ಚಾಮರಾಜನಗರ(ಮಾ.03): ವ್ಯಕ್ತಿಯೊರ್ವ ಮೂಕ ಮಹಿಳೆ ಮೇಲೆ ಆತ್ಯಾಚಾರ ಎಸಗಿರುವ ಘಟನೆ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಮೆಂದಾರೆ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಪೊಲೀಸ್‌ ಠಾಣಾ ಸರಹದ್ದಿನ ಮೆಂದಾರೆ ಗ್ರಾಮದ ಸೋಲಿಗ ವ್ಯಕ್ತಿ ನಾಗ (43) ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಪತಿ ತೊರೆದು ಕೆಲವು ವರ್ಷಗಳಿಂದ ಜೀವಿಸುತ್ತಿದ್ದ 40 ವರ್ಷದ ಮೂಕ ಮಹಿಳೆಯನ್ನು ಪದೇಪದೇ ರಾಸಲೀಲೆಗೆ ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ.

ನೀರು ಒಯ್ಯಲು ಬಂದ ಯುವತಿ ಗುಪ್ತಾಂಗಕ್ಕೆ ಕೈ ಹಾಕಿ ಕಿರುಕುಳ

ಈ ಹಿಂದೆ, ಗ್ರಾಮದ ಮುಖಂಡರು ಎಚ್ಚರಿಸಿದ್ದರೂ ಸಹ ಭಾನುವಾರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಗಮನಿಸಿ ಗ್ರಾಮದ ನಾಗ ನನ್ನ ಅಕ್ಕನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಮೂಕ ಮಹಿಳೆ ಸಹೋದರ ಮಹದೇಶ್ವರ ಬೆಟ್ಟಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಈ ಸಂಬಂಧ ಇನ್ಸ್‌ಪೆಕ್ಟರ್‌ ಮಹೇಶ್‌ ದೂರು ದಾಖಲಿಸಿಕೊಂಡು ಸಂತ್ರಸ್ಥೆಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಪರೀಕ್ಷೆಗಾಗಿ ಕರೆದೊಯ್ದಿದ್ದಾರೆ.