ಮಂಗಳೂರಿನ ಸುರತ್ಕಲ್‌ನಲ್ಲಿ ಅತ್ಯಾಧುನಿಕ Gen Z ಅಂಚೆ ಕಚೇರಿ ಉದ್ಘಾಟನೆ; ಏನಿದರ ವಿಶೇಷತೆ?

Kannadaprabha News   | Kannada Prabha
Published : Mar 31, 2026, 10:23 AM IST
Mangaluru Post Office

ಸಾರಾಂಶ

ಕರಾವಳಿ ಕರ್ನಾಟಕದ ಮೊದಲ ಅತ್ಯಾಧುನಿಕ ನ್ಯೂಜೆನ್ ಅಂಚೆ ಕಚೇರಿಯು ಮಂಗಳೂರಿನ ಸುರತ್ಕಲ್ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ಉದ್ಘಾಟನೆಗೊಂಡಿದೆ. ಈ ಕಚೇರಿಯು ಹೈಸ್ಪೀಡ್ ವೈಫೈ, ಸ್ವಯಂ ಬುಕಿಂಗ್ ಕಿಯೋಸ್ಕ್, ಗೇಮ್ ಝೋನ್ ಮತ್ತು ಸೆಲ್ಫಿ ಪಾಯಿಂಟ್‌ನಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

ಮಂಗಳೂರು:  ಮಂಗಳೂರು ಅಂಚೆ ವಿಭಾಗವು ಕರಾವಳಿ ಕರ್ನಾಟಕದ ಮೊದಲ ಅತ್ಯಾಧುನಿಕ ನ್ಯೂಜೆನ್ (ಎನ್- ಜೆನ್) ಅಂಚೆ ಕಚೇರಿಯನ್ನು ಸುರತ್ಕಲ್ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ಸಿದ್ಧಗೊಳಿಸಿದ್ದು, ಸೋಮವಾರ ಉದ್ಘಾಟನೆಗೊಂಡಿತು.

ಎನ್‌-ಜೆನ್‌ ಕಚೇರಿ ಸುರತ್ಕಲ್‌ನಲ್ಲಿ ಕಾರ್ಯಾರಂಭ

ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೀತಂ ವಿಶ್ವವಿದ್ಯಾನಿಲಯ ಮತ್ತು ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಎನ್- ಜೆನ್ ಅಂಚೆ ಕಚೇರಿ ಸ್ಥಾಪನೆಯ ಬಳಿಕ ನಾಲ್ಕನೇ ಎನ್‌-ಜೆನ್‌ ಕಚೇರಿ ಸುರತ್ಕಲ್‌ನಲ್ಲಿ ಕಾರ್ಯಾರಂಭ ಮಾಡಿದೆ.

ಏನೆಲ್ಲಾ ಸೌಲಭ್ಯಗಳು ಇರಲಿವೆ?

ಈ ಕಚೇರಿಯು ಉಚಿತ ಹೈಸ್ಪೀಡ್ ವೈಫೈ ಮತ್ತು ಸ್ವಯಂ ಬುಕಿಂಗ್ ಕಿಯೋತ್ಸ್‌, ಆಧುನಿಕವಾಗಿ ಬರೆಯುವ ಸ್ಥಳ, ವಿಶ್ರಾಂತಿಗಾಗಿ ಲಾಬಿ ಹಾಗೂ ಸ್ಫೂರ್ತಿದಾಯಕ ಪುಸ್ತಗಳನ್ನು ಒಳಗೊಂಡಿರುವ ಗ್ರಂಥಾಲಯವನ್ನು ಹೊಂದಿದೆ. ಜತೆಗೆ ಪ್ರತ್ಯೇಕ ಗೇಮ್ ಝೋನ್, ಸಾಂಪ್ರದಾಯಿಕ ಅಂಚೆ ಪೆಟ್ಟಿಗೆ ಹಾಗೂ ಜೆನ್‌-ಝಡ್‌ ವಿದ್ಯಾರ್ಥಿಯ ವಿಶೇಷ ಚಿತ್ರವಿರುವ ಸೆಲ್ಫಿ ಪಾಯಿಂಟ್ ಇರಲಿದೆ.

ಇಂಡಿಯಾ ಪೋಸ್ಟ್‌ನ ಜನರಲ್‌ ಮ್ಯಾನೆಜರ್‌ (ಪೋಸ್ಟಲ್‌ ಅಕೌಂಟ್ಸ್‌ ಆಂಡ್‌ ಫೈನಾನ್ಸ್‌) ಜ್ಯೂಲಿಯಾ ಮೊಹಪಾತ್ರ ಈ ನೂತನ ಕಚೇರಿಯನ್ನು ಉದ್ಘಾಟಿಸಿದರು. ಎನ್‌ಐಟಿಕೆ ಡೆಪ್ಯುಟಿ ಡೈರೆಕ್ಟರ್‌ ಪ್ರೊ.ಸುಭಾಶ್‌ ಸಿ. ಯರಗಲ್‌, ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ ಡೈರೆಕ್ಟರ್‌ (ಪೋಸ್ಟಲ್‌ ಸರ್ವಿಸಸ್‌) ಶ್ರೀಹರ್ಷ, ಮಂಗಳೂರು ವಿಭಾಗದ ಸೀನಿಯರ್‌ ಸುಪರಿಂಟೆಂಡೆಂಟ್‌ ದಿನೇಶ ಪಿ. ಮತ್ತಿತರರು ಇದ್ದರು.

ಇದನ್ನೂ ಓದಿ: ಖಾಸಗಿ ಕೊರಿಯರ್‌ಗಳಿಗೆ ಸೆಡ್ಡು: ಅಂಚೆ ಇಲಾಖೆಯ ಹೊಸ ಅಸ್ತ್ರ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಈ ಸೇವೆ!

ಇದೇ ಸಂದರ್ಭ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ವಿಜೇತರಾದ ಪುಣ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಅಕ್ಷತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ದಿನೇಶ ಪಿ. ಸ್ವಾಗತಿಸಿದರು. ಲೋಕನಾಥ ಎಂ. ವಂದಿಸಿದರು.

ಇದನ್ನೂ ಓದಿ: PPFಗಿಂತ ಹೆಚ್ಚಿನ ಬಡ್ಡಿ ನೀಡುವ ಅಂಚೆ ಕಚೇರಿಯ 6 ಉಳಿತಾಯ ಯೋಜನೆಗಳಿವು

PREV
Read more Articles on
click me!

Recommended Stories

ಕಾರವಾರ ಕರಾವಳಿಯಲ್ಲಿ ಸಾಂಪ್ರದಾಯಿಕ ಬೇಟೆಗೆ ಬಿದ್ದ ಬಂಗಾರ! ರಾಶಿ ರಾಶಿ ಮೀನು ನೋಡಿ ಮೀನುಗಾರರು ಫುಲ್ ಖುಷ್!
Bengaluru ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರದ ಮಾಸ್ಟರ್ ಪ್ಲಾನ್, ಕನ್ನಡಿಗರು ಓಕೆ! ಹಿಂದಿಗರು ಯಾಕೆ?