ಬಸ್ಸಿನಲ್ಲೇ ಇದನ್ನ ಸಾಗಿಸ್ತಿದ್ದ ಆಂಧ್ರ ಮಹಿಳೆ ಜೊತೆ 5 ಮಂದಿ ಅರೆಸ್ಟ್

Kannadaprabha News   | Asianet News
Published : Mar 05, 2020, 08:35 AM ISTUpdated : Mar 05, 2020, 08:36 AM IST
ಬಸ್ಸಿನಲ್ಲೇ ಇದನ್ನ ಸಾಗಿಸ್ತಿದ್ದ ಆಂಧ್ರ ಮಹಿಳೆ ಜೊತೆ 5 ಮಂದಿ ಅರೆಸ್ಟ್

ಸಾರಾಂಶ

ಭಾರೀ ದಂಧೆಯೊಂದರಲ್ಲಿ ತೊಡಗಿದ್ದ ಆಂಧ್ರ ಮೂಲದ ಮಹಿಳೆ ಜೊತೆಗೆ 5 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. 

ಬೆಂಗಳೂರು [ಮಾ.05]:  ಗಾಂಜಾ ಮಾರಾಟದ ದಂಧೆಯಲ್ಲಿ ತೊಡಗಿದ್ದ ಮಹಿಳೆ ಸೇರಿದಂತೆ ಆರು ಮಂದಿಯನ್ನು ಬಂಧಿಸಿ 23 ಲಕ್ಷ ರು. ಮೌಲ್ಯದ ಮಾದಕ ವಸ್ತುವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಆಂಧ್ರಪ್ರದೇಶದ ಸವರ ಕವಿತಾ, ಧನುರಾಜ್‌, ಮತ್ಯಾರಾಜ್‌, ಉಪ್ಪಲಪಟ್ಟಿಎನ್‌.ಸುಬ್ಬಾರೆಡ್ಡಿ, ಅಶೋಕನಗರದ ಗೌರವ್‌ ಹಾಗೂ ಹುಳಿಮಾವು ಮಹಮದ್‌ ಅಮ್ಜದ್‌ ಶಂಷಾದ್‌ ಬಂಧಿತರಾಗಿದ್ದು, ಆರೋಪಿಗಳಿಂದ 43 ಕೆ.ಜಿ.ಗಾಂಜಾ, ಆರು ಮೊಬೈಲ್‌ ಹಾಗೂ 20 ಸಾವಿರ ರು. ನಗದು ಸೇರಿದಂತೆ 23 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ತಂಗಿ ಜತೆಗೂ ಅಫೇರ್... ಹೆಂಡತಿ ತವರಿಗೆ ಹೋದಾಗ! ಒಂದು ವೈರಲ್ ಪೋಟೋ ಕತೆ...

ಆಂಧ್ರಪ್ರದೇಶದಿಂದ ಗಾಂಜಾ ತಂದು ಆರೋಪಿಗಳು ಪ್ರತ್ಯೇಕವಾಗಿ ತಂಡ ರಚಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರದ ವೈಜಾಕ್‌ನಿಂದ ಬಸ್ಸಿನಲ್ಲಿ ಗಾಂಜಾವನ್ನು ಆರೋಪಿಗಳು ತರುತ್ತಿದ್ದರು. ಬಳಿಕ ಸಣ್ಣ ಸಣ್ಣ ಪೊಟ್ಟಣಗಳಿಗೆ ಗಾಂಜಾವನ್ನು ತುಂಬಿ ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಸೇರಿದಂತೆ ಇತರರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

PREV
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