ವಿಜಯನಗರ : ಮೊನ್ನೆ ಚಿರತೆ, ಇಂದು ಕರಡಿ ಪ್ರತ್ಯಕ್ಷ!

By Ravi Nayak  |  First Published Aug 7, 2022, 11:58 AM IST

ವಿಜಯನಗರ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಜನರು ಆತಂಕದಲ್ಲಿ ಓಡಾಡುವಂತಾಗಿದೆ. ಜಿಲ್ಲೆಯ ಹೊರವಲಯದ ಸೀತಾರಾಮ್ ತಾಂಡಾದಲ್ಲಿ ಕರಡಿಗಳು ಪ್ರತ್ಯಕ್ಷವಾಗಿರುವುದು ರೈತರಿಗೆ ಇನ್ನುಷ್ಟು ಆತಂಕ ಶುರುವಾಗಿದೆ. 


ವಿಜಯನಗರ (ಆ.7) : ವಿಜಯನಗರ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಜನರು ಆತಂಕದಲ್ಲಿ ಓಡಾಡುವಂತಾಗಿದೆ. ಜಿಲ್ಲೆಯ ಹೊರವಲಯದ ಸೀತಾರಾಮ್ ತಾಂಡಾದಲ್ಲಿ ಕರಡಿಗಳು ಪ್ರತ್ಯಕ್ಷವಾಗಿರುವುದು ರೈತರಿಗೆ ಇನ್ನುಷ್ಟು ಆತಂಕ ಶುರುವಾಗಿದೆ. 

ಮೊನ್ನೆಯಷ್ಟೇ ಚಿರತೆ ಪ್ರತ್ಯಕ್ಷವಾಗಿತ್ತು. ಇದೀಗ ಕರಡಿಗಳು ಗುಡ್ಡದಲ್ಲಿ ಪ್ರತ್ಯಕ್ಷವಾಗಿ ಸ್ಥಳೀಯರು ಮೊಬೈಲ್‌ನಲ್ಲಿ ಕರಡಿಗಳು ಓಡಾಡುವ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಚಿರತೆ, ಕರಡಿ ಕಾಡು ಪ್ರಾಣಿಗಳ ಓಡಾಟದಿಂದ ಸ್ಥಳೀಯ ರೈತರು ಹೊಲಗಳಿಗೆ ತೆರಳಲು ಹೆದರುವಂತಾಗಿದೆ. ಕರಡಿ ಪ್ರತ್ಯಕ್ಷವಾದ ಬಳಿಕ ಹೊಲಗಳಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. 

Latest Videos

undefined

Belagavi: ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ: ಸಿಸಿ ಕ್ಯಾಮರಾದಲ್ಲಿ ಚಲನವಲನ ಸೆರೆ

ಪದೇಪದೆ ಕಾಡು ಪ್ರಾಣಿಗಳು ಜನವಸತಿ ಇರುವ ಕಡೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದರೂ, ಅರಣ್ಯ ಇಲಾಖೆ ಸಿಬ್ಬಂದಿ ಗಮನಹರಿಸುತ್ತಿಲ್ಲ. ಈಗಾಗಲೇ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆಯ ದಿವ್ಯ ನಿಲ್ಷಕ್ಷ್ಯಕ್ಕೆ ಗ್ರಾಮದ ಜನರು ಬೇಸರ ವ್ಯಕ್ತಪಡಿಸಿದ್ದಾರೆ.\

ದಾಳಿ ನಡೆಸಿದ ಚಿರತೆಯನ್ನು ವಾಕಿಂಗ್‌ ಸ್ಟಿಕ್‌ನಿಂದ ಓಡಿಸಿದ ಮಹಿಳೆ, ಶಾಕಿಂಗ್ ವಿಡಿಯೋ ವೈರಲ್!

 

ಕಾಡು ಪ್ರಾಣಿಗಳು ಹೀಗೆ ಪ್ರತ್ಯಕ್ಷವಾಗುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರು ಬರಲು ಹೆದರುತ್ತಿದ್ದಾರೆ. ಕಳೆದ ತಿಂಗಳು ಕೊಟ್ಟೂರು ತಾಲೂಕು ಸುಂಕದಕಲ್ಲು ಎಂಬಲ್ಲಿ ಚಿರತೆಯೊಂದು ಬಸಮ್ಮ, ದುರ್ಗೇಶ್ ಎಂಬುವವರ ಮೇಲೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ದುರ್ಗೇಶ್ ಎಂಬುವವರನ್ನು ಕೊಂದು ಹಾಕಿತ್ತು.

click me!