ಕಲಬುರಗಿ: ಬಸ್‌ಗೆ ತ್ರಿಬಲ್‌ ರೈಡಿಂಗ್‌ ಬೈಕ್‌ ಡಿಕ್ಕಿ, ಮೂವರು ಯುವಕರ ದುರ್ಮರಣ

Published : May 28, 2024, 12:31 PM IST
ಕಲಬುರಗಿ: ಬಸ್‌ಗೆ ತ್ರಿಬಲ್‌ ರೈಡಿಂಗ್‌ ಬೈಕ್‌ ಡಿಕ್ಕಿ, ಮೂವರು ಯುವಕರ ದುರ್ಮರಣ

ಸಾರಾಂಶ

ಸ್ನೇಹಿತನಾದ ಜಮೀರ್ ಹಾಗೂ ವಿಶಾಲ್ ಸೇರಿ ಚಂದ್ರಕಾಂತನನ್ನು ಕಮಲಾಪುರವರೆಗೆ ಬಿಟ್ಟು ಬರಲು ಬೈಕ್ ಮೇಲೆ ಹೊರಟಿದ್ದರು. ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.   

ಕಲಬುರಗಿ(ಮೇ.28):  ಕಲಬುರಗಿ ಜಿಲಲ್ಲೆಯ  ಕಮಲಾಪುರ ತಾಲೂಕಿನ ಡೊಂಗರಗಾಂವ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬೈಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಮೇಲೆ ತೆರಳಿದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಿಣಿ ಸಡಕ್ ಗ್ರಾಮದ ಸಮೀರ್ ಜಮೀರ್ ಸಾಬ್(22) ವಿಶಾಲ್ ಸಂಜು ಕುಮಾರ್ ಜಾದವ್ (20) ಚಂದ್ರಕಾಂತ್ ನಿಂಗಪ್ಪ ಹೋಳಕುಂದಾ (23) ಮೃತಪಟ್ಟ ಯುವಕರು. ಮೂವರು ಸೇರಿ ಬೈಕ್ ಮೇಲೆ ಕಮಲಾಪುರಕ್ಕೆ ಬರುತ್ತಿದ್ದರು. ಕಲ್ಬುರ್ಗಿಯಿಂದ ಹುಮ್ನಾಬಾದ್ ಗೆ ತೆರಳುತ್ತಿರುವ ವಿಜಯಪುರ- ಬಸವಕಲ್ಯಾಣ ಬಸ್ ಗೆ ಇವರ ಬೈಕ್‌ ಡಿಕ್ಕಿಯಾಗಿದೆ. ಡಿಕ್ಕಿಯಿಂದ ರಸ್ತೆಗೆ ಬಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕಮಲಾಪುರ ಪೊಲೀಸರು ತಿಳಿಸಿದ್ದಾರೆ.

Chikkamagaluru: ಅಪಘಾತದಲ್ಲಿ 26 ವರ್ಷದ ಯುವಕ, ಈಜಲು ಹೋಗಿ 13ರ ಬಾಲಕ ಸಾವು!

ಚಂದ್ರಕಾಂತ್ ಅವರು ಕೆಲ ದಿನಗಳ ಹಿಂದೆ ಎಲ್ ಅಂಡ್ ಟಿ ಕಂಪನಿಯಲ್ಲಿ ಕೆಲ ದಿನಗಳ ಹಿಂದೆ ಉದ್ಯೋಗ ಗಿಟ್ಟಿಸಿಕೊಂಡಿದ್ದು, ಮೇ 28ರಂದು ಹುಬ್ಬಳ್ಳಿಯಲ್ಲಿ ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನಕ್ಕೆ ತೆರಳೋದರಲ್ಲಿದ್ದರು. ಸ್ನೇಹಿತನಾದ ಜಮೀರ್ ಹಾಗೂ ವಿಶಾಲ್ ಸೇರಿ ಚಂದ್ರಕಾಂತನನ್ನು ಕಮಲಾಪುರವರೆಗೆ ಬಿಟ್ಟು ಬರಲು ಬೈಕ್ ಮೇಲೆ ಹೊರಟಿದ್ದರು. ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಕಮಲಾಪುರ್ ಪೊಲೀಸರು ಹೇಳಿದ್ದಾರೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಮಲಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
Read more Articles on
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