Koppal: ಅಪಘಾತದಲ್ಲಿ ಗಾಯಗೊಂಡಿದ್ದವರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಗವಿಸಿದ್ದೇಶ್ವರ ಸ್ವಾಮೀಜಿ

By Govindaraj S  |  First Published Apr 7, 2022, 1:39 PM IST

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಸದಾ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡುವುದರಲ್ಲಿ ಸದಾ ಮುಂದೆ ಇರುತ್ತಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರೂ ಪ್ರಶಂಸೆ ಮಾಡುವಂತಹ ಮಾನವೀಯ ಕಾರ್ಯವೊಂದನ್ನು ಮಾಡಿದ್ದಾರೆ. 


ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಏ.07): ಕೊಪ್ಪಳದ (Koppal) ಗವಿಸಿದ್ದೇಶ್ವರ ಸ್ವಾಮೀಜಿ (Gavisiddeshwara Swamiji) ಸದಾ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡುವುದರಲ್ಲಿ ಸದಾ ಮುಂದೆ ಇರುತ್ತಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರೂ ಪ್ರಶಂಸೆ ಮಾಡುವಂತಹ ಮಾನವೀಯ ಕಾರ್ಯವೊಂದನ್ನು ಮಾಡಿದ್ದಾರೆ. ಅಷ್ಟಕ್ಕೂ ಯಾವುದು ಆ ಮಾನವೀಯ ಕಾರ್ಯ ನೋಡೋಣ ಈ ರಿಪೋರ್ಟ್‌ನಲ್ಲಿ.

Tap to resize

Latest Videos

ಅಪಘಾತದಲ್ಲಿ ಸಂದರ್ಭದಲ್ಲಿ ಸ್ವಾಮೀಜಿ ಮಾನವಿಯತೆ: ನಾವು ರಸ್ತೆಯಲ್ಲಿ ಹೋಗಬೇಕಾದರೆ ಎಲ್ಲಿಯಾದರೂ ಅಪಘಾತ (Accident) ಸಂಭವಿಸದರೆ ಸಾಕು ನಮಗೆ ಏಕೆ ಬೇಕಪ್ಪ ಉಸಾಬರಿ ಅಂತ ಸುಮ್ಮನೆ ಹೋಗುತ್ತವೆ. ಅಲ್ಲಿನ ಗಾಯಾಳುಗಳನ್ನು ಮಾತನಾಡಿಸುವುದಾಗಿ,ಆಸ್ಪತ್ರೆಗೆ ಸಾಗಿಸಿವುದಾಗಲಿ, ಅವರ ಚಿಕಿತ್ಸಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಲು ನಾವು ಮುಂದಾಗುವುದಿಲ್ಲ. ಆದರೆ ನಾವು, ನೀವು ಮಾಡಿದಂಗೆ ಗವಿಸಿದ್ದೇಶ್ವರ ಸ್ವಾಮೀಜಿ ಮಾಡಿಲ್ಲ. ಅದರ ಬದಲಾಗಿ ಗವಿಸಿದ್ದೇಶ್ವರ ಸ್ವಾಮೀಜಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಮಾನವೀಯತೆ ಮೆರೆದಿದ್ದಾರೆ.

Koppal: ನಿವೃತ್ತ ಶಿಕ್ಷಕಿಯ ಬದುಕಿಗೆ ನರೇಗಾ ಆಸರೆ: ಇಳಿ ವಯಸ್ಸಲ್ಲೂ ದುಡಿದು ತಿನ್ನುವ ಪರಿಸ್ಥಿತಿ..!

ಎಲ್ಲಿ ಅಪಘಾತ ಸಂಭವಿಸಿದ್ದು: ಪ್ರತಿದಿನವೂ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬೇರೆ ಊರುಗಳಿಗೆ ತೆರಳುತ್ತಾರೆ. ಅದರಂತೆ ಬುಧವಾರವೂ ಸಹ ಅವರು ಗಂಗಾವತಿ ಭಾಗಕ್ಕೆ ಪೂಜೆಗೆಂದು ತೆರಳಿರುತ್ತಾರೆ. ಪೂಜೆ ಮುಗಿಸಿಕೊಂಡು ಸಂಜೆ ಕೊಪ್ಪಳಕ್ಕೆ ಬರುವ ವೇಳೆಯಲ್ಲಿ ಗಂಗಾವತಿ ತಾಲೂಕಿನ ಚಿಕ್ಕ ಬೆಣಕಲ್ ಬಳಿ ಕಾರು ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದೆ.

ಗವಿಸಿದ್ದೇಶ್ವರ ಸ್ವಾಮೀಜಿ ಏನು ಮಾಡಿದರು: ಪೂಜೆ ಮುಗಿಸಿಕೊಂಡು ಗವಿಸಿದ್ದೇಶ್ವರ ಸ್ವಾಮೀಜಿ ಕೊಪ್ಪಳಕ್ಕೆ‌ ಬರುವ ಮಾರ್ಗ ಮಧ್ಯೆ ಚಿಕ್ಕಬೆಣಕಲ್‌ ಬಳಿ ಅಪಘಾತ ಸಂಭವಿಸಿದೆ. ಆಗಿನ್ನು ಅಪಘಾತವಾಗಿ 5 ನಿಮಿಷಗಳಷ್ಟೇ ಕಳೆದಿದೆ.‌ ಇದನ್ನು ಗವಿಸಿದ್ದೇಶ್ವರ ಸ್ವಾಮೀಜಿ ಗಮನಿಸಿದ್ದಾರೆ.‌ ಕೂಡಲೇ ಗವಿಸಿದ್ದೇಶ್ವರ ಸ್ವಾಮೀಜಿ ತಮ್ಮ ಕಾರಿನಿಂದ ಕೆಳಗಡೆ ಇಳಿದು ಬಂದಿದ್ದಾರೆ. ಆಗ ಕಾರು ಹಾಗೂ ಆಟೋದಲ್ಲಿದ್ದ ಗಾಯಾಳುಗಳನ್ನು ಮಾತನಾಡಿಸಿ ಅವರಿಗೆ ಮಾನಸಿಕ ಸ್ಥೈರ್ಯ ತುಂಬಿದ್ದಾರೆ. ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ ಈಶ್ವರ್ ಸವಡಿ ಅವರಿಗೆ ದೂರವಾಣಿ ಕರೆ ಮಾಡಿ, ಅಪಘಾತದ ವಿವರ ನೀಡಿದ್ದಾರೆ. ಬಳಿಕ ಗಾಯಾಳುಗಳನ್ನು ಆಸ್ಪತ್ರೆ ಕಳುಹಿಸುತ್ತೇವೆ.‌ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಹೇಳಿದ್ದಾರೆ. ಬಳಿಕ ಅವರು ಅಂಬುಲೆನ್ಸ್ ಸೇರಿದಂತೆ  ವಿವಿಧ ವಾಹನಗಳಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

Koppal: ಒಬ್ಬ ವಿದ್ಯಾರ್ಥಿಗಾಗಿ 30 ಸಿಬ್ಬಂದಿಯಿಂದ ಪರೀಕ್ಷೆಗೆ ತಯಾರಿ: ಕೊನೆಗೆ ಆತನೇ ಗೈರು ಹಾಜರು

ಗವಿಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ಕೆ ವ್ಯಾಪಕ‌ ಮೆಚ್ಚುಗೆ: ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಗವಿಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಜೊತೆಗೆ ಸ್ವಾಮೀಜಿಗಳ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ. ಕಷ್ಟದಲ್ಲಿ ಇರುವ ಭಕ್ತರ ಪರ ಸದಾ ಗವಿಸಿದ್ದೇಶ್ವರ ಸ್ವಾಮೀಜಿಯವರ ಹೃದಯ ಮಿಡಿಯುತ್ತದೆ ಎಂದು ಕೊಂಡಾಡಿದ್ದಾರೆ. ಜೊತೆಗೆ ಭಕ್ತರ‌ ಸಂಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿರುವ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಕೋಟಿ ನಮಗಳು ಎಂದು ಭಕ್ತರು ಕೊಂಡಾಡಿದ್ದಾರೆ. 

ಒಟ್ಟಿನಲ್ಲಿ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸುವ ಮೂಲಕ ಗವಿಸಿದ್ದೇಶ್ವರ ಸ್ವಾಮೀಜಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಬಹುದು. ಇವರ ಈ ಕಾರ್ಯ ನಿಜಕ್ಕೂ ಅನುಕರಣಿಯವೇ ಸರಿ.

click me!