
ಮಂಗಳೂರು(ಮೇ.7): ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಾಹುಲ್ ಹಮೀದ್ ನನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿ ಆತ್ಮಹತ್ಯೆಗೆ ಲವ್ ಜಿಹಾದ್ ಕಾರಣ ಎಂದು ಹೇಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಸದ್ಯ ವಿಟ್ಲ ಠಾಣೆ ಪೊಲೀಸರು ಅರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆಗೆ ಲವ್ ಜಿಹಾದ್ ಕಾರಣ ಎಂದು ವಿಎಚ್ ಪಿ ( Vishva Hindu Parishad) ವಿಭಾಗ ಮಾರ್ಗದರ್ಶಿ ಶರಣ್ ಪಂಪ್ ವೆಲ್ ಆರೋಪಿಸಿದ್ದರು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಆಶ್ಮಿಕಾ ಮನೆಗೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಭೇಟಿ ನೀಡಿದ್ದರು. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಮೇ.4ರ ರಾತ್ರಿ ಘಟನೆ ನಡೆದಿದ್ದು, ಮೂಲತಃ ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಅವರ ಪುತ್ರಿ ಆಶ್ಮಿಕಾ(14) ಆತ್ಮಹತ್ಯೆ ಮಾಡಿಕೊಂಡಿದ್ದಳು. ಕುಟುಂಬದೊಂದಿಗೆ ಕಣಿಯೂರು ದಿ. ಸುಲೈಮಾನ್ ಹಾಜಿ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಅಪರಾಧ ಕೃತ್ಯ ಕಡಿವಾಣಕ್ಕೆ Raichur DYSPಯಿಂದ ಬಾರ್ಡರ್ ಕ್ರೈಂ ಸಭೆ
ಮೇ.4ರಂದು ಮನೆಮಂದಿ ಕೆಲಸಕ್ಕೆ ಹೋದಾಗ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಸ್ಥಳೀಯ ನಿವಾಸಿ ಶಾಹುಲ್ ಹಮೀದ್ ಎಂಬಾತನ ಕಿರುಕುಳದಿಂದ ಆತ್ಮಹತ್ಯೆ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಶಾಹುಲ್ ಹಮೀದ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಶಾಹುಲ್ ಹಮೀದ್ ತಲೆ ಮರೆಸಿಕೊಂಡಿದ್ದ, ಪೊಲೀಸರು ಬಾಲಕಿಯ ಮೊಬೈಲ್ ಸಹಿತ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆಲ ಮಾಹಿತಿ ಪ್ರಕಾರ ಬಾಲಕಿಯ ಫೋನ್ ನಲ್ಲಿ ಆರೋಪಿಯ ನಂಬರ್ ಪತ್ತೆಯಾಗಿದ್ದು, ಈ ಬಗ್ಗೆ ಮನೆಯವರಿಗೆ ವಿಷಯ ತಿಳಿದಿತ್ತಂತೆ. ಇದೇ ಕಾರಣಕ್ಕೆ ಜಗಳ ನಡೆದು ಬಾಲಕಿಗೆ ತಂದೆ ಬೈದು ಬುದ್ದಿ ಹೇಳಿದ್ದರು ಎನ್ನಲಾಗಿದೆ. ಹೀಗಿದ್ದರೂ ಶಾಹುಲ್ ಹಮೀದ್ ಮನೆಗೆ ಬಂದು ಯಾರೂ ಇರದ ವೇಳೆ ಬಾಲಕಿಗೆ ಕಿರುಕುಳ ನೀಡಿದ್ದ ಎಂದು ದೂರಲಾಗಿದೆ. ಸದ್ಯ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು.
