ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೂ ಮೂರು ದಿನವಷ್ಟೆ ಬಾಕಿ ಇದೆ. ನಗರದಲ್ಲಿ ಗಣೇಶೋತ್ಸವ ಬಂದೋಬಸ್ತ್ ಗೆ ಬಾರಿ ಪ್ಲಾನ್ ಮಾಡಲಾಗಿದೆ. ಸೂಕ್ಷ್ಮ, ಅತೀ ಸೂಕ್ಷ್ಮ, ಸಾಮಾನ್ಯ ಏರಿಯಾಗಳು ಎಂದು ಪೊಲೀಸರು ಗುರುತಿಸಿದ್ದಾರೆ.
ಬೆಂಗಳೂರು (ಆ.28): ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೂ ಮೂರು ದಿನವಷ್ಟೆ ಬಾಕಿ ಇದೆ. ನಗರದಲ್ಲಿ ಗಣೇಶೋತ್ಸವ ಬಂದೋಬಸ್ತ್ ಗೆ ಬಾರಿ ಪ್ಲಾನ್ ಮಾಡಲಾಗಿದೆ. ಮೂರು ರೀತಿ ಕ್ಯಾಟಗರಿ ಮಾಡಿರುವ ಪೊಲೀಸರು. ಗಣೇಶ ಕೂರಿಸಲು ಮೂರು ರೀತಿ ಪ್ರದೇಶ ಗುರುತಿಸಿದ್ದಾರೆ. ಸೂಕ್ಷ್ಮ, ಅತೀ ಸೂಕ್ಷ್ಮ, ಸಾಮಾನ್ಯ ಏರಿಯಾಗಳು ಎಂದು ಪೊಲೀಸರು ಗುರುತಿಸಿದ್ದಾರೆ. ಪಶ್ಚಿಮ ವಿಭಾಗದಲ್ಲಿ ಚಾಮರಾಜಪೇಟೆ ಹಾಗೂ ಚಂದ್ರಲೇಔಟ್ ಸೂಕ್ಷ್ಮ ಪ್ರದೇಶ ಎಂದು ಗುರುತು ಮಾಡಿದ್ರೆ, ಪೂರ್ವ ವಿಭಾಗದಲ್ಲಿ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ, ಗೋವಿಂದಪುರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಇಂತಹ ಏರಿಯಾಗಳಲ್ಲಿ ಪೊಲೀಸರ ಹದ್ದಿನ ಕಣ್ಣು ಇಟ್ಟಿದ್ದಾರೆ. ದಿನದ 24 ಗಂಟೆಯೂ ಪೊಲೀಸ್ ಬಂದೋಬಸ್ತ್ ಮೂರು ಪಾಳಿಯಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡುವ ಪಟ್ಟಿ ತಯಾರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಚಾಮರಾಜಪೇಟೆ, ಜೆ.ಜೆ ನಗರ, ಡಿಜೆ ಹಳ್ಳಿ, ಕೆಜಿ ಹಳ್ಳಿ, ಎಸ್ ಜಿ ಪಾಳ್ಯ, ವಿವೇಕನಗರ, ತಿಲಕನಗರ, ಬನಶಂಕರಿ, ಆರ್ ಟಿ ನಗರ, ಜೆ ಸಿ ನಗರ ಏರಿಯಾಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ಗಣೇಶ ಹಬ್ಬದಂದು ಈ ಏರಿಯಾಗಳಲ್ಲಿ ಕಟ್ಟೇಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.
ಸೂಕ್ಷ್ಮ ಏರಿಯಾ ಇನ್ಸ್‌ಪೆಕ್ಟರ್ ಗಳಿಗೆ ಕಟ್ಟುನಿಟ್ಟಿನ ಸೂಚನೆ
ಇನ್ನು ಸೂಕ್ಷ್ಮ ಏರಿಯಾಗಳಲ್ಲಿ ಪೊಲೀಸರ ಮೂರನೇ ಕಣ್ಣು ಇಟ್ಟಿದ್ದು, ಏರಿಯಾಗಳ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿರಿಸಲಾಗಿದೆ.
ಗಣೇಶೋತ್ಸವ ಆಯೋಜಕರ ಜೊತೆ ಮೀಟಿಂಗ್ ಮಾಡಿ ಮೆರವಣಿಗೆ ಬಗ್ಗೆ ಮಾಹಿತಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಎರಡು ದಿನದಲ್ಲಿ ಸೂಕ್ಷ್ಮ ಪ್ರದೇಶಗಳ ಮೆರೆವಣಿಗೆಯ ಬ್ಲೂ ಪ್ರಿಂಟ್ ರೆಡಿ ಮಾಡಲಾಗುತ್ತಿದೆ.
