ವಾಷ್ಟಿಂಗ್ಟನ್ ಗಾಂಧಿ ಪ್ರತಿಮೆ ವಿಕೃತಗೊಳಿಸಿದ ದುಷ್ಕರ್ಮಿಗಳು

By Suvarna NewsFirst Published Jun 5, 2020, 11:40 AM IST
Highlights

ಅಮೆರಿಕದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ದುಷ್ಕರ್ಮಿಗಳು ಪ್ರತಿಮೆಯ ಮೇಲೆ ಕೆಟ್ಟದಾಗಿ ಬರೆದಿದ್ದಾರೆ.

ವಾಷಿಂಗ್ಟನ್(ಜೂ.05): ಅಮೆರಿಕದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ದುಷ್ಕರ್ಮಿಗಳು ಪ್ರತಿಮೆಯ ಮೇಲೆ ಕೆಟ್ಟದಾಗಿ ಬರೆದಿದ್ದಾರೆ.

ವಾಷಿಂಗ್ಟನ್‌ನಲ್ಲಿ ಭಾರತೀಯ ರಾಯಭಾರೀ ಕಚೇರಿ ಮುಂದೆ ಸ್ಥಾಪಿಸಲಾಗಿರುವ ಗಾಂಧೀಜಿ ಪ್ರತಿಮೆ ಮೇಲೆ ಕೆಟ್ಟದಾಗಿ ಬರೆದು ವಿರೂಪಗೊಳಿಸಲಾಗಿದ್ದು, ಅಮೆರಿಕ ರಾಜಧಾನಿ ಸೇರಿ ಹಲವು ಪ್ರಮುಖ ನಗರಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.

ಒಂದೇ ದಿನ 9000 ಜನಕ್ಕೆ ವೈರಸ್‌! ಇಟಲಿ ಹಿಂದಿಕ್ಕುವತ್ತ ದಾಪುಗಾಲು

ಪ್ರತಿಮೆಯ ದುರಸ್ತಿ ಕೆಲಸ ಮಾಡಲಿರುವುದರಿಂದ ಸದ್ಯಕ್ಕೆ ಪ್ರತಿಮೆಯನ್ನು ಮುಚ್ಚಿಡಲಾಗಿದೆ. ರಸ್ತೆಗಳು ಕೂಡುವ ತ್ರೀಕೋನ ಪ್ರದೇಶದಲ್ಲಿ ಪ್ರತಿಮೆ ಸ್ಥಾಪಿಸಿದ್ದು, ಮಂಗಳವಾರ ರಾತ್ರಿ ಕಿಡಿಗೇಡಿಗಳು ಕೃತ್ಯವೆಸಗಿದ್ದಾರೆ. ಇದೀಗ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ಅಲ್ಲಿನ ಅಧಿಕಾರಿಗಳು ಕ್ಷಮೆ ಯಾಚಿಸಿದ್ದಾರೆ.

So sorry to see the desecration of the Gandhi statue in Wash, DC. Please accept our sincere apologies. Appalled as well by the horrific death of George Floyd & the awful violence & vandalism. We stand against prejudice & discrimination of any type. We will recover & be better.

— Ken Juster (@USAmbIndia)

ಗಾಂಧಿ ಪ್ರತಿಮೆಗೆ ಹಾನಿಯಾಗಿರುವುದಕ್ಕೆ ವಿಷಾಧಿಸುತ್ತೇವೆ. ದಯವಿಟ್ಟು ಕ್ಷಮಿಸಿ. ಯಾವುದೇ ರೀತಿಯಲ್ಲಿ ಭಿನ್ನತೆ ಹಾಗೂ ಬೇದಭಾವವನ್ನು ನಾವು ಸಹಿಸುವುದಿಲ್ಲ. ಪ್ರತಿಮೆಯನ್ನು ಶೀಘ್ರ ಸರಿಪಡಿಸಲಾಗುತ್ತದೆ ಎಂದು ಭಾರತದ ಅಮೆರಿಕ ರಾಯಭಾರಿ ಕೆನ್ ಜಸ್ಟರ್ ಟ್ವೀಟ್ ಮಾಡಿದ್ದಾರೆ.

ಗಡಿಯಿಂದ 2 ಕಿಲೋ ಮೀಟರ್ ಹಿಂದೆ ಸರಿದ ಚೀನಾ ಸೇನೆ

ಅಮೆರಿಕ ರಾಯಭಾರಿ ಕಚೇರಿ ಮುಂದಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು 2000ದಲ್ಲಿ ಬಿಲ್‌ ಕ್ಲಿಂಟನ್ ಹಾಗೂ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಲೋಕಾರ್ಪಣೆ ಮಾಡಿದ್ದರು. 8 ಫೀಟ್‌ನ ಪ್ರತಿಮೆಯನ್ನು ಕೊಲ್ಕತ್ತಾದ ಗೌತಮ್ ಪಾಲ್‌ ನಿರ್ಮಿಸಿದ್ದರು. ಕರ್ನಾಟಕದ ಇಳಕಲ್‌ನ ರೆಡ್‌ ರೂಬಿ ಗ್ರಾನೈಟ್‌ನಿಂದ ಇದನ್ನು ನಿರ್ಮಿಸಲಾಗಿದೆ. ಈ ಪ್ರತಿಮೆಯ ಸಮೀಪ 'ನನ್ನ ಬದುಕೇ ನನ್ನ ಸಂದೇಶ' ಎಂದೂ ಬರೆಯಲಾಗಿದೆ.

ದೊಡ್ಡಣ್ಣನನ್ನೇ ನಲುಗಿಸಿದ ಪ್ರತಿಭಟನೆ; ಬಂಕರ್‌ನಲ್ಲಿ ಅಡಗಿ ಕುಳಿತ ಟ್ರಂಪ್!

ಅಮೆರಿಕದಲ್ಲಿ ಜನಾಂಗೀಯ ನಿಂದನೆ ನಡೆಯುತ್ತಿದ್ದು, ಕಪ್ಪು ವರ್ಣೀಯರ ಆಕ್ರೋಶ ಹೆಚ್ಚಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಪ್ರತಿಭಟನಾ ನಿರತರು ಹಾನಿಡೆಗವುಡುತ್ತಿದ್ದಾರೆ. ಇತ್ತೀಚೆಗೆ ನಡೆದ ಪೊಲೀಸರ ದೌರ್ಜನ್ಯ ಬಗ್ಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿತ್ತು.

click me!