ಬಳ್ಳಾರಿಯಲ್ಲಿ ಮಳೆ ಅವಾಂತರ: ನೀರಿನಲ್ಲಿ ತೇಲುತ್ತಿರೋ ಗಣೇಶ ಮೂರ್ತಿಗಳು

By Govindaraj S  |  First Published Aug 28, 2022, 4:44 PM IST

ವಿಘ್ನ ವಿನಾಶಕನಿಗೀಗ  ವರುಣ ದೇವ ಅಡ್ಡಿಯಾಗಿದ್ದಾನೆ. ನಿನ್ನೆ (ಶನಿವಾರ) ರಾತ್ರಿ ಸುರಿದ ಮಳೆ ಪರಿಣಾಮ ಗಣೇಶ್ ಮೂರ್ತಿ ತಯಾರಕರು ಬಳ್ಳಾರಿಯಲ್ಲಿ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ರಾಜ್ಯದಲ್ಲಿ ಮಳೆಯಿಂದಾಗಿ ಬೆಳೆ ಹಾನಿ, ಮನೆಗಳಿಗೆ ಹಾನಿಯಾದರೆ ಬಳ್ಳಾರಿಯಲ್ಲಿ ಗಣೇಶನ ಮೂರ್ತಿಗಳೇ ಮುಳುಗಿ ಹೋಗಿವೆ. 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ಆ.28): ವಿಘ್ನ ವಿನಾಶಕನಿಗೀಗ  ವರುಣ ದೇವ ಅಡ್ಡಿಯಾಗಿದ್ದಾನೆ. ನಿನ್ನೆ (ಶನಿವಾರ) ರಾತ್ರಿ ಸುರಿದ ಮಳೆ ಪರಿಣಾಮ ಗಣೇಶ್ ಮೂರ್ತಿ ತಯಾರಕರು ಬಳ್ಳಾರಿಯಲ್ಲಿ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ರಾಜ್ಯದಲ್ಲಿ ಮಳೆಯಿಂದಾಗಿ ಬೆಳೆ ಹಾನಿ, ಮನೆಗಳಿಗೆ ಹಾನಿಯಾದರೆ ಬಳ್ಳಾರಿಯಲ್ಲಿ ಗಣೇಶನ ಮೂರ್ತಿಗಳೇ ಮುಳುಗಿ ಹೋಗಿವೆ. ಬಳ್ಳಾರಿಯಲ್ಲಿ ತಡರಾತ್ರಿ ಸುರಿದ ಮಳೆ‌ ಪರಿಣಾಮ ನೂರಾರು ಗಣಪತಿಗಳು ಮೂರ್ತಿಗಳು ನೀರಿನಲ್ಲಿ ನಿಂತಿವೆ. ಕಲ್ಕತ್ತ ಮೂಲದ ಮೂರ್ತಿ ತಯಾರಕರು ಗಣೇಶ ಹಬ್ಬಕ್ಕಾಗಿ ನೂರಾರು ಮೂರ್ತಿ ತಯಾರಿಸಿದರು. ಆದರೆ. ನಿನ್ನೆ ತಡರಾತ್ರಿ ಸುರಿದ ಮಳೆ ಹಿನ್ನಲೆ ತಾತ್ಕಾಲಿಕ ಟೆಂಟ್‌ನಲ್ಲಿ ನೀರು ನುಗ್ಗಿದ ಪರಿಣಾಮ ನಿರ್ಮಾಣ ಮಾಡಿದ ನೂರಕ್ಕೂ ಹೆಚ್ಚು ಮೂರ್ತಿಗಳು ಅರ್ಧ ಭಾಗ ಮುಳುಗಿ ಹೋಗಿವೆ.

Latest Videos

undefined

ಒಂದು ಕಡೆ ನಷ್ಟ ಮತ್ತೊಂದು ಕಡೆ ಸಂಘಟಕರಿಗೆ ಹೇಗೆ ಉತ್ತರಿಸೋದು ಅನ್ನೋ ಪ್ರಶ್ನೆ: ಹೌದು! ತಡರಾತ್ರಿ ಸುರಿದ ಮಳೆ ಪರಿಣಾಮ ಎರಡು ನೂರಕ್ಕೂ ಹೆಚ್ಚು ವಿಗ್ರಹಗಳು ನೀರಿನಲ್ಲಿ ಆರ್ಧ ಭಾಗದಷ್ಟು ಮುಳುಗಿ ಹಾಳಾಗಿ ಹೋಗಿವೆ. ಇದರಲ್ಲಿ ಆರ್ಧ ಮುಂಗಡ ಆರ್ಡರ್ ನೀಡಿದವರದ್ದಾಗಿದೆ. ಹಬ್ಬಕ್ಕೆ ಇನ್ನೇರಡು ದಿನ ಬಾಕಿ ಇದೆ. ನೀರಿನಲ್ಲಿ ಮುಳುಗಿ ಹಾಳಾಗಿರೋ ಗಣೇಶ ಮೂರ್ತಿಗಳಿಗೆ ಅದೆಷ್ಟೇ ಪೇಚ್ಯಾಪ್ ವರ್ಕ್ ಮಾಡಿದರೂ, ಸಂಘಟಕರು ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಾರೆ ಅನ್ನೋದು ಒಂದು ಕಡೆಯ ಪ್ರಶ್ನೆಯಾದ್ರೇ, ತೆಗೆದುಕೊಂಡು ಹೋದರೂ ಪೂರ್ಣ ಪ್ರಮಾಣದ ಹಣ ಕೋಡ್ತಾರೆಯೇ ಅನ್ನೋದೇ ಇದೀಗ ದೊಡ್ಡ ಪ್ರಶ್ನೆಯಾಗಿದೆ. ಅಲ್ಲದೇ ಈಗಾಗಲೇ ಮೂವತ್ತು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಆರ್ಡರ್ ಮಾಡಿದ ಸಂಘಟಕರಿಗೆ ಅಲ್ಪ ಸ್ವಲ್ಪ ಡ್ಯಾಮೇಜ್ ಆಗಿರೋ ಮೂರ್ತಿ ತೆಗೆದುಕೊಂಡು ಹೋಗದೇ ಇದ್ದರೆ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.

