Bidar: ಬ್ರಿಮ್ಸ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ: ಆತಂಕದಲ್ಲಿ ರೋಗಿಗಳು

By Girish GoudarFirst Published Apr 7, 2022, 12:03 PM IST
Highlights

*  ಬ್ರಿಮ್ಸ್ ಆಸ್ಪತ್ರೆಯ ವೇಸ್ಟೇಜ್‌ನಲ್ಲಿ ಕಾಣಿಸಿಕೊಂಡ ಬೆಂಕಿ 
*  ಬ್ರಿಮ್ಸ್‌ನ ಐಸೋಲೇಟೆಡ್ ವಾರ್ಡ್‌ನಲ್ಲಿ ತುಂಬಿಕೊಂಡ ಹೊಗೆ
*  ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಅಗ್ನಿ ಶಾಮಕ ದಳದ ಸಿಬ್ಬಂದಿ
 

ಬೀದರ್(ಏ.07):  ಬೀದರ್(Bidar) ಬ್ರಿಮ್ಸ್ ಆಸ್ಪತ್ರೆ ಒಂದಿಲ್ಲ ಒಂದು ಎಡವಟ್ಟು, ಭ್ರಷ್ಟಾಚಾರ, ಅವ್ಯವಸ್ಥೆಯಿಂದ ಸುದ್ದಿಯಲ್ಲಿರೋದು ಕಾಮನ್ ಈಗ ಮತ್ತೊಂದು ಅವಘಡದಿಂದ ಬ್ರಿಮ್ಸ್ ಸುದ್ದಿಯಾಗಿದೆ. ಬ್ರಿಮ್ಸ್ ಬೋಧಕ ಆಸ್ಪತ್ರೆಯ ಹಿಂಬದಿಯಲ್ಲಿ ವೇಸ್ಟ್ ಆಗಿ ಬಿದಿದ್ದ ಬೆಡ್‌ಗಳ ರಾಸಿಗೆ ಇಂದು(ಗುರುವಾರ) ಬೆಳ್ಳಂ ಬೆಳಿಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ವೇಸ್ಟೇಜ್ ಬೆಡ್‌ಗಳ ಕುಂಪೆ ದಗಧಗನೇ ಹೊತ್ತಿ ಉರಿಯಲು ಆರಂಭಿಸುತ್ತಿದ್ದಂತೆ ಬ್ರಿಮ್ಸ್‌ನ ಹಲವು ವಾರ್ಡ್‌ಗಳಲ್ಲಿ ಹೊಗೆ ತುಂಬಿಕೊಂಡು ರೋಗಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು.

ಸ್ಥಳಕ್ಕೆ ಬ್ರಿಮ್ಸ್(BRIMS) ನಿರ್ದೇಶಕ ಸೇರಿದಂತೆ ವೈದ್ಯಾಧಿಕಾರಿ ದೌಡಾಯಿಸಿದ್ದಾರೆ. ಕೂಡಲೇ ಅಗ್ನಿ ಶಾಮಕ ದಳಕ್ಕೆ(Fire Department) ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಹೊತ್ತಿ ಉರಿಯುತ್ತಿದ್ದ ಬೆಂಕಿ(Fire) ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Daylight Murder: ಬಾರ್ ಎದುರು ರಕ್ತದ ಮಡುವಿನಲ್ಲಿ ಬಿದ್ದಿದ್ದ.. ವಿಜಯನಗರದಲ್ಲಿ ಇದೆಂಥಾ ಕೊಲೆ!

ಬೆಡ್‌ಗಳಿಗೆ ಬೆಂಕಿ ಹೊತ್ತಿ ಉರಿಯುತ್ತಿರುವ ಪರಿಣಾಮ ಬ್ರಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಹೊಗೆ ಆವರಿಸಿಕೊಂಡಿತ್ತು. ಆಸ್ಪತ್ರೆಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಆತಂಕಗೊಂಡಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಆವರಿಸಿಕೊಂಡಿದ್ದ ವಾರ್ಡ್‌ನಲ್ಲಿನ ರೋಗಿಗಳಿಗೆ ಬೇರೆ ವಾರ್ಡ್ ಶಿಫ್ಟ್ ಮಾಡಲಾಯಿತು. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ಪಡೆಯುತ್ತಿದ್ದ ಒಳ ರೋಗಿಗಳು(Patients), ಬೆಳ್ಳಂ ಬೆಳಿಗ್ಗೆ ಚಿಕಿತ್ಸೆಗೆ ಬಂದಿದ್ದ ರೋಗಿಗಳಿಗೆ ಭಯ ಹುಟ್ಟಿಸುವಂತೆ ಮಾಡಿತ್ತು. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 
 

click me!