ಅಭಿವೃದ್ಧಿಯಾಗದೇ 3ನೇ ಸಲ ಕುಸಿದು ಬಿದ್ದ ಮಹಾಕೋಟೆ

Kannadaprabha News   | Asianet News
Published : Jul 21, 2021, 12:18 PM IST
ಅಭಿವೃದ್ಧಿಯಾಗದೇ 3ನೇ ಸಲ ಕುಸಿದು ಬಿದ್ದ ಮಹಾಕೋಟೆ

ಸಾರಾಂಶ

ಐತಿಹಾಸಿಕ ಹಿನ್ನೆಲೆ ಇರುವ ಬಾಗೇಪಲ್ಲಿ ತಾಲೂಕಿನ ಗೊಮ್ಮನಾಯಕನಪಾಳ್ಯದ ಕೋಟೆ ಮಳೆಗೆ 3ನೇ ಸಲ ಕೋಟೆಯ ಗೋಡೆ ಕುಸಿದು ಬಿದ್ದಿದೆ ನಿರ್ಮಿತಿ ಕೇಂದ್ರ ನಿರ್ವಹಿಸಿದ ಕಳಪೆ ಕಳಪೆ ಕಾಮಗಾರಿ  ಬಟಾಬಯಲು 

ಚಿಕ್ಕಬಳ್ಳಾಪುರ (ಜು.21):  ಜಿಲ್ಲೆಯ ಪ್ರವಾಸೋದ್ಯಮಕ್ಕೆ ವಿಶ್ವ ವಿಖ್ಯಾತ ನಂದಿಗಿರಿಧಾಮ ಬಿಟ್ಟರೆ ಒಂದು ರೀತಿ ಮುಕಟ ಪ್ರಾಯವಾಗಿರುವುದು ಐತಿಹಾಸಿಕ ಹಿನ್ನೆಲೆ ಇರುವ ಬಾಗೇಪಲ್ಲಿ ತಾಲೂಕಿನ ಗೊಮ್ಮನಾಯಕನಪಾಳ್ಯದ ಕೋಟೆ. ಅದೇ ಕೋಟೆ ಇತ್ತೀಚೆಗೆ ಬಿದ್ದ ಮಳೆಗೆ 3ನೇ ಸಲ ಕೋಟೆಯ ಗೋಡೆ ಕುಸಿದು ಬಿದ್ದು ನಿರ್ಮಿತಿ ಕೇಂದ್ರ ನಿರ್ವಹಿಸಿದ ಕಳಪೆ ಕಳಪೆ ಕಾಮಗಾರಿಯನ್ನು ಬಟಾಬಯಲು ಮಾಡಿದೆ.

ತೋಟಗಳಿಗೆ ನುಗ್ಗಿದ ಎಚ್‌ಎನ್‌ ವ್ಯಾಲಿ ನೀರು : ರೈತರ ಆಕ್ರೋಶ

ಗೊಮ್ಮನಾಯಕನ ಪಾಳ್ಯ ಕೋಟೆಗೆ ತನ್ನದೇ ಇತಿಹಾಸದ ಹಿನ್ನೆಲೆ ಇದೆ. ಜಿಲ್ಲೆಯಲ್ಲಿ ಪಾಳೇಗಾರರ ಸಂಸ್ಥಾನವಾಗಿ ಗಮನ ಸೆಳೆದಿದ್ದ ಗೊಮ್ಮನಾಯಕನಪಾಳ್ಯ ಏಳು ಸುತ್ತಿನ ಕೋಟೆ ಹೊಂದಿರುವ ಹೆಗ್ಗಳಿಕೆ ಜಿಲ್ಲೆಗೆ ಇದೆ. ಆದರೆ ಕೋಟೆ ಅಭಿವೃದ್ಧಿ ಹೆಸರಲ್ಲಿ ಬಿಡುಗಡೆಗೊಳ್ಳುತ್ತಿರುವ ಲಕ್ಷಾಂತರ ರು ಹಣ ಮಾತ್ರ ಎಲ್ಲಿ ಹೋಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ದುಸ್ಥಿತಿಯತ್ತ ಐತಿಹಾಸಿಕ ಕೋಟೆ

ಪ್ರವಾಸೋದ್ಯಮ ಇಲಾಖೆಯಡಿ ಪ್ರತಿ ವರ್ಷ ಲಕ್ಷಾಂತರ ರು ಅನುದಾನ ಕೋಟೆ ನವೀಕರಣಕ್ಕೆ ಬಳಕೆ ಆಗುತ್ತಿದ್ದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಸ್ಥಿತಿ ತಲುಪಿದ್ದು ಇದಕ್ಕೆ ಗುಮ್ಮನಾಯಕನಪಾಳ್ಯದ ಕೋಟೆ ದುಸ್ಥಿತಿ ಈಗ ಜೀವಂತ ನಿದರ್ಶನ.

ನಂದಿಬೆಟ್ಟ ಎಂಟ್ರಿಗೆ ಹೊಸ ರೂಲ್ಸ್‌ ಜಾರಿ..!

ಗುಮ್ಮನಾಯಕಪಾಳ್ಯಕ್ಕೆ ಬರೋಬ್ಬರಿ 500 ವರ್ಷಗಳ ಭವ್ಯ ಇತಿಹಾಸ ಇದ್ದು. ಪಾಳೇಗಾರರು ಆಳ್ವಿಕೆಗೆ ಒಳಗಾಗಿದ್ದ ಗುಮ್ಮ ನಾಯಕನ ಪಾಳ್ಯ ಜಿಲ್ಲೆಯ ಸಾಂಸ್ಕೃತಿಕ, ಕಲೆ, ಶಿಲ್ಪ ಕಲೆಯ ಅನೇಕ ಕುರುಹುಗಳು ಒಳಗೊಂಡಿದೆ. ಪ್ರತಿ ವರ್ಷ ಕೋಟೆಯ ನವೀಕರಣಕ್ಕೆ ಬಿಡುಗಡೆಗೊಳ್ಳುವ ಅನುದಾನ ಕಳಪೆ ಕಾಮಗಾರಿಗಳಿಂದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಜೇಬು ತುಂಬುತ್ತಿದ್ದು ಸ್ಥಳೀಯ ನಿವಾಸಿಗಳ ಹಾಗೂ ಪ್ರವಾಸಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಆದರೆ ಈ ಬಗ್ಗೆ ನಿಗಾ ವಹಿಸಿ ಅಭಿವೃದ್ದಿ ಅನುದಾನ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕಿದ್ದ ಬಾಗೇಪಲ್ಲಿ ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮೌನವಾಗಿದ್ದಾರೆ.

ಅಧಿಕಾರಿಗಳು ಹೇಳಿದ್ದೇನು?

ಗುಮ್ಮನಾಯಕನಾಪಾಳ್ಯದ ಕೋಟೆ ಗೋಡೆ ಮಳೆಯಿಂದ ಕುಸಿದು ಬಿದ್ದಿದೆ. ಆದರೆ ಅದು ನಮ್ಮ ಯೋಜನಾ ವರದಿಯಲ್ಲಿ ನಿರ್ವಹಿಸಿದ ಕಾಮಗಾರಿ ಅಲ್ಲ. ಬೇರೊಂದು ಗೋಡೆ ಕುಸಿದು ಬಿದ್ದಿದೆ. ಅದನ್ನು ದುರಸ್ತಿಪಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಕನ್ನಡಪ್ರಭಗೆ ತಿಳಿಸಿದರು.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