ರಾಜ್ಯ ಸರ್ಕಾರದ ವಿರುದ್ಧ ಗರಂ ಆದ ಡಿ.ಕೆ ಸುರೇಶ್

Kannadaprabha News   | Asianet News
Published : Jun 17, 2021, 11:36 AM ISTUpdated : Jun 17, 2021, 11:56 AM IST
ರಾಜ್ಯ ಸರ್ಕಾರದ ವಿರುದ್ಧ ಗರಂ ಆದ ಡಿ.ಕೆ ಸುರೇಶ್

ಸಾರಾಂಶ

ಕೋವಿಡ್‌ನಿಂದಾಗಿ ರಾಜ್ಯದ ಬಹುತೇಕ ಜನತೆ ಒಂದು ಹೊತ್ತಿನ  ಊಟಕ್ಕೂ ಪರದಾಟ ಸರ್ಕಾರ ಅಧಿಕಾರ ಉಳಿಸಿಕೊಳ್ಳುವ ಆಟದಲ್ಲಿ ಮಗ್ನ ರಾಜ್ಯ ಸರ್ಕಾರದ ವಿರುದ್ಧ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ 

ಚನ್ನರಾಯಪಟ್ಟಣ (ಜೂ.17): ಕೋವಿಡ್‌ನಿಂದಾಗಿ ರಾಜ್ಯದ ಬಹುತೇಕ ಜನತೆ ಒಂದು ಹೊತ್ತಿನ  ಊಟಕ್ಕೂ ಪರದಾಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಅಧಿಕಾರ ಉಳಿಸಿಕೊಳ್ಳುವ ಆಟದಲ್ಲಿ ಮಗ್ನವಾಗಿರುವುದೆಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ಕೋವಿಡ್‌ನಿಂದ ಸಂಕಷ್ಟ ಅನುಭವಿಸುತ್ತಿರುವ ಜನಸಾಮಾನ್ಯರು. ಕೂಲಿ ಕಾರ್ಮಿಕರು, ಶಿಕ್ಷಕರು ಮುದ್ರಣಕಾರರು ಸೇರಿದಂತೆ ಇನ್ನಿತರ ವರ್ಗದ ನೆರವಿಗಾಗಿ ವಿಧಾನ ಪರಿಷತ್  ಸದಸ್ಯ ಎಂಎ ಗೋಪಾಲಸ್ವಾಮಿಯವರು ನೀಡುತ್ತಿರುವ ಆಹಾರ ಕಿಟ್ ವಿತರಣಾ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. 

ವಿಜಯೇಂದ್ರ ಜೊತೆ ಡಿಕೆಶಿ ಒಪ್ಪಂದ ಆರೋಪ : ಯೋಗ್ಯತೆ ಇಲ್ಲ ಎಂದ ಡಿಕೆಸು ...

ಕೋವಿಡ್ ಮೊದಲ ಮತ್ತು ಎರಡನೆ ಅಲೆಯಲ್ಲಿ ಸಾವಿರಾರು ಜನ ತಮ್ಮ ಬದುಕಿನೊಂದಿಗೆ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರದಲ್ಲಿನ ಬಿಜೆಪಿ ಸರ್ಕಾರವೇ ಕಾರಣವಾಗಿದೆ ಎಂದರು. 

ಕೂಲಿ ಕಾರ್ಮಿಕರು ದಿನ ದುಡಿದು ಬದುಕು ಸಾಗಿಸಬೇಕು. ಹೊರಗೆ ಬಂದರೆ ಜೀವದ ಭಯ, ಮನೆಯಲ್ಲಿ ಕೂತರೆ ಜೀವನದ ಭಯ. ಬದುಕು ಕೆಲಸವಿಲ್ಲದೆ ಶ್ರಮಿಕವರ್ಗಕ್ಕೆ ಜೀವನವೇ ಬೇಡ ಎನ್ನುವ ಸ್ಥಿತಿ ಇದೆ. ಇನ್ನೊಂದೆಡೆ ಖಾಸಗಿ ಶಾಲೆ ಶಿಕ್ಷಕರಿಗೆ ಕೆಲಸವಿಲ್ಲ, ಸಂಬಳವಿಲ್ಲ, ತಮ್ಮ ಕಷ್ಟವನ್ನು ಮತ್ತೊಬ್ಬರ ಬಳಿ ಹೇಳಿಕೊಳ್ಳಲಾರದ ಸ್ಥಿತಿ ಇರುವುದನ್ನು ಮನಗಂಡು ಕಾಂಗ್ರೆಸ್ ರಾಜ್ಯದ ಉದ್ದಗಲಕ್ಕೂ ತಮ್ಮ ಮುಖಂಡರು ಕಾರ್ಯಕರ್ತರಿಗೆ ಸಂಕಷ್ಟಿತರ ಪರವಾಗಿ ನಿಲ್ಲುವಂತೆ ಕರೆಕೊಟ್ಟ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮ ರೂಪುಗೊಂಡಿವೆ ಎಂದರು. 

ಪಟ್ಟಣದಲ್ಲಿನ ಖಾಸಗಿ ಶಾಲಾ ಶಿಕ್ಷಕರು, ಮುದ್ರಣಕಾರರು, ಪತ್ರಕರ್ತರು, ಕ್ರೈಸ್ತ ಧರ್ಮ ಗುರುಗಳು, ಸವಿತ ಸಮಾಜದವರಿಗೆ 300ಕ್ಕೂ ಹೆಚ್ಚು ಆಹಾರ ಕಿಟ್ ವಿತರಣೆ ಮಾಡಲಾಯಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್