ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಹಾಗೂ ಕೈ ಮುಖಂಡ ಎಂ ಬಿ ಪಾಟೀಲ್‌ಗೆ ಬಂಗಾರದ ಕಿರೀಟ ಉಡುಗೊರೆಯಾಗಿ ನೀಡಲಾಗಿದೆ.
ವಿಜಯಪುರ (ನ.24): ಅಭಿವೃದ್ಧಿಯಿಂದ ವಂಚಿತವಾಗಿದ್ದ ಕಾರಜೋಳ ಗ್ರಾಮವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಿದ ಹಾಗೂ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ತಮ್ಮ ಊರಿನ ಹೆಮ್ಮೆಯ ಪುತ್ರ ಗೋವಿಂದ ಕಾರಜೋಳ ಅವರಿಗೆ ಸುವರ್ಣ ಕಿರೀಟ ತೊಡಿಸುವ ಮೂಲಕ ಕಾರಜೋಳ ಗ್ರಾಮಸ್ಥರು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಊರಿನ ಪ್ರಗತಿಗೆ ಕೊಡುಗೆ ನೀಡಿದ ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲರಿಗೂ ಬಂಗಾರದ ಕೀರಿಟವನ್ನು ಗ್ರಾಮಸ್ಥರು ತೊಡಿಸಿ ಅಭಿನಂದಿಸಿದರು.
undefined
ಮರಾಠ ಅಭಿವೃದ್ಧಿ ನಿಗಮ, ಮರಾಠ ಭಾಷೆಯ ಅಭಿವೃದ್ಧಿಗಲ್ಲ: ಡಿಸಿಎಂ ಕಾರಜೋಳ
ಮೂರು ಜನ ನಾಯಕರು ಪ್ರೀತಿಪೂರ್ವಕವಾಗಿ ಕಿರೀಟವನ್ನು ನಿರಾಕರಿಸಿದರೂ ಗ್ರಾಮಸ್ಥರು ನಾವು ಅಭಿಮಾನದಿಂದ ಕಿರೀಟ ತೊಡಿಸುತ್ತಿದ್ದೇವೆ ಎಂದಾಗ ಗ್ರಾಮಸ್ಥರ ಪ್ರೀತಿಗೆ ತಲೆಬಾಗಿ ಮೂರು ಜನರು ಕಿರೀಟ ತೊಟ್ಟು ಗ್ರಾಮಸ್ಥರ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.