ನಿಗೂಢವಾಗಿ ನಾಪತ್ತೆಯಾಗಿ ಆರು ತಿಂಗಳ ಬಳಿಕ ಮನೆಗೆ ಬಂದ ವ್ಯಕ್ತಿ!

By Kannadaprabha News  |  First Published May 28, 2024, 4:07 PM IST

ಕಳೆದ ಡಿಸೆಂಬರ್‌ ತಿಂಗಳಲ್ಲಿ ನಡೆದ ಹಲ್ಲೆ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಾಗಿ ನಂತರ ನಾಪತ್ತೆಯಾಗಿದ್ದ ತಲಗೇರಿ ನಿವಾಸಿ ಪೊಕ್ಕ ಗೌಡ ಅವರು ಆರು ತಿಂಗಳ ನಂತರ ಸೋಮವಾರ ಸಂಜೆ ಇಲ್ಲಿಗೆ ಆಗಮಿಸಿದ್ದಾರೆ.


ಗೋಕರ್ಣ (ಮೇ.28): ಕಳೆದ ಡಿಸೆಂಬರ್‌ ತಿಂಗಳಲ್ಲಿ ನಡೆದ ಹಲ್ಲೆ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಾಗಿ ನಂತರ ನಾಪತ್ತೆಯಾಗಿದ್ದ ತಲಗೇರಿ ನಿವಾಸಿ ಪೊಕ್ಕ ಗೌಡ ಅವರು ಆರು ತಿಂಗಳ ನಂತರ ಸೋಮವಾರ ಸಂಜೆ ಇಲ್ಲಿಗೆ ಆಗಮಿಸಿದ್ದಾರೆ.

ಇವರ ಸಂಬಂಧಿಕರೇ ಆದ ಓರ್ವ ವ್ಯಕ್ತಿಯ ಜತೆ ಗಲಾಟೆ ಮಾಡಿಕೊಂಡಿದ್ದರು. ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಇವರ ಮೇಲೆ ಹಲ್ಲೆ ಮಾಡಿದ್ದ ಸಂಬಂಧಿ ವ್ಯಕ್ತಿ. ತೀವ್ರ ಹಲ್ಲೆ ಬಳಿಕ ಗಂಭೀರ ಗಾಯಗೊಂಡ ಇವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಸಲಾಗಿತ್ತು. ಆದರೆ ಅಲ್ಲಿ ದಾಖಲಾಗಿ ಒಂದೇ ದಿನಕ್ಕೆ ನಾಪತ್ತೆಯಾಗಿದ್ದರು.

Latest Videos

ಗೋಕರ್ಣ: ಗಾಯಗೊಂಡಿದ್ದ ನಾಯಿಗೆ ವಿದೇಶಿ ಮಹಿಳೆಯಿಂದ ಚಿಕಿತ್ಸೆ

ಹಲ್ಲೆ ಸಂಬಂಧ ಪೊಲೀಸ್ ಪ್ರಕರಣ ದಾಖಲಾಗಿದ್ದ ಕಾರಣ ಪೊಲೀಸರಿಗೂ ಪತ್ತೆ ಹಚ್ಚುವುದು ಸವಾಲಾಗಿತ್ತು. ಆದರೆ ಆರು ತಿಂಗಳ ಬಳಿಕ ಆಸ್ಪತ್ರೆ ಆವರಣದಲ್ಲೆ ಸೋಮವಾರ ದಿಢೀರ್ ಪ್ರತ್ಯಕ್ಷವಾಗಿದ್ದ ಎನ್ನಲಾಗಿದ್ದು, ಅಲ್ಲಿನವರು ವಿಚಾರಿಸಿದಾಗ ಗೋಕರ್ಣ ಊರು ಎಂದ ತಕ್ಷಣ ಇಲ್ಲಿನ ಪರಿಚಯಸ್ಥರ ಸಂಪರ್ಕಿಸಿ ಸಂಜೆ ಅಲ್ಲಿಂದ ಹೊರಡುವ ನೇರ ಬಸ್ ಗೆ ಕಳುಹಿಸಿ ಕೊಟ್ಟಿದ್ದಾರೆ. ಇಲ್ಲಿವರೆಗೆ ಎಲ್ಲಿ ಹೋಗಿದ್ದರು, ಏನು ಮಾಡಿದರು ಎಂಬುದೇ ನಿಗೂಢವಾಗಿದೆ.

click me!