ನಗರಪಾಲಿಕೆಯು ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು 10 ಸಾವಿರ ರೂ.ಗಳಿಂದ 25 ಸಾವಿರ ರೂ.ಗಳಿಗೆ ಏರಿಸುವುದಾಗಿ ಮೇಯರ್ ಶಿವಕುಮಾರ್ ಘೋಷಿಸಿದರು.
ಮೈಸೂರು : ನಗರಪಾಲಿಕೆಯು ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು 10 ಸಾವಿರ ರೂ.ಗಳಿಂದ 25 ಸಾವಿರ ರೂ.ಗಳಿಗೆ ಏರಿಸುವುದಾಗಿ ಮೇಯರ್ ಶಿವಕುಮಾರ್ ಘೋಷಿಸಿದರು.
ರಂಗಾನಂದ ಕಲಾ ಸಂಘದ 40ನೇ ವಾರ್ಷಿಕೋತ್ಸವ ಅಂಗವಾಗಿ ಕಲಾಮಂದಿರದಲ್ಲಿ ಶನಿವಾರ ನಡೆದ ಕುಮಾರರಾಮ ಐತಿಹಾಸಿಕ ನಾಟಕಕ್ಕೆ ಚಾಲನೆ ನೀಡಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ನಾನು ನಗರಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷನಾಗಿದ್ದಾಗ ಬಜೆಟ್‌ನಲ್ಲಿ ಕಲಾವಿದರಿಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡುವ ಯೋಜನೆ ಆರಂಭಿಸಿದೆ. ಹಲವಾರು ಮಂದಿ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಈಗ ಮೇಯರ್ ಆಗಿದ್ದೇನೆ. ಕಲಾವಿದರ ಆರ್ಥಿಕ ದುಸ್ಥಿತಿಯನ್ನು ಕಂಡು ಈ ವರ್ಷದಿಂದ ಇದನ್ನು 25 ಸಾವಿರ ರೂ.ಗೆ ಏರಿಸಲಾಗುವುದು ಎಂದರು.
undefined
ರಾಜಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿ ಕಲೆಗೆ ಪ್ರೋತ್ಸಾಹ ಸಿಗುತ್ತಿದೆ. ರಂಗಭೂಮಿ ಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ದಾಟಿಸಬೇಕಾದ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಇತಿಹಾಸ ಗೊತ್ತಿಲ್ಲದವನು ಇತಿಹಾಸ ಸೃಷ್ಟಿಸಲಾರ. ಹೀಗಾಗಿ ಐತಿಹಾಸಿಕವಾದ ಕುಮಾರರಾಮ ನಾಟಕವನ್ನು ವೀಕ್ಷಿಸಿ, ಇತಿಹಾಸ ತಿಳಿಯಬೇಕು ಎಂದು ಅವರು ಸಲಹೆ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಟಿವಿ, ಮೊಬೈಲ್‌ಗಳ ಭರಾಟೆಯ ನಡುವೆ ನಾಟಕಗೆ ಪ್ರೋತ್ಸಾಹ ನೀಡಬೇಕು. ಮನುಷ್ಯನಿಗೆ ಒತ್ತಡದಿಂದ ಪಾರಾಗಲು ಮನರಂಜನೆ ಅವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾರಾಜ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಉದಯಶಂಕರ್ ಮಾತನಾಡಿ, ನಾಟಕ ಕಲೆಯ ಉಳಿವಿಗಾಗಿ ರಂಗಸ್ವಾಮಿಯವರು ಪ್ರತಿನಿತ್ಯ ಪ್ರಯತ್ನಿಸುತ್ತಾ ಬಂದಿದ್ದಾರೆ. ಇಂಥವರಿಗೆ ಪ್ರೋತ್ಸಾಹ ಅಗತ್ಯ ಎಂದರು.
ನಿವೃತ್ತ ದೈಹಿಕ ಶಿಕ್ಷಕ ಎನ್. ಜಿವೇಂದ್ರಕುಮಾರ್, ಅಂತಾರಾಷ್ಟ್ರೀಯ ಅಥ್ಲೆಟ್ ಎಂ. ಯೋಗೇಂದ್ರ ಹಾಗೂ ರಂಗಭೂಮಿ ಕಲಾವಿದ ಡಿ. ನಾಗೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು. ತಂಡದ ಮುಖ್ಯಸ್ಥರಾದ ರಂಗಸ್ವಾಮಿ ಸ್ವಾಗತಿಸಿದರು. ಶ್ರೇಯಸ್, ಶಿವಕುಮಾರ್ ಮೊದಲಾದವರು ಇದ್ದರು.
ನಂತರ ಕಲಾವಲ್ಲಭ ರಂಗಸ್ವಾಮಿ ಅವರ ನಿರ್ದೇಶನ, ಶ್ರೀ ರಾಜೇಶ್ವರಿ ವಸ್ತ್ರಾಲಂಕಾರದ ಬಿ.ಎಂ. ರಾಮಚಂದ್ರ ಅವರ ಸಹಕಾರದಿಂದ ಕುಮಾರರಾಮ- ಐತಿಹಾಸಿಕ ನಾಟಕ ಪ್ರದರ್ಶಿಸಲಾಯಿತು.
