ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರಿಗೆ ಬಿಗ್ ಶಾಕ್: ಇನ್ಮುಂದೆ ಗಣೇಶನ ಮೂರ್ತಿ ಮುಟ್ಟಿ ಪೂಜೆ ಮಾಡುವಂತಿಲ್ಲ!

Published : Jul 23, 2026, 01:06 PM ISTUpdated : Jul 23, 2026, 01:09 PM IST
Gokarna Ganesh Temple

ಸಾರಾಂಶ

ಗೋಕರ್ಣದ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದಲ್ಲಿ, ಪ್ರಾಚೀನ ಶಿಲಾ ಮೂರ್ತಿಯ ಸವೆತವನ್ನು ತಡೆಯಲು ಮುಜರಾಯಿ ಇಲಾಖೆಯು ಸ್ಪರ್ಶ ದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಹೊಸ ನಿಯಮದ ಅಡಿಯಲ್ಲಿ, ಭಕ್ತರು ಇನ್ನು ಮುಂದೆ ಗಣಪತಿ ಮೂರ್ತಿಯನ್ನು ಮುಟ್ಟಿ ಪೂಜೆ ಸಲ್ಲಿಸುವಂತಿಲ್ಲ ಮತ್ತು 'ಕೊಟ್ಟೆ ಕಣಜ'ದಂತಹ ವಿಶೇಷ ಸೇವೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಉತ್ತರ ಕನ್ನಡ (ಜು.23): ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಪುರಾಣ ಪ್ರಸಿದ್ಧ ಗೋಕರ್ಣದ ಮಹಾಗಣಪತಿ ದೇವಸ್ಥಾನಕ್ಕೆ (Gokarna Mahaganapati Temple) ಭೇಟಿ ನೀಡುವ ಭಕ್ತರಿಗೆ ಮುಜರಾಯಿ ಇಲಾಖೆಯು (Muzrai Department) ಪ್ರಮುಖ ಮಾಹಿತಿಯೊಂದನ್ನು ನೀಡಿದೆ. ದೇವಸ್ಥಾನದಲ್ಲಿರುವ ಪ್ರಾಚೀನ ಶಿಲಾ ಮೂರ್ತಿ (Ancient Stone Idol) ಸವಕಳಿಯಾಗುತ್ತಿರುವ ಹಿನ್ನೆಲೆಯಲ್ಲಿ, ಇನ್ಮುಂದೆ ಗಣಪತಿ ಮೂರ್ತಿಯನ್ನು ಮುಟ್ಟಿ ಪೂಜೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಭಕ್ತರಿಗೆ ಗಣೇಶನ ಸ್ಪರ್ಶ ದರ್ಶನವನ್ನು (Sparsha Darshana) ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಮೂರ್ತಿಗೆ ಹಾನಿಯಾಗುತ್ತಿರುವುದೇಕೆ?

ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ (Mahabaleshwara Temple) 'ಆತ್ಮಲಿಂಗ' ದರ್ಶನ ಪಡೆಯುವ ಮುನ್ನ, ಭಕ್ತರು ಮೊದಲು ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಈ ಐತಿಹಾಸಿಕ ದ್ವಿಭುಜ ಗಣಪತಿಗೆ (Two-armed Ganesha) ಪೂಜೆ ಸಲ್ಲಿಸುವುದು ಅನಾದಿ ಕಾಲದ ವಾಡಿಕೆ. ಆದರೆ, ಪ್ರತಿನಿತ್ಯ ಸಾವಿರಾರು ಭಕ್ತರು ಮೂರ್ತಿಯನ್ನು ಸ್ಪರ್ಶಿಸಿ ಪೂಜೆ ಮಾಡುತ್ತಿದ್ದರಿಂದ, ಗಣಪತಿಯ ಶಿಲಾ ಮೂರ್ತಿಯ ಕೈ, ಭುಜ ಹಾಗೂ ಎದೆ ಭಾಗವು (Chest and Shoulder parts) ತೀವ್ರವಾಗಿ ಸವಕಳಿಯಾಗುತ್ತಿದೆ (Erosion).

ದತ್ತಿ ಇಲಾಖೆಯ ಕಟ್ಟುನಿಟ್ಟಿನ ಕ್ರಮ:

ಈ ಪುರಾತನ ಮೂರ್ತಿಯ ಸಂರಕ್ಷಣೆ (Idol Protection) ಅತ್ಯಗತ್ಯವಾಗಿರುವುದರಿಂದ, ನಿನ್ನೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ (Assistant Commissioner) ಸುಧಾ ತಳವಾರ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಕಠಿಣ ನಿರ್ಣಯ ಕೈಗೊಳ್ಳಲಾಗಿದೆ. ಈ ಹೊಸ ನಿಯಮದ ಪ್ರಕಾರ, ಭಕ್ತರಿಗೆ ಸ್ಪರ್ಶ ದರ್ಶನ ಹಾಗೂ ಮೂರ್ತಿಯನ್ನು ಮುಟ್ಟಿ ಮಾಡುವ ವಿಶೇಷ ಪೂಜಾ ಸೇವೆಗಳನ್ನು (Pooja Sevas) ತಕ್ಷಣದಿಂದಲೇ ಜಾರಿಗೆ ಬರುವಂತೆ ಬಂದ್ ಮಾಡಲಾಗಿದೆ.

ವಿಶೇಷ ಸೇವೆಗಳೂ ಸ್ಥಗಿತ :

ಕೇವಲ ಸಾಮಾನ್ಯ ದಿನಗಳಲ್ಲಷ್ಟೇ ಅಲ್ಲದೆ, ಮುಂಬರುವ ಸಂಕಷ್ಟಿ (Sankashti) ಹಾಗೂ ಗಣೇಶ ಚತುರ್ಥಿ (Ganesh Chaturthi) ಹಬ್ಬದ ಸಂದರ್ಭದಲ್ಲೂ ಇದೇ ಕಟ್ಟುನಿಟ್ಟಿನ ನಿಯಮ ಮುಂದುವರಿಯಲಿದೆ. ಭಕ್ತರು ದೂರದಿಂದಲೇ ದೇವರ ದರ್ಶನ ಪಡೆಯಬೇಕು. ಇದಲ್ಲದೇ, ಮಹಾಗಣಪತಿಗೆ ಅತ್ಯಂತ ವಿಶೇಷವಾಗಿ ನಡೆಯುತ್ತಿದ್ದ ಪ್ರಸಿದ್ಧ 'ಕೊಟ್ಟೆ ಕಣಜ' (Kotte Kanaja) ಹಾಗೂ 'ಸಕ್ಕರೆ ಕಣಜ' (Sakkare Kanaja) ಸೇವೆಗಳನ್ನು ಸಹ ಮೂರ್ತಿಯ ರಕ್ಷಣೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ (Suspended) ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

PREV
Read more Articles on
click me!

Recommended Stories

ಹೃದಯ ವಿದ್ರಾವಕ ಘಟನೆ.. ಮಗನ ಅಗಲಿಕೆ ನೋವು ತಾಳಲಾರದೇ ಕುಸಿದುಬಿದ್ದು ಪ್ರಾಣಬಿಟ್ಟ ಅಮ್ಮ
ನಮ್ಮ ಮೆಟ್ರೋ ಕೆಂಪು ಮಾರ್ಗದಲ್ಲಿ ಸಾರಿಗೇತರ ಆದಾಯಕ್ಕೆ ಭಾರಿ ಕತ್ತರಿ: ವಾಣಿಜ್ಯ ವ್ಯಾಪ್ತಿ ಶೇ. 58ರಷ್ಟು ಕುಸಿತ!