ಚಿತ್ರದುರ್ಗ (ಆ.13) : ಸಮಾಜ ಕಲ್ಯಾಣ ಇಲಾಖೆ ಚಿತ್ರದುರ್ಗ ವ್ಯಾಪ್ತಿಯಲ್ಲಿ 24 ಕೋಟಿ ರು. ಅವ್ಯವಹಾರವಾಗಿದ್ದು, ದಾಖಲಾತಿ ಪರಿಶೀಲಿಸದೆ 25 ಸಂಘ ಸಂಸ್ಥೆ , ಟ್ರಸ್ಟ್‌ಗೆ ಅನುದಾನ ಮಂಜೂರು ಮಾಡಲಾಗಿದೆ ಎಂದು ರೈತ ಸಂಘ ಹಾಗೂ ಹಸಿರುಸೇನೆ ದಾವಣಗೆರೆ ಜಿಲ್ಲಾಧ್ಯಕ್ಷ ಚಿನ್ನಸಮುದ್ರ ಶೇಖರ್‌ನಾಯ್ಕ ಆರೋಪಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟಜಾತಿ, ಪರಿಶಿಷ್ಟವರ್ಗದವರ ಅಭಿವೃದ್ಧಿಗಾಗಿ ಬಿಡುಗಡೆಯಾಗುತ್ತಿರುವ ಕೋಟ್ಯಂತರ ರು. ಅನುದಾನವನ್ನು ಪರಿಶಿಷ್ಟಜನಾಂಗದ ಮುಖಂಡರೇ ಕಬಳಿಸಿದ್ದಾರೆ. ತಪ್ಪಿತಸ್ಥರನ್ನು ತಕ್ಷಣವೆ ಬಂಧಿಸಿ ತನಿಖೆ ನಡೆಸುವಂತೆ ಆಗ್ರಹಿಸಿದರು.
Karnataka Politics: ಗಂಗಾಕಲ್ಯಾಣದಲ್ಲಿ 431 ಕೋಟಿ ಗೋಲ್ಮಾಲ್: ಪ್ರಿಯಾಂಕ್ ಖರ್ಗೆ
undefined
ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದಾಖಲೆಗಳನ್ನು ಪರಿಶೀಲಿಸದೆ 25 ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು, ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ವಿದ್ಯಾರ್ಥಿನಿಲಯಗಳು, ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ಮಂಜೂರು ಮಾಡಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಸಹಾಯಧನ ಪಡೆದಿರುವ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಪರಿಶಿಷ್ಟಜಾತಿ/ಪರಿಶಿಷ್ಟವರ್ಗಗಳ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಸರ್ಕಾರಕ್ಕೆ ವಂಚನೆ ಮಾಡಿರುವ ಎಲ್ಲಾ ಸಂಸ್ಥೆಗಳಿಂದ ಹಣ ಬಿಡುಗಡೆಯಾದ ದಿನದಿಂದ ಶೇ.10 ರಷ್ಟುಬಡ್ಡಿಯನ್ನು ಸೇರಿಸಿ ವಸೂಲಾತಿಗೆ ಕ್ರಮ ವಹಿಸಬೇಕು. ಈ ಸಂಬಂಧ ಇಲಾಖೆಗೆ ನಿರ್ದೇಶನ ನೀಡುವಂತೆ ಶೇಖರ್‌ನಾಯ್ಕ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಮೇಲ್ಜಾತಿಗೆ ಸೇರಿದ ಜಿಲ್ಲೆಯ ಮಠಾಧೀಶರೊಬ್ಬರು ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಕ್ಕೆ ಸಿಗಬೇಕಾದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಎಸ್ಸಿ.ಎಸ್ಟಿ.ದೌರ್ಜನ್ಯ ತಡೆ ಕಾಯಿದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. 25 ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು, ಧಾರ್ಮಿಕ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಇಲ್ಲವಾದಲ್ಲಿ ಮುಂದೆ ಹೋರಾಟ ನಡೆಸಲಾಗುವುದೆಂದು ಚಿನ್ನಸಮುದ್ರ ಶೇಖರ್‌ನಾಯ್ಕ ಎಚ್ಚರಿಸಿದರು.
40 ಪರ್ಸೆಂಟ್ ಅಲ್ಲ, 100ಕ್ಕೆ ನೂರು ಭ್ರಷ್ಟ ಸರ್ಕಾರ: ಈಶ್ವರ ಖಂಡ್ರೆ
ಅಂಬೇಡ್ಕರ್ ಭವನ ನಿರ್ಮಿಸಲು ಆಗ್ರಹ
ಬಾಗೇಪಲ್ಲಿ: ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿಲು ನಿವೇಶನಕ್ಕೆ ಸಂಬಂಧಿಸದಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೂಚನೆ ಮೇರೆಗೆ ತಾಪಂ ಸಭಾಂಗಣದಲ್ಲಿ ದಲಿತ ಸಂಘಟನೆಗಳ ಮುಖಂಡರ ಸಭೆಯನ್ನು ಸಮಾಜ ಕಲ್ಯಾಣ ಇಲಾಖೆವತಿಯಿಂದ ಕರೆದಿದ್ದ ಸಭೆ ಕೊನೆಗಳಿಗೆಯಲ್ಲಿ ರದ್ದುಪಡಿಸಲಾಯಿತು. ಇದರಿಂದ ಕುಂಪಿಗೊಂಡ ದಲಿತ ಸಂಘಟನೆಗಳ ಮುಖಂಡರು ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟಿರುವ ಜಾಗದ ವಿಚಾರದಲ್ಲಿ ಗೊಂದಲ ಸೃಷ್ಟಿಸಿರುವುದನ್ನು ಖಂಡಿಸಿ ಹಾಗೂ ಮೀಸಲಿಟ್ಟಿರುವ ಜಾಗದಲ್ಲಿಯೇ ಅಂಬೇಡ್ಕರ್ ಭವನಕ್ಕೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಗುರುವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘಟಟನೆಗಳ ಒಕ್ಕೂಟದ ಮುಖಂಡರಾದ ಆ.ನಾ.ಮೂರ್ತಿ, ಎ.ವಿ.ಪೂಜಪ್ಪ, ಜಿ.ಎನ್.ಅಂಜಿನಪ್ಪ, ಎಂ.ಜಿ.ಕಿರಣ್ ಕುಮಾರ್, ಜೀವಿಕಾನಾರಾಯಣಸ್ವಾಮಿ, ಲಕ್ಷ್ಮೀನರಸಿಂಹಪ್ಪ, ನಾಗಪ್ಪ, ಜಯಂತ್, ಗೂಳೂರು ಲಕ್ಷ್ಮೀನಾರಾಯಣ, ಶ್ರೀನಿವಾಸ್, ಗಣೇಶ್, ಚಿನ್ನಪೂಜಪ್ಪ ಮತ್ತಿತರರು ಇದ್ದರು.