ಕೊಪ್ಪಳ(Koppal) ಎಂದ ಕೂಡಲೇ ಕೋಟೆ ಹಾಗು ಗುಡ್ಡಗಳು ಕಣ್ಮುಂದೆ ಬರುತ್ತವೆ. ಅಂತಹ ಗಿರಿ- ಗುಹೆಯೊಳಗೆ ಕೊಪ್ಪಳ ಗವಿಮಠ(Koppal Gavimutt) ಭಕ್ತರ ಭಕ್ತಿಯ ಶಕ್ತಿ ಹಾಗೂ ಗವಿಸಿದ್ದೇಶ್ವರ(Gavisiddeshwar swamy)ರ ತಪೋಶಕ್ತಿಯಿಂದ ಜನರ ಬಾಳಿಗೆ ಬೆಳಕು ಚೆಲ್ಲುತ್ತಿದೆ. ಭೂ ಕೈಲಾಸವಾಗಿ ಗವಿಮಠ ಪರಿವರ್ತನೆ ಆಗಿದೆ.
ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕುಕನೂರು (ಜ.8) : ಗವಿಮಠದ 17 ಪೀಠಾಧೀಪತಿಗಳಾದ ಲಿಂ. ಶಿವಶಾಂತವೀರ ಸ್ವಾಮೀಜಿ ಅವರು ರಚಿಸಿದ ಗವಿಸಿದ್ದೇಶ್ವರ ಸುಪ್ರಭಾತದ 14ನೇ ನುಡಿ ಇದು. ಈ ನುಡಿಯಂತೆ ಗವಿಮಠದ ಜಾತ್ರೆಗೆ ಸೇವೆ ಮಾಡಲು ಸರ್ವವೃಂದವೂ ಬಂದಿದೆ. ಅಜ್ಜನ ಸೇವೆ ಮಾಡಲು ಸ್ವಯಂಪ್ರೇರಿತವಾಗಿ ಸಾಲು ಸಾಲಾಗಿ ಭಕ್ತರು ಬರುತ್ತಿದ್ದಾರೆ ಎಂಬುದನ್ನು ಈ ಪದ್ಯದ ಸಾಲುಗಳು ಸಾರುತ್ತಿವೆ. ಸದ್ಯ ಅದೇ ರೀತಿ ಸಾವಿರಾರು ಜನರು ಗವಿಸಿದ್ದೇಶ್ವರ ಜಾತ್ರೋತ್ಸವ, ಮಹಾದಾಸೋಹದಲ್ಲಿ ಅಡುಗೆ ಮಾಡಲು, ಬಡಿಸಲು, ಜನರನ್ನು ನಿಯಂತ್ರಿಸಲು ಸೇವೆಗೆ ಅಣಿಯಾಗಿದ್ದಾರೆ.
ಕೊಪ್ಪಳ(Koppal) ಎಂದ ಕೂಡಲೇ ಕೋಟೆ ಹಾಗು ಗುಡ್ಡಗಳು ಕಣ್ಮುಂದೆ ಬರುತ್ತವೆ. ಅಂತಹ ಗಿರಿ- ಗುಹೆಯೊಳಗೆ ಕೊಪ್ಪಳ ಗವಿಮಠ(Koppal Gavimutt) ಭಕ್ತರ ಭಕ್ತಿಯ ಶಕ್ತಿ ಹಾಗೂ ಗವಿಸಿದ್ದೇಶ್ವರ(Gavisiddeshwar swamy)ರ ತಪೋಶಕ್ತಿಯಿಂದ ಜನರ ಬಾಳಿಗೆ ಬೆಳಕು ಚೆಲ್ಲುತ್ತಿದೆ. ಭೂ ಕೈಲಾಸವಾಗಿ ಗವಿಮಠ ಪರಿವರ್ತನೆ ಆಗಿದೆ.
Koppal: ಗವಿಸಿದ್ದೇಶ್ವರ ಜಾತ್ರೆಗೆ 30 ಟನ್ ಶೇಂಗಾ ಹೋಳಿಗೆ, 10 ಕ್ವಿಂಟಲ್ ತುಪ್ಪ!
ಗುರುಪರಂಪರೆಗೆ ಸಾಕ್ಷಿಯಾದ ಗವಿಮಠದ 11ನೇ ಪೀಠಾಧೀಪತಿಗಳಾದ ಗವಿಸಿದ್ದೇಶ್ವರರ ತಮ್ಮ ಗುರುಗಳಿಗೆ ನಿರ್ಮಿಸಿದ ಗದ್ದುಗೆಯಲ್ಲಿ ತಾವೇ ಜೀವಂತ ಸಮಾಧಿಯಾಗಿ ಗುರು ಮಹಿಮೆ ಮೆರೆದರು. ಗವಿಸಿದ್ದೇಶ್ವರರು ಬಾಲಕರಿರುವಾಗಲೇ ಅನೇಕ ಪವಾಡಗಳನ್ನು, ಲೀಲೆಗಳನ್ನು ಮಾಡಿ ಭಕ್ತವೃಂದಕ್ಕೆ ಬೆಳಕಾಗಿದ್ದರು. ಅದೇ ಪರಂಪರೆಯಲ್ಲಿ ಸದ್ಯದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಸಹ ಕೊಪ್ಪಳ ಗವಿಮಠವನ್ನು ಜ್ಞಾನಫಲ ಸಾರುವ ಶಕ್ತಿ ಕೇಂದ್ರವನ್ನಾಗಿಸಿದ್ದಾರೆ.
