* ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಂದಾಲಿ
* ಇಂಧನದ ಮೇಲಿನ ತೆರಿಗೆ ಮನಬಂದಂತೆ ಹೆಚ್ಚಿಸಿದ ಪ್ರಧಾನಿ ಮೋದಿ
* ದೇಶದ ಸಾಮಾನ್ಯನ ಬದುಕಿನ ಮೇಲೆ ಅಕ್ಷರಶಃ ಬೆಲೆ ಏರಿಕೆಯ ಬರೆ ಎಳೆದ ಕೇಂದ್ರ ಸರ್ಕಾರ
ಗದಗ(ಜೂ.17): 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಧನ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ, ಬಡವರ ಬದುಕನ್ನು ಬರ್ಬರಗೊಳಿಸಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕಳೆದ 6 ವರ್ಷಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಸಂಗ್ರಹ ಶೇ. 300ರಷ್ಟು ಏರಿಕೆಯಾಗಿದೆ. 2014ರಲ್ಲಿ ಶೇ. 9.48ರಷ್ಟಿದ್ದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಈಗ ಶೇ.31.90ರಷ್ಟಾಗಿದೆ. ಇನ್ನು ಶೇ. 3.56ರಷ್ಟಿದ್ದ ಡೀಸೆಲ್ ಮೇಲಿನ ಅಬಕಾರಿ ಸುಂಕ ಈಗ ಶೇ.31.80ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
undefined
'ಬಿಜೆಪಿ ಸರ್ಕಾರಗಳು ಜನರ ನೆಮ್ಮದಿ ಕಿತ್ತುಕೊಂಡಿವೆ'
ಬೇರೆ ಕ್ಷೇತ್ರಗಳಲ್ಲಿ ತೆರಿಗೆ ಸಂಗ್ರಹಿಸುವಲ್ಲಿ ವಿಫಲವಾಗಿರುವ ಮೋದಿ ಸರ್ಕಾರ, ಇಂಧನದ ಮೇಲಿನ ತೆರಿಗೆಯನ್ನು ಮನಬಂದಂತೆ ಹೆಚ್ಚಿಸಿದೆ. ಇದು ದೇಶದ ಸಾಮಾನ್ಯನ ಬದುಕಿನ ಮೇಲೆ ಅಕ್ಷರಶಃ ಬೆಲೆ ಏರಿಕೆಯ ಬರೆ ಎಳೆದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.