Shivamogga: ರೋಹಿತ್‌ ಚಕ್ರತೀರ್ಥ ವಿರುದ್ಧ ಗೋ ಬ್ಯಾಕ್‌ ಚಳ​ವ​ಳಿಗೆ ಸಜ್ಜು

By Govindaraj S  |  First Published Dec 28, 2022, 10:27 AM IST

ತೀರ್ಥಹಳ್ಳಿಯಲ್ಲಿ ಕಡಗೋಲು ವಿಚಾರ ಮಂಥನ ವೇದಿಕೆ ಆಯೋಜಿಸಿರುವ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ವಿಷಯ ಕುರಿತ ಕಾರ್ಯಕ್ರಮ ಸಾಕಷ್ಟುವಾದ-ವಿವಾದ, ಪರ-ವಿರೋಧ ಹುಟ್ಟು ಹಾಕಿದೆ. 


ಶಿವಮೊಗ್ಗ (ಡಿ.28): ತೀರ್ಥಹಳ್ಳಿಯಲ್ಲಿ ಕಡಗೋಲು ವಿಚಾರ ಮಂಥನ ವೇದಿಕೆ ಆಯೋಜಿಸಿರುವ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ವಿಷಯ ಕುರಿತ ಕಾರ್ಯಕ್ರಮ ಸಾಕಷ್ಟು ವಾದ-ವಿವಾದ, ಪರ-ವಿರೋಧ ಹುಟ್ಟು ಹಾಕಿದೆ. ಸದ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಹಾಗೂ ಈ ಹಿಂದೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್‌ ಚಕ್ರತೀರ್ಥ ಅವರ ತೀರ್ಥಹಳ್ಳಿ ಭೇಟಿ ವಿರೋಧಿಸಿ ಪ್ರಗತಿಪರರು ಗೋ ಬ್ಯಾಕ್‌ ಚಳವಳಿ ಆರಂಭಿಸಿಸಿದ್ದಾರೆ. ಬೆನ್ನಲ್ಲೇ ರೋಹಿತ್‌ ಚಕ್ರತೀರ್ಥ ಪರವಾಗಿ ಆಯೋಜಕರು ಕೂಡ ಗಟ್ಟಿನಿಲುವು ತಳೆದಿದ್ದಾರೆ.

ಡಿಸೆಂಬರ್‌ 28 ರಂದು ಸಂಜೆ 5.30ಕ್ಕೆ ತೀರ್ಥಹಳ್ಳಿಯ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್‌ ಚಕ್ರತೀರ್ಥ ಪಾಲ್ಗೊಳ್ಳುತ್ತಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಗತಿಪರ ಹೋರಾಟಗಾರರನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ಚಕ್ರತೀರ್ಥ ಗೋ ಬ್ಯಾಕ್‌ ಎಂದು ಚಳವಳಿಯನ್ನು ನಡೆಸುತ್ತಿದ್ದಾರೆ.

Tap to resize

Latest Videos

ಮಿಕ್ಸಿ ಬ್ಲಾಸ್ಟ್ ಪ್ರಕರಣ: ವಿಚ್ಚೇದಿತ ಮಹಿಳೆಯ ಹಿಂದೆ ಬಿದ್ದ ಪಾಗಲ್ ಪ್ರೇಮಿಯೇ ಅನಾಹುತಕ್ಕೆ ಕಾರಣ

