ಲೋಕಾಯುಕ್ತ ಇಲಾಖೆ ಚುನಾವಣೆ ಸಂದರ್ಭದಲ್ಲಿ ಮುಡಾ ಪ್ರಕರಣ ಸಂಬಂಧ ನೋಟೀಸ್ ಕೊಟ್ಟಿದೆ. ಮೊನ್ನೆ ನೋಟಿಸ್ ನೀಡಿ ತಕ್ಷಣ ತನಿಖೆಗೆ ಹೋಗುವಾಗ ಜತೆಯಲ್ಲಿ ಶಾಸಕ ಹೊನ್ನಣ್ಣ ಅವರನ್ನು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಕರೆದುಕೊಂಡು ಹೋಗಿರುವುದು ಲೋಕಾಯುಕ್ತದ ಮೇಲೆ ಅನುಮಾನ ಬರುವಂತೆ ಮಾಡಿದೆ ಎಂದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ
ಶಿರಾಳಕೊಪ್ಪ(ನ.08): ಲೋಕಾಯುಕ್ತ ನಡೆಸುತ್ತಿರುವ ಮೂಡಾ ತನಿಖೆ ರಾಜ್ಯದ ದಿಕ್ಕು ತಪ್ಪಿಸುವ ಅನುಮಾನಾಸ್ಪದ ತನಿಖೆಯಾಗಿದೆ. ಮುಖ್ಯಮಂತ್ರಿಗಳ ಆತುರ ನೋಡಿದರೆ ಬೇಗ ಕ್ಲೀನ್‌ಚಿಟ್ ಪಡೆಯುವ ಆತುರ ಹಾಗೂ ಲೋಕಾಯುಕ್ತ ತನಿಖೆ ದಿಕ್ಕು ನೋಡಿದರೆ ರಾಜ್ಯದ ಜನಕ್ಕೆ ಅನುಮಾನಬರುತ್ತಿದೆ ಎಂದು ಶಿಕಾರಿಪುರ ತಾಲೂಕು ಶಾಸಕ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಶಿರಾಳಕೊಪ್ಪದಲ್ಲಿ ಬುಧವಾರ ಬಸ್ಸ್ ನಿಲ್ದಾಣದ ವ್ರತ್ತದಲ್ಲಿ ಕೇಕ್ ಕತ್ತರಿಸಿ ಅವರ ಅಭಿಮಾನಿಗಳು ಹುಟ್ಟುಹಬ್ಬ ಆಚರಣೆ ಮಾಡಿದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲೋಕಾಯುಕ್ತ ಇಲಾಖೆ ಚುನಾವಣೆ ಸಂದರ್ಭದಲ್ಲಿ ಮುಡಾ ಪ್ರಕರಣ ಸಂಬಂಧ ನೋಟೀಸ್ ಕೊಟ್ಟಿದೆ. ಮೊನ್ನೆ ನೋಟಿಸ್ ನೀಡಿ ತಕ್ಷಣ ತನಿಖೆಗೆ ಹೋಗುವಾಗ ಜತೆಯಲ್ಲಿ ಶಾಸಕ ಹೊನ್ನಣ್ಣ ಅವರನ್ನು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಕರೆದುಕೊಂಡು ಹೋಗಿರುವುದು ಲೋಕಾಯುಕ್ತದ ಮೇಲೆ ಅನುಮಾನ ಬರುವಂತೆ ಮಾಡಿದೆ ಎಂದರು.
