ಮೈಸೂರು: ವೇಶ್ಯಾವಾಟಿಕೆ; ಇಬ್ಬರ ಬಂಧನ, ಮಹಿಳೆಯ ರಕ್ಷಣೆ

By Kannadaprabha NewsFirst Published Aug 6, 2019, 2:52 PM IST
Highlights

ಮೈಸೂರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವೇಶ್ಯಾವಾಟಿಕೆಗೆ ಬಳಸಲಾಗುತ್ತಿದ್ದ 3 ಮೊಬೈಲ್, 4,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ವೇಶ್ಯಾವಾಟಿಕೆಯಿಂದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ.

ಮೈಸೂರು(ಆ.06): ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯ ಮೇಲೆ ಮೈಸೂರಿನ ಸಿಸಿಬಿ ಘಟಕದ ಪೊಲೀಸರು ಭಾನುವಾರ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.

ಜಯಲಕ್ಷ್ಮೀಪುರಂ 2ನೇ ಮುಖ್ಯರಸ್ತೆಯಲ್ಲಿ ಮನೆಯೊಂದರಲ್ಲಿ ಮಹಿಳೆಯರನ್ನು ಮತ್ತು ಗಿರಾಕಿಗಳನ್ನು ಕರೆಸಿಕೊಂಡು, ಗಿರಾಕಿಗಳಿಂದ ಹಣ ಪಡೆದು ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ನಾಗಮ್ಮ(40) ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಸಯ್ಯದ್‌ ಪಾಷ(28) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂತ್ರಿ ಗ್ರೀನ್ಸ್ ಅಪಾರ್ಟ್​ಮೆಂಟ್‌ನಲ್ಲಿ ವೇಶ್ಯಾವಾಟಿಕೆ: ಇಬ್ಬರ ಬಂಧನ

ವೇಶ್ಯಾವಾಟಿಕೆಯಿಂದ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ. ವೇಶ್ಯಾವಾಟಿಕೆಗೆ ಬಳಸಲಾಗಿದ್ದ 3 ಮೊಬೈಲ್‌ ಫೋನ್‌ಗಳು ಮತ್ತು 4000 ಹಣ ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಇನ್ಸ್‌ಪೆಕ್ಟರ್‌ ಎ. ಮಲ್ಲೇಶ್‌, ಜಯಲಕ್ಷ್ಮೀಪುರಂ ಠಾಣೆಯ ಇನ್ಸ್‌ಪೆಕ್ಟರ್‌ ಸುರೇಶ್‌ಕುಮಾರ್‌, ಸಿಬ್ಬಂದಿ ರಾಜು, ಜೋಸೇಫ್‌ ನರೋನ, ದೀಪಕ್‌, ರಾಜಶ್ರೀ, ರಘು, ಶ್ರೀನಿವಾಸ ಈ ದಾಳಿ ನಡೆಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!