ಧಾರವಾಡ ನಗರದ ಭೂಸಪ್ಪ ಚೌಕ್ ಬಳಿಯ ಮೇದಾರ ಓಣಿಯಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ಸಿಸಿಬಿ ಪೋಲಿಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ಸೇರಿ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ : ನಗರದ ಭೂಸಪ್ಪ ಚೌಕ್ ಬಳಿಯ ಮೇದಾರ ಓಣಿಯಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ಸಿಸಿಬಿ ಪೋಲಿಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ಸೇರಿ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 17ನೇ ವಾರ್ಡ್ ಕಾರ್ಪೋರೇಟರ್ ಗಣೇಶ ಮುಧೋಳ ಅವರ ಸಂಬಂಧಿಕರ ಮನೆಯಲ್ಲಿ ಹೌಸ್ ಗ್ಯಾಂಬ್ಲಿಂಗ್ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ಸಿಕ್ಕಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಹಾಗೂ ಟೌನ್ ಪೊಲೀಸರು ಜಂಟಿ ಕಾರ್ಯಾಚರಣೆ ನಡಿಸಿ, ಈ ಜೂಜಾಟದಲ್ಲಿ ತೊಡಗಿದ್ದ ಕಾರ್ಪೋರೇಟರ್ ಗಣೇಶ ಮುಧೋಳ ಸೇರಿದಂತೆ ಹತ್ತು ಜನರನ್ನು ಬಂಧಿಸಿದ್ದಾರೆ.
ಪಾಲಿಕೆ ಸದಸ್ಯ ಗಣೇಶ ಮುಧೋಳ್, ಜ್ಯೋತಿಭಾ ಸಂಕಪಾಳ್ಯ, ರಾಮಚಂದ್ರ ಯಲಿಗಾರ, ಶಂಕರ ಹೆಬ್ಬಳ್ಳಿ, ಪ್ರವೀಣ ಮಲ್ಲಿಗವಾಡ, ಸಮಿರುಲ್ಲಾ ಬಳ್ಳಾರಿ, ಮುರುನಾಥ್ ಮೂರಗೋಡ, ಮಹ್ಮದ್ ಹುಸೇನ್ ನಿಂಗನಾಳ್, ಅಣ್ಣಪ್ಪ ಅಣ್ಣಿಗೇರಿ, ರಮೇಶ ಪಾಟೀಲ ಬಂಧಿತರಾಗಿದ್ದು, ಇವರೆಲ್ಲರನ್ನು ಜೂಜು ಆಡುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಸಿಬಿ ಪೋಲಿಸರು ಸೆರೆ ಹಿಡಿದಿದ್ದಾರೆ. ನಿನ್ನೆ ಸಂಜೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿ ಪ್ರಭಾವಿ ನಾಯಕರನ್ನು ಬಂಧಿಸಿದ ನಂತರ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪುಲ್ ಹೈಡ್ರಾಮಾ ನಡೆಯಿತು. ಹೇಗಾದ್ರೂ ಮಾಡಿ ಪಾಲಿಕೆ ಸದಸ್ಯ ಮತ್ತು ಇನ್ನಿಬ್ಬರು ಪ್ರಭಾವಿ ಮುಖಂಡರ ಹೆಸರನ್ನ ಕೈ ಬಿಡುವಂತೆ ಒಂದೂವರೆ ಘಂಟೆ ಹೈಡ್ರಾಮಾ ಕೂಡ ನಡೆದಿದೆ ಎಂದು ತಿಳಿದು ಬಂದಿದೆ.
ಕೊಪ್ಪಳದಲ್ಲಿ ಖುಲ್ಲಂ ಖುಲ್ಲಾ ಅಂದರ್ ಬಾಹರ್: ಕಣ್ಮುಚ್ಚಿ ಕುಳಿತ ಪೊಲೀಸ್
ಇತ್ತೀಚೆಗೆ ಧಾರವಾಡ ಹುಬ್ಬಳ್ಳಿಯಲ್ಲಿ ಜೂಜು ಆಡೋದು ಸರ್ವೆ ಸಾಮಾನ್ಯವಾಗಿ ಹೋಗಿದೆ. ಆದರೆ ಎಲ್ಲವೂ ಗೊತ್ತಿದ್ರೂ ಗೊತ್ತಿಲ್ಲದಂತೆ ಪೊಲೀಸ್ ಇಲಾಖೆ ನಟಿಸುತ್ತಿದೆ ಎಂಬುದು ಜನರ ಆರೋಪ. ಕೆಲ ಪ್ರಭಾವಿ ನಾಯಕರೇ ಮುಂದೆ ನಿಂತು ಜೂಜಾಟದಲ್ಲಿ ತೊಡಗಿದ್ದಾರೆ ಅನ್ನೋದಕ್ಕೆ ಈ ಘಟನೆಯೇ ಒಂದು ತಾಜಾ ಉದಾಹರಣೆ ಆಗಿದೆ. ಧಾರವಾಡ ಜಿಲ್ಲಾ ಪೊಲೀಸ್ ಕಮಿಷನರ್ ಅವರು ಇನ್ನಷ್ಟು ಅಡ್ಡೆಗಳ ಮೆಲೆ ದಾಳಿ ಮಾಡಬೇಕಿದೆ. ಕೇವಲ ಕಾಟಾಚಾರಕ್ಕೆ ಮಾತ್ರ ರೇಡ್ ಆಗಬಾರದು ಎಂಬುದು ನೊಂದು ವ್ಯಕ್ತಿಗಳ ಅಭಿಪ್ರಾಯವಾಗಿದೆ.
ಇಲ್ಲಿ ಅಂದರ್ ಬಾಹರ್ ಆಡೋರಿಗಿಂತ ಮುಂದಾಳತ್ವ ವಹಿಸಿಕೊಂಡು ಆಡಿಸುವವರೇ ಹೆಚ್ಚಾಗಿದ್ದಾರೆ. ಇಂತಹವರಿಗೂ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಬೇಕು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಜೊತೆಗೆ ಇಲ್ಲಿ ಮೀಟರ್ ಬಡ್ಡಿದಂಧೆಕೋರರಿಗೂ ಬಿಸಿ ಮುಟ್ಟಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಓಡಾಟಕ್ಕೆ ಪ್ರೈವೇಟ್ ಜೆಟ್, ಮೋಜು-ಮಸ್ತಿಗೆ ಆಪ್ಸರೆಯರು! ಜೂಜಾಟದಿಂದಲೇ ಹಣದ ಹೊಳೆ ಹರಿಸಿದವನ ಕಥೆ ಇದು!