ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಕೊಡಗಿನ ಬಾಲಕಿಯೊಬ್ಬಳು ಭಾವನಾತ್ಮಕ ಬರಹಗಳನ್ನೊಳಗೊಂಡ ಬಹಿರಂಗ ಪತ್ರವೊಂದು ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಡಿಕೇರಿ(ಮಾ.03): ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಕೊಡಗಿನ ಬಾಲಕಿಯೊಬ್ಬಳು ಭಾವನಾತ್ಮಕ ಬರಹಗಳನ್ನೊಳಗೊಂಡ ಬಹಿರಂಗ ಪತ್ರವೊಂದು ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರತಾಪ್ ಸಿಂಹ ಅವರು, ಕೊಡಗು ಜಿಲ್ಲೆ ಶೇ. 18 ಪ್ರವಾಸೋದ್ಯಮವನ್ನು ಅವಲಂಬಿಸಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿರುವ ಬಾಲಕಿ, ನೀವು ಒಬ್ಬ ಮಗಳ ತಂದೆ. ನಾನು ಕೂಡ ತಂದೆಯ ಮಗಳು. ಆದರೆ, ನಿಮ್ಮ ಯೋಜನೆಗಳು ನಮ್ಮ ಜೀವಸಂಕುಲವನ್ನು ಕೊಲ್ಲುತ್ತಿವೆ. ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತೊಂದು ರೆಸಾರ್ಟ್ ಆರಂಭಕ್ಕೆ ದಾರಿಯಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.
ಶಿಕ್ಷಕಿಯಿಂದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ..!
ರೈಲ್ವೆ ಯೋಜನೆ ಕೇರಳದವರಿಗೆ ರೆಸ್ಟೋರೆಂಟ್ ತೆರೆಯಲು ಅವಕಾಶ ಕೊಡುತ್ತದೆ. ಹೊರಗಿನವರು ಬಂದು ಇಲ್ಲಿ ಉದ್ಯೋಗ ಕಂಡುಕೊಳ್ಳುತ್ತಾರೆ. ಅವರು ಇಲ್ಲಿನ ಪರಿಸರವನ್ನು ಕೊಲ್ಲುತ್ತಾರೆ. ಜಿಲ್ಲೆಯ ಶೇ. 82 ಜನ ಕೃಷಿ ಅವಲಂಬಿಸಿದ್ದಾರೆ. ಅವರು ಇಲ್ಲಿನ ಪರಿಸರವನ್ನು ರಕ್ಷಿಸುತ್ತಿದ್ದಾರೆ. ಕಾಫಿ, ಕರಿಮೆಣಸು ಹಾಗೂ ಭತ್ತಕ್ಕೆ ಬೆಂಬಲ ಬೆಲೆ ಕೊಡುವ ಮೂಲಕ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದಾಳೆ.
ನಾನು ಹಾಗೂ ನಿಮ್ಮ ಮಗಳು ಇನ್ನೂ ಕಾವೇರಿ ನೀರು ಕುಡಿಯುತ್ತಿದ್ದೇವೆ. ಕೊಡಗಿನ ಪರಿಸರಕ್ಕೆ ನೀವು ಧಕ್ಕೆ ಮಾಡುವುದಿಲ್ಲವೆಂಬ ಭರವಸೆ ಇದೆ. ಒಂದು ವೇಳೆ ಹಾಗಾಗದಿದ್ದಲ್ಲಿ ಮುಂದೆ ನಾವು ಕಣ್ಮರೆಯಾಗುತ್ತೇವೆ. ನಿಮ್ಮ ಮಗಳು ಕಣ್ಮರೆಯಾದ ಕೊಡಗು ಮತ್ತು ಕೊಡವರು ಎಂಬ ಲೇಖನ ಬರೆಯುತ್ತಾರೆ ಎಂದು ಬಾಲಕಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಚಾಮರಾಜನಗರ: ಮೂಕ ಮಹಿಳೆ ಮೇಲೆ ಅತ್ಯಾಚಾರ
ಬಾಲಕಿಯ ಪ್ರಶ್ನೆಗಳಿಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ, ‘ನೀನು ಭಾರತದ ಭವಿಷ್ಯ. ನಿನ್ನ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ. ಅದಕ್ಕೆ ಒಂದೆರೆಡು ದಿನ ಕಾಲಾವಕಾಶ ಬೇಕು. ಸಂಸತ್ ಅವೇಶನದಲ್ಲಿ ಕಾರ್ಯನಿರತವಾಗಿದ್ದು, ಎರಡು ದಿನದಲ್ಲಿ ಬರವಣಿಗೆ ಅಥವಾ ಫೇಸ್‌ಬುಕ್ ಲೈವ್‌ನಲ್ಲಿ ಉತ್ತರಿಸುತ್ತೇನೆ’ ಎಂದು ಹೇಳಿದ್ದಾರೆ.