40% ಕಮಿಷನ್‌ ತನಿಖೆಯಾದರೆ ಸರ್ಕಾರದ ಬಹುಪಾಲು ಸಚಿವರು ಜೈಲಿಗೆ: ಉಗ್ರಪ್ಪ

ಕೊರೋನಾ ಬಳಿಕ ದೊಡ್ಡ ಮಟ್ಟದಲ್ಲಿ ಹಬ್ಬಕ್ಕೆ ತಯಾರಿ: ಕೊರೋನಾ ಬಳಿಕ ಬಂದ ಗಣೇಶ್ ಹಬ್ಬಕ್ಕಾಗಿ ಬಳ್ಳಾರಿಯಲ್ಲಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಅದಕ್ಕೆಲ್ಲ ವರುಣದೇವ ಅಡ್ಡಿ ಪಡಿಸೋ ಮೂಲಕ ಸಾರ್ವಜನಿಕ ಗಣೇಶ ಕೂರಿಸುವವರಿಗೆ ನಿರಾಸೆ ಮಾಡಿದ್ದಾನೆ. ಗಣೇಶ್ ಹಬ್ಬ ಅಂದರೆ ಕೇವಲ ಬಳ್ಳಾರಿಯಲ್ಲಿ ಇಡೀ ಭಾರತದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಕಳೆದೆರಡು ವರ್ಷಗಳಿಂದ ಕೊರೋನಾ ಇರುವ ಹಿನ್ನೆಲೆ ಎಲ್ಲಡೆ ಸಾರ್ವಜನಿಕ ಗಣೇಶೋತ್ಸವಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ ಕೊರೋನ ನಮ್ಮನ್ನೆಲ್ಲರನ್ನು ಬಹುತೇಕ ಬಿಟ್ಟು ಹೋಗಿರೋ ಹಿನ್ನೆಲೆ ಈ ಬಾರಿ ಬಳ್ಳಾರಿ ಮತ್ತು ಹೊಸಪೇಟೆ ಸೇರಿದಂತೆ ಅವಳಿ ಜಿಲ್ಲೆಯ ಹನ್ನೊಂದು ಪ್ರಮುಖ ತಾಲೂಕು ಸೇರಿದಂತೆ ಈ ಬಾರಿ ಹಳ್ಳಿ ಹಳ್ಳಿಯಲ್ಲಿ ಗಣೇಶನ ಹಬ್ಬಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ. 

ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್‌; ಹಿರೇಮಠ್‌ಗೆ ಹಿನ್ನಡೆ

ಇದೀಗ ಕಳೆದೆರಡು ದಿನಗಳಿಂದ ರಾತ್ರಿಯ ವೇಳೆ ಮಳೆ ಬಿಟ್ಟು ಬಿಡದೇ ಸುರಿಯುತ್ತಿರೋ  ಹಿನ್ನೆಲೆ ಸಂಘಟಕರು ಅತಂಕದಲ್ಲಿದ್ದಾರೆ. ಹಬ್ಬಕ್ಕಾಗಿ ಹಾಕಿರೋ ಟೆಂಟ್ ಎಲ್ಲಿ ಸೊರುತ್ತದೆಯೋ ಅಥವಾ ಗಣೇಶನನ್ನು ಕರೆದುಕೊಂಡು ಬರುವಾಗ ಮತ್ತು ಕಳುಹಿಸೋ  ವೇಳೆ ಮಳೆ ಎಲ್ಲಿ ಕಾಟ ಕೊಡುತ್ತದೆ ಎನ್ನುವ ಅನುಮಾನ ಕಾಡುತ್ತಿದೆ. ಯಾಕಂದರೆ ಈಗಾಗಲೇ ನಿನ್ನೆ ಮೊನ್ನೆ ಸುರಿದ ಮಳೆಯಿಂದಾಗಿ ಬಳ್ಳಾರಿ ಸೇರಿದಂತೆ ಹಲವು ಕಡೆಗಳಲ್ಲಿ ವಿಗ್ರಹಗಳು ನೀರಿನಲ್ಲಿ ತೇಲುತ್ತಿರುವ ಹಿನ್ನೆಲೆ ಗಣೇಶ ಪ್ರತಿಷ್ಠಾಪನೆ ಮಾಡಿದ ಬಳಿಕ ಹೀಗಾದರೆ ಹೇಗೆ? ಎಂದು ಸಂಘಟಕರು ಅತಂಕದಲ್ಲಿದ್ದಾರೆ.  

click me!