ಇಲ್ಲಿ ಆರಂಭವಾದ ಸಾವರ್ಕರ್ ಪುತ್ಥಳಿ ವಿವಾದ ನಾನಾ ಆಯಾಮಗಳನ್ನು ಪಡೆದುಕೊಂಡು ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ಮಂಗಳವಾರ ನಡೆಯಲಿರುವ ಉಡುಪಿ ನಗರಸಭೆಯ ಮಾಸಿಕ ಅಧಿವೇಶನದಲ್ಲಿ ಈ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುವ ಸಾಧ್ಯತೆ ಇದೆ.
ಉಡುಪಿ (ಆ.28): ಇಲ್ಲಿ ಆರಂಭವಾದ ಸಾವರ್ಕರ್ ಪುತ್ಥಳಿ ವಿವಾದ ನಾನಾ ಆಯಾಮಗಳನ್ನು ಪಡೆದುಕೊಂಡು ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ಮಂಗಳವಾರ ನಡೆಯಲಿರುವ ಉಡುಪಿ ನಗರಸಭೆಯ ಮಾಸಿಕ ಅಧಿವೇಶನದಲ್ಲಿ ಈ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುವ ಸಾಧ್ಯತೆ ಇದೆ. ವಿವಿಧ ಹಿಂದೂ ಸಂಘಟನೆಗಳು ಪುತ್ಥಳಿ ಸ್ಥಾಪನೆಗೆ ಒತ್ತಾಯಿಸಿ ಮನವಿ ನೀಡಿವೆ. ಶಾಸಕ ರಘುಪತಿ ಭಟ್ ಪುತ್ಥಳಿ ಬೇಡ ಸರ್ಕಲ್ ಸ್ಥಾಪಿಸೋಣ ಎನ್ನುತ್ತಿದ್ದಾರೆ. ಈ ನಡುವೆ ಹೊಸತೊಂದು ಬೇಡಿಕೆ ಜೀವ ಪಡೆದುಕೊಂಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭ ಆರಂಭವಾದ ವೀರ್ ಸಾವರ್ಕರ್ ಚರ್ಚೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ಸಾವರ್ಕರ್ ಪುತ್ಥಳಿ ಚರ್ಚೆ ಈಗ ಸರ್ಕಲ್‌ಗೆ ಬಂದು ನಿಂತಿದೆ. ಉಡುಪಿಯಲ್ಲಿ ಸಾವರ್ಕರ್ ಮತ್ತು ಹಾಜಿ ಅಬ್ದುಲ್ಲಾ ನಡುವೆ ಜಟಾಪಟಿ ನಡೆಯುತ್ತಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ನಂತರ ರಾಜ್ಯಾದ್ಯಂತ ವೀರ ಸಾವರ್ಕರ್ ಚರ್ಚೆಯ ವಿಚಾರವಾಗಿದ್ದಾರೆ. ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ ಆಗಬೇಕು ಎಂದು ಆರಂಭದಲ್ಲಿ ಚರ್ಚೆ ಇತ್ತು. ನಗರ ಸಭೆಗೆ ಹಿಂದೂ ಸಂಘಟನೆಗಳು ಬಿಜೆಪಿಗೆ ಮನವಿಗಳನ್ನು ಕೊಟ್ಟಿತ್ತು. ಶಾಸಕ ರಘುಪತಿ ಭಟ್ ಬ್ರಹ್ಮಗಿರಿ ಸರ್ಕಲ್‌ನಿಂದ ಚರ್ಚೆಯನ್ನು ಕೋರ್ಟ್ ರಸ್ತೆಯ ಸರ್ಕಲ್‌ಗೆ ಶಿಫ್ಟ್ ಮಾಡಿದ್ದಾರೆ.
