ಗಾಂಧಿಜೀ ಭೇಟಿ ನೀಡಿ ಖಾದಿ ಗ್ರಾಮೋದ್ಯೋಗ ಕೇಂದ್ರ ಸ್ಥಾಪಿಸಿದ ತಾಲೂಕಿನ ಬದನವಾಳು ಗ್ರಾಮದ ಪುಣ್ಯಭೂಮಿಯಲ್ಲಿ ಅ.2ರಂದು ವರಿಷ್ಠರಾದ ರಾಹುಲ್‌ಗಾಂಧಿ ಮತ್ತು ರಾಜ್ಯ ನಾಯಕರು ಆಗಮಿಸಿ ಈ ವರ್ಷದ ಗಾಂಧಿ ಜಯಂತಿಯನ್ನು ಆಚರಣೆ ಮಾಡಬೇಕೆಂದು ತೀರ್ಮಾನಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಂಜನಗೂಡು (ಸೆ.16): ಗಾಂಧಿಜೀ ಭೇಟಿ ನೀಡಿ ಖಾದಿ ಗ್ರಾಮೋದ್ಯೋಗ ಕೇಂದ್ರ ಸ್ಥಾಪಿಸಿದ ತಾಲೂಕಿನ ಬದನವಾಳು ಗ್ರಾಮದ ಪುಣ್ಯಭೂಮಿಯಲ್ಲಿ ಅ.2ರಂದು ವರಿಷ್ಠರಾದ ರಾಹುಲ್‌ಗಾಂಧಿ ಮತ್ತು ರಾಜ್ಯ ನಾಯಕರು ಆಗಮಿಸಿ ಈ ವರ್ಷದ ಗಾಂಧಿ ಜಯಂತಿಯನ್ನು ಆಚರಣೆ ಮಾಡಬೇಕೆಂದು ತೀರ್ಮಾನಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ತಾಲೂಕಿನ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯಕ್ಕೂ ದೇಶದ ಸ್ವಾತಂತ್ರ್ಯದ ಹೋರಾಟಕ್ಕೂ ದೊಡ್ಡ ನಂಟಿದೆ. ಮಹಾತ್ಮ ಗಾಂಧೀಜಿ ಬೆಳಗಾಂ ಅಧಿವೇಶನದಲ್ಲಿ ಸ್ವಾತಂತ್ರ್ಯ ಹೋರಾಟದ ಅಧ್ಯಕ್ಷತೆಯನ್ನು ವಹಿಸಿಕೊಂಡರು. 1927ರಲ್ಲಿ ನಂಜನಗೂಡಿನ ಬದನವಾಳು ಗ್ರಾಮಕ್ಕೆ ಭೇಟಿ ನೀಡಿ ಖಾದಿ ಕೇಂದ್ರ ಸ್ಥಾಪಿಸಿದರು. ಈ ಪುಣ್ಯ ಸ್ಥಳಕ್ಕೆ ಭೇಟಿ ನೀಡಿದ 20 ವರ್ಷಗಳ ನಂತರ ದೇಶಕ್ಕೆ ಸ್ವಾತಂತ್ರ್ಯ ದೊರತಿದೆ. ಈ ಪುಣ್ಯಭೂಮಿಯಲ್ಲಿ ಕಾಂಗ್ರೆಸ್ ವರಿಷ್ಠರಾದ ರಾಹುಲ್‌ಗಾಂಧಿ ಮತ್ತು ಪಕ್ಷದ ರಾಜ್ಯ ನಾಯಕರು ಸೇರಿ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಗುವುದು. ಈ ದಿನ ದೇಶಭಕ್ತಿಗೀತೆ, ಜನಪದ ಗಾಯನದಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದೆ ಎಂದರು.