ಅದ್ಬುತ ಕಲಾವಿದ
ಕಾರವಾರ (ಜ.17): ಸಾಮಾನ್ಯವಾಗಿ ಪೈಂಟ್ ಬಳಸಿ ಅದ್ಭುತ ಚಿತ್ರಗಳನ್ನು ಬಿಡಿಸುವ ಕಲಾವಿದರನ್ನು ನಾವು ನೋಡಿದ್ದೇವೆ. ಆದರೆ, ರಂಗೋಲಿ ಪುಡಿಗಳನ್ನು ಬಳಸಿ ಅದ್ಭುತ ಚಿತ್ರಗಳನ್ನು ಬರೆಯುವ ಕಲಾವಿದನನ್ನು ನೋಡಿದ್ದೀರಾ? ಈ ಅದ್ಭುತ ಕಲಾವಿದನ ಹೆಸರು ಚಂದನ್ ದೇವಾಡಿಗ. ಕಾರವಾರದ ಬ್ರಾಹ್ಮಣಗಲ್ಲಿ ಬಳಿಯ ನಿವಾಸಿ. ಹೆಚ್ಚೇನು ತರಬೇತಿ ಪಡೆಯದ ಈತ ಚಿತ್ರಕಲೆ, ರಂಗೋಲಿ ಚಿತ್ತಾರ ಕಲಿತು ಸೆಲೆಬ್ರಿಟಿಗಳ ಗಮನವನ್ನೂ ಸೆಳೆದಿದ್ದಾನೆ. ಈತ ಮಾಡೋ ರಂಗೋಲಿ ಚಿತ್ರಗಳಂತೂ ಥೇಟ್ ಕ್ಯಾಮೆರಾದಲ್ಲಿ ಪ್ರಿಂಟ್ ತೆಗೆದಂತಿರುತ್ತವೆ. ಸದ್ಯ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಬ್ಯಾಚುಲರ್ ಇನ್ ವಿಶ್ಯುಲವ್ ಆರ್ಟ್ಸ್ ಕಲಿಯುತ್ತಿರುವ ಚಂದನ್‌ಗೆ ಸಣ್ಣ ವಯಸ್ಸಲ್ಲೇ ಕಲೆಯ ಮೇಲೆ ಅಪಾರ ಆಸಕ್ತಿ. ಡ್ರಾಯಿಂಗ್, ಪೈಂಟಿಂಗ್ ಮಾಡುತ್ತಾ ಚಿಕ್ಕ ವಯಸ್ಸಲ್ಲೇ ಪ್ರತಿಭೆ ತೋರಿದ್ದ ಚಂದನ್, ಕ್ರಮೇಣ ರಂಗೋಲಿ ಪುಡಿಯಲ್ಲಿ ಚಿತ್ರ ಮಾಡುವುದನ್ನು ಕಲಿತು ಈಗ ನೂರಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾನೆ.
ರಾಮಮಂದಿರ ಜೊತೆ ರಾಮ ರಾಜ್ಯ ನಿರ್ಮಾಣಕ್ಕೆ ಸಂಕಲ್ಪ, ಮೋದಿಗೆ ಪೇಜಾವರ ಶ್ರೀ ಸೂಚನೆ
ರಂಗೋಲಿ ಆರ್ಟ್ ಜೊತೆಗೆ ಆಕ್ರಿಲಿಕ್, ಆಯ್ಲ್ ಪೈಂಟಿಂಗ್, ಸ್ಪೀಡ್ ಪೈಂಟಿಂಗ್, ಮ್ಯೂರಲ್ ವಾಲ್ ಪೈಂಟಿಂಗ್ ಕೂಡಾ ಮಾಡುವ ಚಂದನ್ ಕೈಯಲ್ಲರಳಿದ ಚಿತ್ರಗಳು ಕಣ್ಮನ ಸೆಳೆಯುತ್ತವೆ. ಈತ ಇದ್ದಿಲಿನ ಪುಡಿಯಲ್ಲಿ ಬಿಡಿಸಿದ ರಂಗೋಲಿ ವಿಡಿಯೋಗಳನ್ನು ಬಾಲಿವುಡ್ ನಟರಾದ ಸಿದ್ದಾರ್ಥ್ ಮಲ್ಹೋತ್ರಾ, ಸೋನು ಸೂದ್ ಮೆಚ್ಚಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿ, ಚಂದನ್‌ನ ಕಲೆಗೆ ಪ್ರೋತ್ಸಾಹ ನೀಡಿದ್ದಾರೆ.
CHITRADURGA: ಪೋಟೋ ಸ್ಟುಡಿಯೋ ಮಾಲೀಕ ಬಸವರಾಜ್ ಕೊಲೆಗೆ ಕಾರಣವೇ ಸ್ವಂತ ಅಕ್ಕ!
ಪ್ರತಿಯೊಂದೆಡೆಯೂ ಹೊಸತನ್ನು ಕಲಿಯುವ ಈ ಯುವಕ ಚಂದನ್, ಯೂಟ್ಯೂಬ್‌ಗಳಲ್ಲಿ ದೊಡ್ಡ ದೊಡ್ಡ ಕಲಾವಿದರ ವಿಡಿಯೋಗಳನ್ನು ನೋಡಿಯೇ ಕಲಿತು ಈ ಮಟ್ಟಕ್ಕೆ ತಲುಪಿದ್ದಾನೆ. ಇನ್ನು ಕಾರವಾರದ ಮಾರುತಿ ಗಲ್ಲಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ರಂಗೋಲಿ ಜಾತ್ರೆಯಲ್ಲಿ ಚಂದನ್ ರಂಗೋಲಿ ಚಿತ್ರಗಳು ರಾರಾಜಿಸುತ್ತವೆ. ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದು ರಂಗೋಲಿ ಚಿತ್ರಗಳನ್ನು ನೋಡಿ ಆನಂದಿಸುತ್ತಾರಲ್ಲದೇ, ಫೋಟೊ, ಸೆಲ್ಪಿ ಕ್ಲಿಕ್ಕಿಸಿಕೊಂಡು ತೆರಳುತ್ತಾರೆ.