ರಾಷ್ಟ್ರಕವಿ ಕುವೆಂಪು ಅವರಿಗೆ ರೋಹಿತ್‌ ಚಕ್ರತೀರ್ಥ ಅಪಮಾನ ಮಾಡಿದ್ದಾರೆಂಬುದು ಕೆಲವರ ಆರೋಪ. ಹೀಗಾಗಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿರುವ ರೋಹಿತ್‌ ಚಕ್ರತೀರ್ಥ ತೀರ್ಥಹಳ್ಳಿಗೆ ಯಾವುದೇ ಕಾರಣಕ್ಕೂ ಕಾಲಿಡಬಾರದು. ಒಂದು ವೇಳೆ ರೋಹಿತ್‌ ಚಕ್ರತೀರ್ಥ ತೀರ್ಥಹಳ್ಳಿಗೆ ಭೇಟಿ ನೀಡಿದರೆ ಭಾರಿ ಪ್ರತಿಭಟನೆ ಎದುರಿಸ ಬೇಕಾಗುತ್ತದೆ ಎಂದು ಕೆಲವು ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಪೂರ್ವ ನಿಗದಿಯಂತೆ ಕಾರ್ಯಕ್ರಮ ನಡೆಸಲು ಕಡಗೋಲು ವಿಚಾರ ಮಂಥನ ವೇದಿಕೆ ಸಕಲ ಸಿದ್ಧತೆ ಕೈಗೊಂಡಿದೆ. ಈ ನಡುವೆ ರೋಹಿತ್‌ ಚಕ್ರತೀರ್ಥ ಭೇಟಿಯ ನ್ನು ವಿರೋಧಿಸಿ ಪ್ರಗತಿಪರರು ಹೋರಾಟ ನಡೆಸಲು ಮುಂದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್‌ ಚಕ್ರತೀರ್ಥ ಗೋ ಬ್ಯಾಕ್‌ ಪೋಸ್ಟ್‌ ಸದ್ದು ಮಾಡತೊಡಗಿದ್ದರೆ, ಇದೆಲ್ಲದರ ನಡುವೆ ಕಾರ್ಯಕ್ರಮ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿರುವುದಂತು ನಿಜ.

ವಿರೋ​ಧ: ಪಠ್ಯ ಪರಿಷ್ಕರಣಿ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರೋಹಿತ್‌ ಚಕ್ರತೀರ್ಥ ರಾಷ್ಟ್ರ ಹಾಗೂ ರಾಜ್ಯದ ಮಹಾನ್‌ ವ್ಯಕ್ತಿಗಳಿಗೆ ಅಪಮಾನ ಮಾಡಿದ್ದಾರೆ. ಕುವೆಂಪು ಅವರಿಗೂ ಅವಹೇಳನ ಮಾಡಿದ್ದಾರೆ. ಹೀಗಿರುವಾಗ ಗುಂಪು ಕುರಿತು ಮಾತನಾಡುವ ಅರ್ಹತೆ ಚಕ್ರತೀರ್ಥ ಅವರಿಗಿಲ್ಲ ಎಂಬುದು ಚಕ್ರ​ತೀರ್ಥ ಭೇಟಿ ವಿರೋಧಿಸುತ್ತಿರುವ ಗುಂಪಿನ ವಾದ ವಾಗಿದೆ.

ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಗೆಲುವು ನನ್ನದೇ: ವರ್ತೂರು ಪ್ರಕಾಶ್‌

ತಿರು​ಗೇಟು: ಇದೆ ವೇಳೆ ರೋಹಿತ್‌ ಚಕ್ರತೀರ್ಥ ಅವರ ತೀರ್ಥಹಳ್ಳಿ ಭೇಟಿಯನ್ನು ಸಮರ್ಥಿಸಿಕೊಂಡಿರುವ ಕೆಲವರು, ರೋಹಿತ್‌ ಚಕ್ರತೀರ್ಥ ಅವರನ್ನು ಪೂರ್ವಗ್ರಹ ಪೀಡಿತರಾಗಿ ವಿರೋಧಿ ಸುತ್ತಿರುವ ವ್ಯಕ್ತಿಗಳ ಆರೋಪ ಆಧಾರ ರಹಿತವಾಗಿದೆ. ಅಷ್ಟೇ ಅಲ್ಲದೆ ಇಂತಹ ಫೋಟೋ ಬೆದರಿಕೆಗಳಿಗೆ ತೀರ್ಥಹಳ್ಳಿಯ ವಿಚಾರವಂತರು ಸೊಪ್ಪು ಹಾಕುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

click me!