ಯಾದಗಿರಿ; ಸಣ್ಣಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ, ಜನರಲ್ಲಿ ಆತಂಕ

By Kannadaprabha News  |  First Published Jul 12, 2023, 11:15 PM IST

ನೀರು ಹೆಚ್ಚಿರುವ ಕಾರಣ ಅದನ್ನು ಹಿಡಿಯಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸುತ್ತೇವೆ. ಜನರು ಕೆರೆಯ ಕಡೆಗೆ ಹೋದಾಗ ಎಚ್ಚರಿಕೆಯಿಂದ ಇರಬೇಕು. ಯಾವುದೇ ರೀತಿಯಾದ ಭಯ ಬೇಡ ಮೊಸಳೆ ಕಂಡು ಬಂದಲ್ಲಿ ನಮಗೆ ಕರೆ ಮಾಡಲು ತಿಳಿಸಿ. ಸಾರ್ವಜನಿಕರಲ್ಲಿ ಧೈರ್ಯ ತುಂಬಿದ ವಡಗೇರಾ ತಾಲೂಕು ಅರಣ್ಯಾಧಿಕಾರಿ ಮಹಾಂತೇಶ ಕುಂಬಾರ 


ಯಾದಗಿರಿ(ಜು.12):  ಜಿಲ್ಲೆಯ ವಡಗೇರಾ ಪಟ್ಟಣದ ಹತ್ತಿರ ಇರುವ ಸಣ್ಣಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕದ ಛಾಯೆ ಮೂಡಿದೆ.

ಈ ಸುದ್ದಿ ತಿಳಿದ ತಕ್ಷಣ ರೈತ ಸಂಘದ ವಡಗೇರಾ ತಾಲೂಕಾಧ್ಯಕ್ಷ ಮಲ್ಲಣ್ಣ ನೀಲಹಳ್ಳಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದಾಗ ವಡಗೇರಾ ತಾಲೂಕು ಅರಣ್ಯಾಧಿಕಾರಿ ಮಹಾಂತೇಶ ಕುಂಬಾರ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Tap to resize

Latest Videos

undefined

ಯಾದಗಿರಿ: ಅಕ್ರಮ ಮರಳು ಸಾಗಾಟ, 3 ಟಿಪ್ಪರ್‌ ವಶ

ಈ ಸಂದರ್ಭದಲ್ಲಿ ಎಚ್ಚರಿಕೆಯ ನಾಮಫಲಕವನ್ನು ಅಳವಡಿಸಿ ಮಾತನಾಡಿದ ಅವರು, ನೀರು ಹೆಚ್ಚಿರುವ ಕಾರಣ ಅದನ್ನು ಹಿಡಿಯಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸುತ್ತೇವೆ. ಜನರು ಕೆರೆಯ ಕಡೆಗೆ ಹೋದಾಗ ಎಚ್ಚರಿಕೆಯಿಂದ ಇರಬೇಕು. ಯಾವುದೇ ರೀತಿಯಾದ ಭಯ ಬೇಡ ಮೊಸಳೆ ಕಂಡು ಬಂದಲ್ಲಿ ನಮಗೆ ಕರೆ ಮಾಡಲು ತಿಳಿಸಿ. ಸಾರ್ವಜನಿಕರಲ್ಲಿ ಧೈರ್ಯ ತುಂಬಿದರು.

ರೈತ ಸಂಘದ ವಡಗೇರಾ ತಾಲೂಕಾಧ್ಯಕ್ಷ ಮಲ್ಲಣ್ಣ ನೀಲಹಳ್ಳಿ, ಮಂಜುನಾಥ ಕೋನಳ್ಳಿ, ರೆಡ್ಡಪ್ಪ ಯಮನೂರು, ತಿರ್ಕಯ್ಯ, ಬುಸೇನಿ, ಬೂದೆಪ್ಪ ಕೋನಳ್ಳಿ, ಬಸಪ್ಪ ಸಿಗೇರ ಇತರರಿದ್ದರು.

click me!