ಆತ್ಮಹತ್ಯೆಗೆ ಲವ್ ಜಿಹಾದ್ ಕಾರಣ: ವಿಎಚ್ ಪಿ
ಸಾಹುಲ್ ಹಮೀದ್ ಪ್ರೀತಿಸುವಂತೆ ಪೀಡಿಸಿದ್ದು, ಕಾಟ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಆರೋಪಿದಿದ್ದರು. ಅಪ್ರಾಪ್ತೆ ಮೇಲೆ ವಾಮಾಚಾರ ಪ್ರಯೋಗಿಸಿ, ಬೆದರಿಸಲಾಗಿದೆ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಕೃತ್ಯ. ಸಾಹುಲ್ ಹಮೀದ್ ಮತ್ತು ಅವನ ಮನೆಯವರನ್ನ ಬಂಧಿಸಿ ಕೊಲೆ ಮೊಕ್ಕದ್ದಮೆ ದಾಖಲಿಸಿ ಉನ್ನತ ಮಟ್ಟದ ತನಿಖೆಗೆ ವಿಎಚ್ ಪಿ ಆಗ್ರಹಿಸಿತ್ತು.
Vijayanagara ಅಧಿಕಾರ ಚುಕ್ಕಾಣಿ ಹಿಡಿದ್ರು ಕಾಂಗ್ರೆಸ್ ಸದಸ್ಯರನ್ನು ಬಿಡದ ಬಿಜೆಪಿ
ಮಂಗಳೂರಿನಲ್ಲಿ ಬುರ್ಖಾಧಾರಿಗಳ ಮೇಲೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಕಣ್ಣು!
ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಯೊಂದು ಸಾಮಾಜಿಕ ತಾಣಗಳಲ್ಲಿ ನೈತಿಕ ಪೊಲೀಸ್ ಗಿರಿಯ ಬೆದರಿಕೆ ಒಡ್ಡಿದೆ. ಹಿಜಾಬ್, ಬುರ್ಖಾ ಧರಿಸಿ ಹೊರಬರುವ ಯುವತಿಯರ ಮೇಲೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನಲ್ಲಿ ಈ ಸಂಘಟನೆ ನಿಗೂಢವಾಗಿ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ.
ನೈತಿಕ ಪೊಲೀಸ್ ಗಿರಿ ನಡೆಸಲು ಮುಂದಾಗಿರುವ ಸಂಘಟನೆ, ಬುರ್ಖಾ ಧರಿಸಿ ಅಸಭ್ಯವಾಗಿ ವರ್ತಿಸುವ ಯುವತಿಯರನ್ನು ಟಾರ್ಗೆಟ್ ಮಾಡುವ ಎಚ್ಚರಿಕೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಸಂದೇಶ ಹರಿಬಿಡುತ್ತಿರುವ ಮುಸ್ಲಿಂ ಡಿಫೆನ್ಸ್ ಫೋರ್ಸ್, ಹಿಜಾಬ್ , ಬುರ್ಖಾ ಧರಿಸಿ ಮನೆಯಿಂದ ಹೊರಬರುವ ಯುವತಿಯರ ಮೇಲೆ ಕಣ್ಣಿಡುವಂತೆ ಪೋಷಕರಿಗೆ ಎಚ್ಚರಿಕೆ ನೀಡಿದೆ. ಬುರ್ಖಾ ಧರಿಸಿ ಯುವಕರೊಂದಿಗೆ ಪಾರ್ಕ್ , ಮಾಲ್ , ಥಿಯೇಟರ್ ಸುತ್ತುವ ಯುವತಿಯರನ್ನು ಟಾರ್ಗೆಟ್ ಮಾಡುವ ಬೆದರಿಕೆ ಹಾಕಲಾಗಿದೆ.
ಬುರ್ಖಾ , ಹಿಜಾಬ್ ಧರಿಸಿ ಮಾಲ್, ಹೋಟೆಲ್ ಹಾಗೂ ಸಾರ್ವಜನಿಕ ಜಾಗದಲ್ಲಿ ಹುಡುಗರೊಂದಿಗೆ ಓಡಾಡುವಂತಿಲ್ಲ ಎಂದು ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಯೊಂದು ಫತ್ವಾ ಹೊರಡಿಸಿದೆ. ಸದ್ಯ ಮುಸ್ಲಿಮ್ ಡಿಫೆನ್ಸ್ ಫೋರ್ಸ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡಲು ಪ್ರತ್ಯೇಕ ತಂಡ ರಚಿಸಿದ್ದಾರೆ.