಿಸುವ ದರ ನಿರ್ಧಾರದ ಬಗ್ಗೆಯೂ ಇತ್ತೀಚೆಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡು ದರ ನಿಗದಿ ಮಾಡಿದೆ. 

click me!