ಹೆಜ್ಜೇನು ದಾಳಿ​ಯಿಂದ ಮಕ್ಕಳು, ಶಿಕ್ಷಕರನ್ನು ರಕ್ಷಿ​ಸಿದ ಬಾಲ​ಕಿ!

By Kannadaprabha News  |  First Published Jan 30, 2020, 2:55 PM IST

ವಿದ್ಯಾರ್ಥಿಯೋರ್ವಳ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೆಜ್ಜೇನುಗಳ ದಾಳಿಯಿಂದ ಬಚಾವಾಗಿದ್ದಾರೆ. 


ಶಿಕಾರಿಪುರ [ಜ.30]:  ಸಮಯಪ್ರಜ್ಞೆ, ಬುದ್ಧಿವಂತಿಕೆಯಿಂದ ಶಾಲಾ ಬಾಲಕಿ ಹೆಜ್ಜೇನುದಾಳಿಯಿಂದ ಶಾಲಾ ಮಕ್ಕಳು ಮತ್ತು ಶಿಕ್ಷಕರನ್ನು ಪಾರು ಮಾಡಿದ ಘಟನೆ ತಾಲೂಕಿನ ತರಲಘಟ್ಟಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಕಳೆದ ಕೆಲ ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ತರಲಘಟ್ಟಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳು ಧರೆಗುರುಳಿದ್ದು, ಕೊಠಡಿ ಅಭಾವದಿಂದಾಗಿ ಮಕ್ಕಳಿಗೆ ಹೊರಗಿನ ಕಟ್ಟೆಮೇಲೆ ಶಿಕ್ಷಕಿ ಪಾಠ ಹೇಳಿಕೊಡುತ್ತಿದ್ದರು. ಈ ಸಂದರ್ಭದಲ್ಲಿ ಅಚಾನಕ್ಕಾಗಿ ಸಮೀಪದಲ್ಲಿದ್ದ ಜೇನುಗೂಡಿನ ಅಸಂಖ್ಯಾತ ಹೆಜ್ಜೇನಿನ ಹಿಂಡು ಚೆಲ್ಲಾಪಿಲ್ಲಿಯಾಗಿ ಹಾರತೊಡಗಿದೆ. ಇನ್ನೇನು ದಾಳಿ​ಯಾ​ಗ​ಬೇಕು ಎನ್ನು​ವ ಸಂದರ್ಭದಲ್ಲಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ವೀಣಾ ಸಮಯಪ್ರಜ್ಞೆ, ಬುದ್ದಿವಂತಿಕೆಯಿಂದ ಜೋರಾಗಿ ಕೂಗಿಕೊಂಡಿ​ದ್ದಾಳೆ.

Tap to resize

Latest Videos

ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ : ಚಿರತೆ ಉಗುರು, ಆನೆದಂತ ವಶ...

ಕ್ಷಣಾರ್ಧದಲ್ಲಿ ಶಾಲಾ ಕಟ್ಟೆಮೇಲಿದ್ದ ಎಲ್ಲ ಮಕ್ಕಳು, ಶಿಕ್ಷಕರು ಸಮೀಪದಲ್ಲಿನ ಕೊಠಡಿಯೊಳಗೆ ಸೇರಿ ಬಾಗಿಲು ಕಿಟಕಿ ಮುಚ್ಚಿಕೊಂಡು ಜೇನು ಹುಳು ದಾಳಿಯಿಂದ ಪಾರಾಗಿದ್ದಾರೆ. ಸಮಯಪ್ರಜ್ಞೆ ಮೆರೆದ ಕು. ವೀಣಾರನ್ನು ಶಾಲಾ ಶಿಕ್ಷಕರು, ಪೋಷಕರು ಅಭಿನಂದಿಸಿದ್ದಾರೆ. ಗಣರಾಜ್ಯೋತ್ಸವದಂದು ವಿದ್ಯಾರ್ಥಿನಿ ವೀಣಾಳನ್ನು ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು. 

ವಿಶಿಷ್ಟ ರೀತಿಯಲ್ಲಿದೆ ತಾ.ಪಂ ಸದಸ್ಯನ ಪುತ್ರನ ವಿವಾಹ ಆಹ್ವಾನ ಪತ್ರಿಕೆ...

click me!