undefined
ಉಡುಪಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಕಾಟ: ಬಾಲಕಿಯ ಮೇಲೆ ಅಟ್ಯಾಕ್
ಉಡುಪಿಯ ಹೃದಯ ಭಾಗದಲ್ಲಿ ಸಾವರ್ಕರ್‌ಗೆ ಸ್ಥಾನಮಾನ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಉಡುಪಿ ನಗರಸಭಾ ಕಟ್ಟಡ ಸುಮಾರು 40 ಕೋಟಿ ವೆಚ್ಚದಲ್ಲಿ ಇದೇ ಪರಿಸರದಲ್ಲಿ ನಿರ್ಮಾಣವಾಗಲಿದ್ದು, ಸಾವರ್ಕರ ಸರ್ಕಲ್ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತೆ ಅನ್ನೋದು ಶಾಸಕರ ಅಭಿಪ್ರಾಯ. ಅಲ್ಲದೆ ಸಾವರ್ಕರ್ ಅವರ ಪುತ್ಥಳಿ ಸ್ಥಾಪಿಸಿದರೆ ಭವಿಷ್ಯದಲ್ಲಿ ಪ್ರತಿಮೆಗೆ ಅವಮಾನವಾಗುವ ಸಾಧ್ಯತೆಯಿದೆ. ಹಾಗಾಗಿ ಸಾವರ್ಕರ್ ಪುತ್ಥಳಿ ಸ್ಥಾಪನೆ ಸಮಂಜಸವಲ್ಲ ಎಂದು ಹೇಳಿದ್ದಾರೆ.
ಲಯನ್ಸ್ ಸರ್ಕಲ್‌ಗೆ ಸಾವರ್ಕರ್ ಹೆಸರು ಕೇಳಿಬರುತ್ತಿದ್ದಂತೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಂಘ ದಾನಿ ಹಾಜಿ ಅಬ್ದುಲ್ಲಾ ಹೆಸರಿಡಬೇಕು. ಯಾವುದೇ ಕಾರಣ ವಿವಾದ ಸೃಷ್ಟಿ ಮಾಡುವ ಸಮಾಜದ ಶಾಂತಿಯನ್ನು ಹಾಳುವ ಮಾಡುವ ವ್ಯಕ್ತಿತ್ವದ ನಾಮಕರಣ ಮಾಡಬಾರದು ಒತ್ತಾಯಿಸಿದೆ. ಹಾಜಿ ಅಬ್ದುಲ್ಲರ ಹೆಸರಿಗೆ ಯಾರ ಆಕ್ಷೇಪವು ಬರುವುದಿಲ್ಲ. ಉಡುಪಿಯ ಶಾಸಕರು ಕೂಡ ಹಾಜಿ ಅಬ್ದುಲ್ಲಾ ಅವರ ಪರ ಒಲವು ಹೊಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಉಡುಪಿಯ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ, ಉಚಿತ ಆಸ್ಪತ್ರೆ ಶಾಲೆ ಆರಂಭಿಸಿದವರು.
ಹಾಳಾದ ರಸ್ತೆ, ಸಾಮಾಜಿಕ ಜಾಲತಾಣಗಳಲ್ಲಿ ಯುವತಿ ತರಾಟೆ: ಸ್ಪಷ್ಟನೆ ನೀಡಿದ ಶಾಸಕ ಭಟ್
ಕಾರ್ಪೊರೇಷನ್ ಬ್ಯಾಂಕನ್ನು ಸ್ಥಾಪನೆ ಮಾಡಿದ್ದು ಇದೇ ಹಾಜಿ ಅಬ್ದುಲ್ಲಾ ಸಾಹೇಬ್. ಶತಮಾನಗಳ ಹಿಂದೆ ಉಡುಪಿಯ ಕೃಷ್ಣ ಮಠಕ್ಕೆ ದಾನ ಧರ್ಮ ನೀಡಿ ಹೆಸರು ವಾಸಿಯಾದವರು. ಹಿಂದೂ ಮತ್ತು ಮುಸಲ್ಮಾನರ ನಡುವೆ ಕೊಂಡಿಯಂತಿದ್ದ, ಜಾತ್ಯತೀತತೆಯ ಸಂದೇಶ ಸಾರಲು ಹಾಜಿ ಅಬ್ದುಲರ ಹೆಸರೇ ಆ ಸರ್ಕಲ್‌ಗೆ ಬರಬೇಕು ಎಂಬ ಒತ್ತಾಯ ಕೇಳಿಬಂದಿದೆ. ಎಲ್ಲಾ ವಿಚಾರಗಳು ನಗರ ಸಭೆಯ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದ್ದು, ಬಿಜೆಪಿ ಆಡಳಿತದ ಉಡುಪಿ ನಗರಸಭೆ ಯಾವ ನಿರ್ಧಾರ ಕೈಗೊಳ್ಳಲಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.