Ganesh Chaturthi 2022; ಗಣೇಶ ಕೂರಿಸಲು ಹತ್ತು ಹಲವು ನಿಬಂಧನೆ ಸಿದ್ಧಪಡಿಸಿದ ಪೊಲೀಸ್
ಮೆರವಣಿಗೆಯ ಪ್ರತಿ ರಸ್ತೆಯಲ್ಲೂ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಅಲ್ಲದೇ ಮೆರವಣಿಗೆ ವೇಳೆ ಎರಡು ಡ್ರೋಣ್ ಕ್ಯಾಮೆರಾ ಬಳಸಲು ಕಮಿಷನರ್ ಸೂಚನೆ ನೀಡಿದ್ದಾರೆ. ಹಬ್ಬ, ಮೆರವಣಿಗೆಯ ಪ್ರತಿ ಕಂಟೆಂಟ್ ಕ್ಯಾಮರಾದಲ್ಲಿ ಕವರ್ ಆಗಬೇಕು. ಏರಿಯಾಗಳಲ್ಲಿ ಪೊಲೀಸ್ ಸಿಬ್ಬಂದಿ ಸದಾ ಬೀಟ್ ಇರಬೇಕು. ಹೀಗೆ ಸೂಕ್ಷ್ಮ ಏರಿಯಾಗಳ ಇನ್ಸ್‌ಪೆಕ್ಟರ್ ಗಳಿಗೆ ಕಮೀಷನರ್ ಪ್ರತಾಪ್ ರೆಡ್ಡಿ ಸೂಚನೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆವಹಿಸಲಾಗಿದೆ.
ಗಣೇಶ ಚತುರ್ಥಿ 2022: ಇಲ್ಲಿ ಮಾತ್ರ ನೀವು ನರ ಮುಖ ಗಣೇಶನ ದರ್ಶನ ಮಾಡ್ಬೋದು!
ಸಾರ್ವಜನಿಕ ಗಣೇಶೋತ್ಸವಕ್ಕೆ ಪೊಲೀಸರ ಮಾರ್ಗಸೂಚಿ
ಬೆಂಗಳೂರಿನಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮದ ವೇಳೆ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾನೆ ಸಂಬಂಧ ಸಂಘ ಸಂಸ್ಥೆಗಳಿಗೆ ಪೊಲೀಸರು ಶನಿವಾರ ಮಾರ್ಗಸೂಚಿ ಹೊರಡಿಸಿದ್ದಾರೆ.
ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಮುನ್ನ ಬಿಬಿಎಂಪಿ ಅನುಮತಿ ಪಡೆಯಬೇಕು. ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತಿಷ್ಠಾಪಿಸಬೇಕು. ಚಪ್ಪರ ಹಾಗೂ ಶಾಮಿಯಾನಗಳನ್ನು ಸದೃಢವಾಗಿ ನಿರ್ಮಿಸಬೇಕು. ಈ ಪೆಂಡಾಲ್ ಹೊರುತಪಡಿಸಿ ಬೇರೆ ಜಾಗಗಳಲ್ಲಿ ಬಂಟಿಗ್‌್ಸ, ಬ್ಯಾನರ್ ಹಾಗೂ ಫ್ಲೆಕ್‌ಗಳನ್ನು ಹಾಕಲು ಬಿಬಿಎಂಪಿಯಿಂದ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕು. ಯಾವುದೇ ಕಾರಣಕ್ಕೂ ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಬಾರದು.
ಪ್ರತಿಷ್ಠಾಪನೆ ಮುನ್ನ ಸಂಬಂಧಪಟ್ಟಜಾಗದ ಮಾಲೀಕರ ಅನುಮತಿ ಪಡೆಯಬೇಕು. ಪೆಂಡಾಲ್‌ನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸಲು ಆಯೋಜಕರ ಪರವಾಗಿ ದಿನದ 24 ತಾಸು ಕಾರ್ಯಕರ್ತರು ಕಾವಲಿರಬೇಕು. ಈ ಕಾರ್ಯಕರ್ತರ ಬಗ್ಗೆ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಗಣೇಶ ಪ್ರತಿಷ್ಠಾಪನೆ, ಮನರಂಜನಾ ಕಾರ್ಯಕ್ರಮ, ಮೆರವಣಿಗೆ ಹಾಗೂ ವಿಸರ್ಜನಾ ಸ್ಥಳಗಳಲ್ಲಿ ಹೆಣ್ಣು ಮಕ್ಕಳನ್ನು ಚುಯಾಡಿಸುವುದು, ಕೀಟಲೆ ಮಾಡುವುದು ಸೇರಿದಂತೆ ಅಸಭ್ಯ ವರ್ತನೆಗಳನ್ನು ತೋರುವವರ ಬಗ್ಗೆ ಪೊಲೀಸರು ಅಥವಾ ಪೊಲೀಸ್ ನಿಯಂತ್ರಣ ಕೊಠಡಿ (112)ಗೆ ಕರೆ ಮಾಡಿ ತಿಳಿಸಬೇಕು ಎಂದು ಸೂಚಿಸಿದೆ.
ಬಲವಂತವಾಗಿ ವಂತಿಗೆ-ಕಠಿಣ ಕ್ರಮ: ಗಣೇಶ ಪ್ರತಿಷ್ಠಾಪನೆ ಹಾಗೂ ಕಾರ್ಯಕ್ರಮಗಳ ಆಯೋಜನೆಗೆ ಬಲವಂತವಾಗಿ ವಂತಿಗೆ ಸಂಗ್ರಹಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.