ಸರ್ಕಾರಿ ಶಾಲೆಯ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ ಹೆಡ್‌ಮಾಸ್ಟರ್ ನೀಡಿದ ಗಿಫ್ಟ್!

Published : Sep 27, 2026, 10:36 AM IST
Gadag School

ಸಾರಾಂಶ

ಗದಗ ತಾಲೂಕಿನ ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಗಿಫ್ಟ್ ನೋಡಿ ಮಕ್ಕಳು ಖುಷಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಈ ಕಾರ್ಯವನ್ನು ಕುರ್ತಕೋಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಅಪ್ಪಣ್ಣ ಇನಾಮತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಶ್ಲಾಘಿಸಿದ್ದಾರೆ.

ಗದಗ: ತಾಲೂಕಿನ ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಅದೇ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್‌.ಎಂ. ಆದಿ ಹಾಗೂ ಅವರ ಇಬ್ಬರು ಸುಪುತ್ರರು ₹ 30 ಸಾವಿರ ಮೊತ್ತದ ಸಮವಸ್ತ್ರ, ಟೈ, ಬೆಲ್ಟ್‌ ಕೊಡುಗೆಯಾಗಿ ನೀಡಿದ್ದಾರೆ.

30 ಸಾವಿರ ರೂಪಾಯಿ ದೇಣಿಗೆ

ಮುಖ್ಯೋಪಾಧ್ಯಾಯರಾದ ಎಸ್‌.ಎಂ. ಆದಿಯವರ ಜತೆಗೆ ಅವರ ಪುತ್ರರಾದ ರಾಜೇಶೇಖರಗೌಡ ಜಿ. ಸಂಕನಗೌಡ್ರ, ವೀರನಗೌಡ ಅವರು ಸಾಫ್ಟವೇರ್‌ ಎಂಜಿನಿಯರ್‌ಗಳಾಗಿದ್ದು, ₹ 30 ಸಾವಿರ ದೇಣಿಗೆ ನೀಡಿದ್ದಾರೆ.

ಸಮವಸ್ತ್ರ ವಿತರಿಸಿದ ಕುರ್ತಕೋಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪಣ್ಣ ಅ. ಇನಾಮತಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಬರಲು ಸರ್ಕಾರಿ ಶಾಲೆಗಳು ಸಬಲೀಕರಣಗೊಳ್ಳಲು ಇವರ ಕೊಡುಗೆ ಅಮೋಘವಾದುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಭಿನಂದನೆ

ಅತಿಥಿಗಳಾದ ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಕೊಡುಗೆ ನೀಡಿದ ಮುಖ್ಯೋಪಾಧ್ಯಾಯರು ಹಾಗೂ ಅವರ ಸುಪುತ್ರರಿಗೆ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.

ಪಿ.ಎಂ. ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಶಂಕರ ಹಡಗಲಿ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಜಿ. ಮಡಿವಾಳರ, ಸಿಆರ್‌ಪಿ ಡಿ.ಸಿ. ನದಾಫ, ಕುರ್ತಕೋಟಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಚನ್ನಪ್ಪ ಫಕೀರಪ್ಪ ಬ್ಯಾಹಟ್ಟಿ, ಬಸವರಾಜ ಶೇಖಪ್ಪ ರೋಣದ, ಶಿಕ್ಷಕಿಯರಾದ ಎನ್‌.ಆರ್‌. ಕಮತ, ಕೆ.ವೈ.ಕಣಕಿಕೊಪ್ಪ, ಶಿಕ್ಷಕರಾದ ಡಿ.ಎಸ್‌. ತಳವಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ: ಮಳೆಗಾಲದಲ್ಲೇ ಬರಿದಾಗುತ್ತಿದೆ ಗದಗಿನ ಐತಿಹಾಸಿಕ ಭೀಷ್ಮ ಕೆರೆ; ತುಂಗಭದ್ರಾ ನದಿ ತುಂಬಿದ್ದರೂ ನೀರಿನ ದಾಹ ನೀಗುತ್ತಿಲ್ಲ

ಇದನ್ನೂ ಓದಿ: NWKRTC: 120 ಹೆಚ್ಚುವರಿ ವಿಶೇಷ ಸಾರಿಗೆ ಕಾರ್ಯಾಚರಣೆ: ಹುಬ್ಬಳ್ಳಿ, ಬಾಗಲಕೋಟೆ, ಗದಗ ಹಾವೇರಿ

PREV
Read more Articles on
click me!

Recommended Stories

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನೂರುಲ್ಲಾ & ಮುಸ್ಲಿಂ ಮುಖಂಡರು; ಸ್ವಾಗತಿಸಿದ ಸಚಿವ ಪಿ.ಎಂ.ನರೇಂದ್ರಸ್ವಾಮಿ
ಸಿದ್ದರಾಮಯ್ಯ ಪುತ್ಥಳಿ ತೆಗೆದು ಕಸದ ಲಾರಿಗೆ ತುಂಬಿಕೊಂಡು ಹೋದ ಕಲಬುರಗಿ ಪಾಲಿಕೆ; 15 ದಿನದಲ್ಲಿ ಮರುಸ್ಥಾಪನೆಗೆ ಆಗ್ರಹ!