undefined
ಸಿದ್ದರಾಮಯ್ಯ ರಾಜೀನಾಮೆ ಫಿಕ್ಸಾಗಿದೆ, ಹುಡುಗಾಟಕ್ಕೆ ಹೇಳ್ತಿಲ್ಲ: ಬಿ.ವೈ.ವಿಜಯೇಂದ್ರ
ಹೈಕೋರ್ಟ್‌ನಲ್ಲಿ ಸಿಬಿಐ ತನಿಖೆಗೆ ಕೊಡಬೇಕು ಎಂದು ಎಮರ್ಜನ್ಸಿ ನೋಟೀಸ್ ಕೂಡ ಕೊಡಲಾಗಿದೆ.ಇಂತಹ ಚರ್ಚೆ ನಡೆಯುತ್ತಿರುವಾಗ ಲೋಕಾಯುಕ್ತ ಇಲಾಖೆ ಮೇಲೆ ಒತ್ತಡ ಹೇರಲಾಗುತ್ತಿದ್ದು, ಈ ನಡೆ ಆತುರದಲ್ಲಿ ನಡೆಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ರಾಜ್ಯದ ಉಪಚಾನಾವಣೆ ಬಗ್ಗೆ ಪತ್ರಿಕೆಯವರು ಪಶ್ನಿಸಿದಾಗ, ಶಿಗ್ಗಾವಿಯಲ್ಲಿ ಭರತ್ ಬೊಮ್ಮಯಿ, ಸಂಡೂರುನಲ್ಲಿ ಬಂಗಾರು ಹನುಮಂತ ಹಾಗೂ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರ ಸ್ವಾಮಿ ಅವರು ಗೆಲ್ಲುವ ವಾತಾವರಣ ನಿರ್ಮಾಣ ಉಂಟಾಗಿದೆ. ಇಂದು ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಯಾವುದೇ ಅಭಿವೃದ್ಧಿಗೆ ಹಣವಿಲ್ಲ. ಇದೊಂದು ಜನವಿರೋಧಿ ಸರ್ಕಾರ. ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಮತದಾರರೇ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ಯತ್ನಾಳ್, ಜಾರಕಿಹೊಳಿ ಹೇಳಿಕೆಗೆ ಕಿಮ್ಮತ್ತಿಲ್ಲ, ಅವರ ಆಟ ಜಾಸ್ತಿ ದಿನ ನಡೆಯಲ್ಲ: ವಿಜಯೇಂದ್ರ
ರಾಜ್ಯದಲ್ಲಿ ಅತಿವೃಷ್ಠಿಯಿಂದ ಜನರು ನರಳುತ್ತಿದ್ದಾರೆ. ತಮಗೆ ಸಂಬಂಧವಿಲ್ಲ ಎಂಬಂತೆ ಮುಖ್ಯಮಂತ್ರಿ ಇದ್ದಾರೆ. ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ರೀತಿ ಇದೇನಾ ಎಂದು ಪ್ರಶ್ನಿಸಿದ ವಿಜಯೇಂದ್ರ, ರಾಜ್ಯ ಸರ್ಕಾರದ ಎಲ್ಲ ಸಚಿವರು, ಶಾಸಕರು ಉಪ ಚುನಾವಣೆಯಲ್ಲಿ ಮುಳುಗಿದ್ದಾರೆ. ಒಂದೊಂದು ಕ್ಷೇತ್ರಕ್ಕೆ 7-8 ಮಂತ್ರಿಗಳು ಇದ್ದಾರೆ. ಪ್ರತಿ ಗ್ರಾಪಂಗೆ ಒಬ್ಬ ಶಾಸಕರು ಇದ್ದು ಚುನಾವಣೆಯಲ್ಲಿ ಮುಳಗಿದ್ದಾರೆ. ಆದಷ್ಟು ಬೇಗ ಈ ಸರ್ಕಾರ ತೊಲಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಚೆನ್ನವೀರಶಟ್ಟಿ, ಮಾಜಿ ಅಧ್ಯಕ್ಷ ಮಂಚಿ ಶಿವಣ್ಣ, ಕಾರ್ಯದರ್ಶಿ ರವಿ ಶಾನಭೋಗ, ಎಚ್. ಎಂ. ಚಂದ್ರಶೇಖರ, ದಿವಾಕರ್ ಸೇರಿದಂತೆ ಹಲವರು ಹಾಜರಿದ್ದರು.