ಅಂಜನಾದ್ರಿಗೆ ನಯಾಪೈಸೆ ಬಿಡುಗಡೆ ಆಗಿಲ್ಲ: ಜನಾರ್ದನ ರೆಡ್ಡಿ ಕಿಡಿ

By Kannadaprabha News  |  First Published Jul 13, 2023, 4:00 AM IST

ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. 900 ಎಕರೆ ಜಾಗ ಸರ್ಕಾರದ ವಶದಲ್ಲಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಭೂಮಿ ಪೂಜೆ ನೆರವೇರಿಸಬೇಕು. ಡಿಎಂಎಫ್‌ ನಿಧಿಯಲ್ಲಿ ಹಣ ಇದೆ. ಸರ್ಕಾರ ಹಣ ವ್ಯಯ ಮಾಡಬೇಕಾದ ಅಗತ್ಯ ಇಲ್ಲ: ಜನಾರ್ದನ ರೆಡ್ಡಿ 


ವಿಧಾನಸಭೆ(ಜು.13): ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ ಬಳಿಕ ಹಿಂದಿನ ಬಿಜೆಪಿ ಸರ್ಕಾರ ಅಂಜನಾದ್ರಿಬೆಟ್ಟ ಅಭಿವೃದ್ಧಿಗಾಗಿ 120 ಕೋಟಿ ರು. ಘೋಷಣೆ ಮಾಡಿದೆಯಾದರೂ ನಯಾಪೈಸೆ ಬಿಡುಗಡೆ ಮಾಡಲಿಲ್ಲ. ಈಗಿನ ಕಾಂಗ್ರೆಸ್‌ ಸರ್ಕಾರವಾದರೂ ಸಕಲ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸದಸ್ಯ ಗಾಲಿ ಜನಾರ್ದನ ರೆಡ್ಡಿ ಒತ್ತಾಯಿಸಿದ್ದಾರೆ.

ಬುಧವಾರ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ‘ಗಂಗಾವತಿ ಬಳಿಯ ಅಂಜನಾದ್ರಿ ಬೆಟ್ಟ ಹನುಮನ ಜನ್ಮಸ್ಥಳವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ, ಮೂಲಸೌಕರ್ಯ ಇಲ್ಲ. ಅಂಜನಾದ್ರಿ ಬೆಟ್ಟವನ್ನು ಸಕಲ ಸೌಲಭ್ಯವನ್ನು ಒದಗಿಸಿ ಅಭಿವೃದ್ಧಿ ಮಾಡುವುದಾಗಿ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ, ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿಲ್ಲ. ಪ್ರವಾಸಿಗರಿಗೆ ಸೂಕ್ತವಾದ ಸವಲತ್ತುಗಳಿಲ್ಲ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಗೊಳಿಸಬೇಕು’ ಎಂದು ಆಗ್ರಹಿಸಿದರು.

Latest Videos

undefined

ಅಂಜನಾದ್ರಿಯಲ್ಲಿ ಹನುಮಾನ್ ಜಯಂತಿ, ಬೆಟ್ಟದ ವಿಹಂಗಮ ನೋಟದ ವಿಡಿಯೋ ವೈರಲ್!

‘ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. 900 ಎಕರೆ ಜಾಗ ಸರ್ಕಾರದ ವಶದಲ್ಲಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಭೂಮಿ ಪೂಜೆ ನೆರವೇರಿಸಬೇಕು. ಡಿಎಂಎಫ್‌ ನಿಧಿಯಲ್ಲಿ ಹಣ ಇದೆ. ಸರ್ಕಾರ ಹಣ ವ್ಯಯ ಮಾಡಬೇಕಾದ ಅಗತ್ಯ ಇಲ್ಲ. ಇದಲ್ಲದೇ, ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವ ಕಾರಣ ಆನೆಗುಂದಿ-ಹಂಪಿ ರಸ್ತೆ ಗ್ರೀನ್‌ಫೀಲ್ಡ್‌ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಬೇಕು’ ಎಂದರು.

click me!