Mysuru Dasara 2022: ಈ ಬಾರಿ 124 ಕಿ.ಮೀ. ದಸರಾ ದೀಪಾಲಂಕಾರ
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಭದ್ರತೆ, ಧರ್ಮ ಸಂಘರ್ಷಣೆಯಿಂದಾಗಿ ದೇಶ ತೊಂದರೆಯಲ್ಲಿದೆ ವಿಭಿನ್ನವಾಗುತ್ತಿದೆ ಮನಸ್ಸುಗಳು ಒಡೆಯುತ್ತಿದೆ. ರಾಹುಲ್‌ಗಾಂಧಿ ಅವರು ಜಾತಿ ಧರ್ಮ ತಾರತಮ್ಯ ಹೋಗಲಾಡಿಸಬೇಕು, ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕು, ಬೆಲೆ ಏರಿಕೆಯಿಂದಾದ ಜನರ ನೋವನ್ನು ತಿಳಿಯಬೇಕು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವಂತಾಗಬೇಕು, ರಾಜ್ಯದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ನಾವೆಲ್ಲ ಒಂದಾಗಿರಬೇಕೆಂದು ಸಂಕಲ್ಪದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,700 ಕಿ.ಮೀ ಬೃಹತ್ ನಡಿಗೆ ಮಾಡಲಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಗುಂಡ್ಲುಪೇಟೆ ಮೂಲಕ ಸಾಗಿ 22 ದಿನಗಳ ಕಾಲ 570 ಕಿ.ಮೀ ರಾಜ್ಯದಲ್ಲಿ ಹೆಜ್ಜೆ ಇಡಲಿದ್ದಾರೆ. ದೇಶದ ಐಕ್ಯತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಪಕ್ಷಬೇಧವನ್ನು ಮರೆತು ಒಂದಾಗಿ ಹೆಜ್ಜೆ ಇಡುವ ಮೂಲಕ ಹೆಜ್ಜಿನ ಸಂಖ್ಯೆಯಲ್ಲಿ ಆಗಮಿಸಿ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು. ಕ್ಷೇತ್ರದಲ್ಲಿ ಅಭ್ಯರ್ಥಿಯಾರೆಂದು ತಿಳಿದಿಲ್ಲ. ಬಣ ರಾಜಕೀಯವಿದೆ ಎಂಬುದಾಗಿ ಪ್ರತಿಪಕ್ಷಗಳು ಆರೋಪಕ್ಕೆ ಸ್ಪಷ್ಟನೆ ನೀಡಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಭೂಮಿಯನ್ನು ಯಾರು ಬೇಕಾದರೂ ಉಳಿಮೆ ಮಾಡಲಿ. ಉಳುಮೆ ಮಾಡಿದಷ್ಟೂಭೂಮಿ ಹಸನಾಗಲಿದ್ದು, ಬಿತ್ತನೆ ಮಾಡುವವರು ಯಾರೆಂದು ತಿಳಿಸಲಿದ್ದೇವೆ ಎಂದರು.
ಈ ಸಾರಿ ಮೈಸೂರು ದಸರಾಗೆ ಬರ್ತಾರಾ ಪ್ರಧಾನಿ? ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಾ ಕರುನಾಡು?
ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ರಾಹುಲ್‌ಗಾಂಧಿ ಈ ಭಾಗದಲ್ಲಿ ನಡಿಗೆ ಮಾಡುತ್ತಿರುವುದು ನಮ್ಮ ಭಾಗ್ಯ ಈ ನಡಿಗೆಯಿಂದ ರಾಜ್ಯದ ಎಲ್ಲ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದರು. ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೈಸೂರು ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಕೆಪಿಸಿಸಿ ಸದಸ್ಯ ಅಕ್ಬರ್‌ಅಲಿಂ, ಜಿಪಂ ಮಾಜಿ ಸದಸ್ಯೆ ಲತಾಸಿದ್ದಶೆಟ್ಟಿ, ಮುಖಂಡರಾದ ನಂದಕುಮಾರ್, ನಾಗೇಶ್‌ರಾಜ್, ನಾಗರಾಜಯ್ಯ, ನಾಗರಾಜು, ಶಿವಣ್ಣ, ರಾಜೇಶ್, ನಾಗರಾಜು ಇದ್ದರು.