ಮಕ್ಕಳಿಗೆ ಶಿಕ್ಷಣದ ಜತೆಗೆ ಅನ್ನ, ಅರಿವು, ಆರೋಗ್ಯ ನೀಡುತ್ತಿದ್ದಾರೆ. ಗವಿಮಠದ ಗಿರಿ ಗುಹೆಯೊಳಗೆ ದೀಪದ ಬೆಳಕಿತ್ತ, ಶಿವಶಾಂತ ಯೋಗಿಯ ನಾಮದಿ ಬಾನು ಭುವಿಗಳ ಬೆಳಗಿತ್ತ ಎಂಬ ಗವಿಶ್ರೀಗಳ ರಚಿತ ಪದ್ಯದ ಸಾಲುಗಳು ಮತ್ತೆ ಗವಿಮಠದ ಗುರುಗಳ ತಪೋಶಕ್ತಿಯನ್ನು ಎತ್ತಿ ಹಿಡಿಯುತ್ತವೆ. ಗವಿಮಠದಿಂದ ಜ್ಞಾನ ಹಾಗೂ ಸಾಮಾಜಿಕ ಸುಧಾರಣೆ ಕೆಲಸ ಹೇರಳ ರೀತಿಯಲ್ಲಿ ಜರುಗುತ್ತಿವೆ. ಸಾಮಾಜಿಕ ಕಳಕಳಿಯ ಕೇಂದ್ರವಾಗಿ ಗವಿಮಠ ಹೊರಹೊಮ್ಮಿದೆ. ಅಲ್ಲದೆ ಗವಿಸಿದ್ದೇಶ್ವರ ಸ್ವಾಮೀಜಿ ಅವರು ರಾಜ್ಯ ಮಾತ್ರವಲ್ಲದೆ ಅನ್ಯರಾಜ್ಯದಲ್ಲೂ ಪ್ರವಚನ ನೀಡುತ್ತಾ ಗವಿಮಠದ ಹಿರಿಮೆ ಹೆಚ್ಚಿಸಿದ್ದಾರೆ.
ಬೆಳಕಿನಡೆಗೆ ಕಾರ್ಯಕ್ರಮ:
ಪ್ರತಿ ಅಮಾವಾಸ್ಯೆ ದಿನದಂದು ಗವಿಮಠದ ಕೆರೆಯ ದಡದಲ್ಲಿ ‘ಕತ್ತಲೆಯಿಂದ ಬೆಳಕಿನೆಡೆಗೆ’ ಕಾರ್ಯಕ್ರಮ ಜರುಗುತ್ತದೆ. ಸಾವಿರಾರು ಜನರು ಭಾಗಿಯಾಗುತ್ತಾರೆ. ಪ್ರತಿ ಅಮಾವಾಸ್ಯೆ ದಿನ ಗವಿಸಿದ್ದೇಶ್ವರರ ಹರಕೆ ತೇರು ಗವಿಸಿದ್ದೇಶ್ವರ ಗದ್ದುಗೆ ಸುತ್ತಲು ಜರುಗುತ್ತದೆ. ಹರಕೆ ಹೊತ್ತ ಭಕ್ತರು ಹರಕೆ ರಥೋತ್ಸವಕ್ಕೆ ಅಣಿಯಾಗುತ್ತಾರೆ.
ನೂರಾರು ಶ್ರೀಗಳ ಆಗಮನ:
ಗವಿಮಠ ಜಾತ್ರೆಗೆ ನೂರಾರು ಶ್ರೀಗಳು ಆಗಮಿಸುತ್ತಾರೆ. ಅತಿ ಹೆಚ್ಚು ಶ್ರೀಗಳು ಆಗಮಿಸುವ ಜಾತ್ರೆಗೆ ಗವಿಮಠ ರಥೋತ್ಸವ ಸಹ ಭಾಜನವಾಗಲಿದೆ. ಅಲ್ಲದೆ ಜಾತ್ರಾ ಮಹೋತ್ಸವ ಮುಗಿಯುವವರೆಗೂ ಎರಡು ಮೂರು ದಿನಗಳ ಕಾಲ ಗವಿಮಠದಲ್ಲಿ ಭಕ್ತರಿಗೆ ನಾನಾ ಶ್ರೀಗಳ ದರ್ಶನ ಭಾಗ್ಯ ಸಿಗಲಿದೆ.
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ 7 ದಿನ ಬಾಕಿ; ಮಹಾದಾಸೋಹಕ್ಕೆ ಭರದ ಸಿದ್ಧತೆ
ಅನುಷ್ಠಾನಪ್ರಿಯ ಗವಿಶ್ರೀಗಳು:
ಪ್ರತಿ ಮಂಗಳವಾರ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಮೌನದಿ ಬೆರೆತು ಅನುಷ್ಠಾನ ಗೈಯುತ್ತಾರೆ. ಅಂದು ಎಲ್ಲಿಗೂ ಪ್ರಯಾಣ ಬೆಳೆಸದೆ, ಮಠದಲ್ಲಿಯೇ ಪೂಜೆ, ಧ್ಯಾನ, ಅಭ್ಯಾಸದಲ್ಲಿ ತೊಡಗಿರುತ್ತಾರೆ. ಎಂತಹ ಸಂದರ್ಭ ಬಂದರೂ ಪ್ರತಿ ಮಂಗಳವಾರ ಮಾತನಾಡದೆ ಮೌನವಾಗಿದ್ದು, ಸನ್ನೆ ಮುಖಾಂತರ ಸೂಚನೆ ನೀಡುತ್ತಾರೆ. ಗವಿಸಿದ್ದೇಶ್ವರ ಶ್ರೀಗಳು ಅನುಷ್ಠಾನಪ್ರಿಯರಾಗಿದ್ದಾರೆ.