ಬೆಳಗಾವಿ: ಬಾಲಕಿಯ ಜೀವವನ್ನೇ ಸುಟ್ಟ ನಂದಾದೀಪ..!

Published : Jun 25, 2019, 09:14 PM IST
ಬೆಳಗಾವಿ: ಬಾಲಕಿಯ ಜೀವವನ್ನೇ ಸುಟ್ಟ ನಂದಾದೀಪ..!

ಸಾರಾಂಶ

ನಂದಾದೀಪದ ಬೆಂಕಿ 8 ವರ್ಷದ ಬಾಲಕಿಯ ಜೀವವನ್ನೇ ಸುಟ್ಟಿದೆ. ಮನೆಯಲ್ಲಿ ದೇವರ ಫೋಟೋ ಮುಂದೆ ಹಚ್ಚಿದ್ದ ದೀಪದ ಬೆಂಕಿಗೆ ಬಾಲಕಿ ಸಜೀವ ದಹನವಾಗಿದ್ದಾಳೆ.

ಬೆಳಗಾವಿ, [ಜೂ.25]: ಮನೆಯಲ್ಲಿ ದೇವರ ಫೋಟೋ ಮುಂದೆ ಹಚ್ಚಿಟ್ಟ ನಂದಾದೀಪವೇ ಬಾಲಕಿಯ ಪ್ರಾಣವನ್ನೇ ಕಸಿದ ಘೋರ ದುರಂತ ಘಟನೆ ಬೆಳಗಾವಿಯ ಆನಿಗೋಳದಲ್ಲಿ ನಡೆದಿದೆ.

ಸೋಮವಾರ ರಾತ್ರಿ ನಂದಾದೀಪದ ಬೆಂಕಿ ಹಾಸಿಗೆಗೆ ತಗುಲಿ ಹೊತ್ತಿ ಉರಿದ ಕಾರಣ ಕಸ್ತೂರಿ ಎಂಬ 8 ವರ್ಷದ ಬಾಲಕಿ ಸಜೀವವಾಗಿ ದಹನವಾಗಿದ್ದಾಳೆ. ಇನ್ನು ಬಾಲಕಿಯ ಪೋಷಕರು ಅಪಾಯದಿಂದ ಪಾರಾಗಿದ್ದಾರೆ.

ಜಾಹೀರಾತನ್ನು ನೋಟಿಸ್ ಎಂದು ತಿಳಿದು ವಿಜಯಪುರ ರೈತ ಆತ್ಮಹತ್ಯೆ

ಪೋಷಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ದೇವರ ದೀಪ ಕೆಳಗೆ ಬಿದ್ದು ಹಾಸಿಗೆಗೆ ತಗುಲಿ ಬೆಂಕಿ ಹೊತ್ತಿದೆ. ಆ ವೇಳೆ ಎಚ್ಚರಗೊಂಡ  ಪೋಷಕರು ತಕ್ಷಣ ದೂರ ಸರಿದು ಅಪಾಯದಿಂದ ಪಾರಾದರೆ ಬಾಲಕಿ ಮಾತ್ರ ಸಜೀವ ದಹನವಾಗಿದ್ದಾಳೆ. 

ಘಟನೆ ಬಗ್ಗೆ  ಟೀಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC