* ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಿ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
* ಹುಲಿರಾಯನ ದಾಳಿಗೆ 100ಕ್ಕೂ ಹೆಚ್ಚು ಜಾನುವಾರುಗಳು ಬಲಿ
* ಆನೆ-ಹುಲಿ ದಾಳಿಯಿಂದ ಕೃಷಿಯಿಂದಲೂ ಹಿಂದೆ ಸರಿಯುತ್ತಿರುವ ಜನ
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ಏ.07): ಜಿಲ್ಲೆಯ ಮೂಡಿಗೆರೆ ಬಿ ಹೊಸಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಜನರು ಜೀವವನ್ನು ಕೈ ಹಿಡಿದು ಬದುಕು ಸಾಗಿಸುತ್ತಿದ್ದಾರೆ. ಹುಲಿರಾಯನ(Tiger) ದಾಳಿಗೆ ಗ್ರಾಮದಲ್ಲಿ ಈಗಾಗಲೇ ಬರೋಬ್ಬರಿ 100ಕ್ಕೂ ಹೆಚ್ಚು ಜಾನುವಾರುಗಳು(Livestock) ಜೀವ ಕಳೆದುಕೊಂಡಿವೆ. ಒಂದೂರು-ಎರಡೂರು ಅಲ್ಲ. ಬರೋಬ್ಬರಿ 20ಕ್ಕೂ ಹೆಚ್ಚು ಹಳ್ಳಿಗರು. ಹುಲಿ ದಾಳಿಯಿಂದ ಆತಂಕಕ್ಕೀಡಾಗಿಕಂಗಾಲಾಗಿದ್ದಾರೆ. ಭಯಭೀತರಾಗಿದ್ದಾರೆ. ಗ್ರಾಮಸ್ಥರು(Villagers) ಮನೆಯಿಂದ ಹೊರಬರೋಕು ಯೋಚಿಸುವಂತಾಗಿದೆ. ಹೊಲಗದ್ದೆ-ತೋಟಗಳಿಗೆ ಹೋಗೋಕ್ಕೆ ಚಿಂತಿಸುವಂತಾಗಿದೆ. ಹುಲಿಯಿಂದ ನಮ್ಗೆ ಭಯ, ನಾವು ಕೆಲಸಕ್ಕೆ ಬರಲ್ಲ ಅಂತಿದ್ದಾರೆ ಕಾರ್ಮಿಕರು.
ಮತ್ತೆ ಘರ್ಜಿಸಿದ ಹುಲಿರಾಯ : ಜಾನುವಾರು ಬಲಿ
ಮೂಡಿಗೆರೆ(Mudigere) ತಾಲ್ಲೂಕಿನ ಬಣಕಲ್ ಸಮೀಪದ ಬಿ.ಹೊಸಳ್ಳಿಯಲ್ಲಿ ಹುಲಿ ದಾಳಿ ಮುಂದುವರೆದಿದ್ದು ಹುಲಿ ದಾಳಿಯಿಂದ ಹಸು(Cow) ಮೃತಪಟ್ಟಿರುವ(Death) ಘಟನೆ ನಡೆದಿದೆ.ಕಳೆದ ಒಂದು ವರ್ಷಗಳಿಂದ ಬಿ.ಹೊಸಳ್ಳಿಯಲ್ಲಿ ನಿರಂತರ ಹುಲಿ ದಾಳಿ ಮಾಡಿ ಅನೇಕ ಹಸುಗಳನ್ನು ಕೊಂದು ಹಾಕಿದೆ. ನಿನ್ನೆಯೂ ಗ್ರಾಮದ ಗೋಪಾಲ್ ಅವರ ಹಸು ಮೇಯಲು ಬಿಟ್ಟಿದ್ದಾಗ ಹುಲಿ ದಾಳಿ ಮಾಡಿ ಸಾಯಿಸಿದೆ. ಸ್ಥಳಕ್ಕೆ ಅರಣ್ಯ ರಕ್ಷಕ ಮೊಹಸಿನ್, ಜಾನುವಾರು ಅಧಿಕಾರಿ ಅಜೀಜ್ ಅಹಮ್ಮದ್, ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
Wildlife: ನೀರು ಕುಡಿಯುತ್ತಿದ್ದ ಕಾಡೆಮ್ಮೆ ಬೆನ್ನಟ್ಟಿ ಹುಲಿ ಬೇಟೆ, ಮೈ ಜುಂ ಎನಿಸುವ ಅಪರೂಪದ ದೃಶ್ಯ
ಹುಲಿ ಸ್ಥಳಾಂತರಿಸಲು ಒತ್ತಾಯ
ಬಿ.ಹೊಸಳ್ಳಿ, ಭಾರತೀಬೈಲ್, ಬಾನಳ್ಳಿ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಹುಲಿ ದಾಳಿ ಸತತವಾಗಿ ನಡೆಯುತ್ತಿದೆ. ಅರಣ್ಯ ಇಲಾಖೆ(Forest Department) ಅಧಿಕಾರಿಗಳ ಗಮನಕ್ಕೂ ತಂದು ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಸುತ್ತಮುತ್ತ ಹುಲಿ ಸಂಚಾರದಿಂದ ಶಾಲಾ ಮಕ್ಕಳು,ಕೂಲಿಕಾರ್ಮಿಕರು,ಗ್ರಾಮಸ್ಥರು ಓಡಾಡಲು ಭಯ ಪಡುವಂತಾಗಿದೆ.ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಹುಲಿ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ವ್ಯಾಘ್ರ ಕಳೆದೊಂದು ವರ್ಷದಲ್ಲಿ 100ಕ್ಕೂ ಹೆಚ್ಚು ರಾಸುಗಳನ್ನ ಬಲಿಪಡೆದಿದೆ. ಗ್ರಾಮಸ್ಥರು ಹುಲಿ ದಾಳಿಯಿಂದ ನಾವೇ ಊರು ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ನೋವುವನ್ನು ಹೊರಹಾಕಿದ್ದಾರೆ. ಹಸುಗಳನ್ನ ಕಳ್ಕೊಂಡ್ರು ಪರಿಹಾರವೂ ಸಿಗ್ತಿಲ್ಲ. ಜೀವನವೇ ಸಾಕಾಗಿದೆ ಅಂತ ರೈತ(Farmer) ಗೋಪಾಲ್ ಅವಲತ್ತು ತೋಡಿಕೊಂಡಿದ್ದಾರೆ.
ಒಟ್ಟಾರೆ, ಒಂದೆಡೆ ಆನೆ-ಹುಲಿ ದಾಳಿಯಿಂದ ಜನ ಕೃಷಿಯಿಂದಲೂ(Agriculture) ಹಿಂದೆ ಸರಿಯುತ್ತಿದ್ದಾರೆ. ಮತ್ತೊಂದೆಡೆ ಹಾಲು ಮಾರಿ ಜೀವನದ ದಾರಿ ಕಂಡುಕೊಂಡಿದ್ದ ಜನರೂ ಈಗ ಹುಲಿ ದಾಳಿಯಿಂದ ನೆಮ್ಮದಿ ಕಳೆದುಕೊಂಡಿದ್ದಾರೆ. ಇದು ಹೀಗೆ ಮುಂದುವರೆದರೆ ಭವಿಷ್ಯದ ಬದುಕೇನು ಅನ್ನೋದು ಜನಸಾಮಾನ್ಯರ ಪ್ರಶ್ನೆ.
ಕಾರ್ಮಿಕನ ಮೇಲೆ ಹುಲಿ ದಾಳಿ: ಸ್ಥಳದಲ್ಲೇ ದುರ್ಮರಣ
ವಿರಾಜಪೇಟೆ (ಮಾ.28): ತೋಟವೊಂದರಲ್ಲಿ ಕಾಳು ಮೆಣಸು ಕುಯ್ಯಲು ಬಂದ ಕಾರ್ಮಿಕನ ಮೇಲೆ ವ್ಯಾಘ್ರ ದಾಳಿ (Tiger Attack) ನಡೆಸಿ ಹತ್ಯೆ ಮಾಡಿದ ಘಟನೆ ವಿರಾಜಪೇಟೆ ತಾಲ್ಲೂಕಿನ ಮೊದಲ ರುದ್ರಗುಪ್ಪೆ ಗ್ರಾಮದಲ್ಲಿ ಮಾ.28 ರಂದು ನಡೆದಿತ್ತು.
Mysuru Tiger Attack: ಎಚ್ ಡಿ ಕೋಟೆ: ಹುಲಿ ದಾಳಿಗೆ ರೈತ ಬಲಿ!
ವಿರಾಜಪೇಟೆ ತಾಲ್ಲೂಕಿನ ಬಿಟ್ಟಾಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಡಂಗಾಲ, ಒಂದನೇ ರುದ್ರಗುಪ್ಪೆ ಕೊಂಗಂಡ ಗಣಪತಿ ಅಯ್ಯಪ್ಪ ಅವರ ಕಾಫಿ ತೊಟದ ಕಾರ್ಮಿಕ ಗಣೇಶ್ ಪುಟ್ಟು (29) ಹುಲಿ ದಾಳಿಗೆ ಬಲಿಯಾದ (Death) ವ್ಯಕ್ತಿ. ವಿರಾಜಪೇಟೆ ತಾಲ್ಲೂಕಿನ ಕಂಡಂಗಾಲ ರುದ್ರಗುಪ್ಪೆ ಕುಂದ ಭಾಗದಲ್ಲಿ ಕೆಲವು ತಿಂಗಳಿನಿಂದ ಹುಲಿಯಿಂದ ಜಾನುವಾರುಗಳ ಮೇಲೆ ದಾಳಿ ನಡೆದಿರುವ ಘಟನೆಯು ಮಾಸುವ ಮುನ್ನವೇ ಹುಲಿ ದಾಳಿಗೆ ಕಾರ್ಮಿಕನೊರ್ವನ ಮೇಲೆ ದಾಳಿ ನಡೆದು ಮೃತನಾದ ಘಟನೆ ನಡೆದಿತ್ತು.
ವಿರಾಜಪೇಟೆ ಗೊಣಿಕೊಪ್ಪ ಗದ್ದೆಮಾನಿ ನಿವಾಸಿ ಗಣೇಶ್ ಪುಟ್ಟು ಮತ್ತು ಸ್ನೇಹಿತ ರುದ್ರಗುಪ್ಪೆ ಗ್ರಾಮ ಕೊಂಗಂಡ ಅಯ್ಯಪ್ಪ ಅವರ ತೋಟಕ್ಕೆ ಕಾಳು ಮೆಣಸು ಕುಯ್ಯಲು ಆಗಮಿಸಿದ್ದಾರೆ. ಇಂದು ಬೆಳಗಿನಿಂದ ತೋಟದಲ್ಲಿ ಕಾಳು ಮೆಣಸು ಕೊಯ್ಯುವ ಕಾರ್ಯದಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಮಧ್ಯಾಹ್ನ ಸಮಯ ಸುಮಾರು 3:20ರ ವೇಳೆಯಲ್ಲಿ ಸ್ಥಳೀಯ ಕೊಂಗಂಡ ಬೋಪಣ್ಣ ಅವರ ಹಸುವಿನ ಮೇಲೆ ಹುಲಿಯೊಂದು ದಾಳಿ ಮಾಡಿದೆ ಸಾಕು ನಾಯಿಗಳು ಹುಲಿಯನ್ನು ನೋಡಿ ಸದ್ದು ಮಾಡಿದೆ ಇದರಿಂದ ಕುಪಿತವಾದ ಹುಲಿಯು ಸ್ಥಳದಿಂದ ತೆರಳಿದೆ.