ಧಾರೇಶ್ವರದ ಮೀನುಗಾರ ಸಮಾಜದಿಂದ ಕಡಲಾಮೆಗೆ ಗೌರವದ ಅಂತಿಮ ನಮನ

By Suvarna News  |  First Published Sep 30, 2021, 7:50 PM IST

* ಸಮುದ್ರ ತೀರದಲ್ಲಿ ಮೃತಪಟ್ಟ ಕಡಲಾಮೆ
* ಮಹಾವಿಷ್ಣುವಿನ ಅವತಾರ ಎಂಧು ನಂಬಿದ ಜನ
* ಸಕಲ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ


ಧಾರೇಶ್ವರ(ಸೆ. 30) ಶ್ರೀಹರಿಯ ದಶವತಾರ ಸ್ವರೂಪಿ ಕಡಲಾಮೆ ಎನ್ನುವುದು ಮೀನುಗಾರರ ನಂಬಿಕೆ. ಧಾರೇಶ್ವರದ ಮೀನುಗಾರ ಸಮಾಜ ಸಕಲ ವಿಧಿವಿಧಾನಗಳಿಂದ ಕಡಲಾಮೆಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಮೃತ ಕಡಲಾಮೆ ಧಾರೇಶ್ವರ ಕಡಲಾಮೆ ಸಂರಕ್ಷಣಾ ಕೇಂದ್ರದ ಕಡಲತೀರದಲ್ಲಿ ಕಾಣಿಸಿಕೊಂಡಿತ್ತು. ಮೀನುಗಾರ ಯುವ ಮುಖಂಡ ರವಿ ಅಂಬಿಗರವರ ನೇತ್ರತ್ವದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಮೃತದೇಹದ ಮರಣೊತ್ತರ ಕಾರ್ಯ ನೇರವೇರಿಸಲಾಯಿತು. ನಂತರ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

Latest Videos

undefined

ದೊಡ್ಡ ಕಾರಿನ ಸೈಜಿನ ಆಮೆಯ ಪಳೆಯುಳಿಕೆ ನೋಡಿ

ಬಂಗಾರದ ಆಮೆ; ನೇಪಾಳದ ಧನುಶಾ ಜಿಲ್ಲೆಯ ಧನುಷಧಾಮ್‌ ಎಂಬಲ್ಲಿ ವಿಚಿತ್ರವಾದ ಆಮೆಯೊಂದು ಪತ್ತೆಯಾಗಿದ್ದು ಸುದ್ದಿಯಾಗಿತ್ತು.  ಮೈಬಣ್ಣ ಪೂರ್ತಿಯಾಗಿ ಚಿನ್ನದ ಕಲರ್‌ನಲ್ಲಿತ್ತು. ಇದರ ಮೈಮೇಲಿನ ಚಿಪ್ಪು ಕೂಡ ಚಿನ್ನದ ಹಲಗೆಯಂತೆ ಹೊಳೆಯುತ್ತಿತ್ತು. ಸಾಮಾನ್ಯವಾಗಿ ಆಮೆಗಳು ಕಪ್ಪು ಮಿಶ್ರಿತ ಕಂದು ಇರುವುದು ವಾಡಿಕೆ. ಬಂಗಾರದ ವರ್ಣದ ಆಮೆಗಳು ಇಲ್ಲವೇ ಇಲ್ಲ ಎನ್ನಬಹುದು. ಅಂಥದ್ದರಲ್ಲಿ ಈ ಆಮೆಯ ವಿಶಿಷ್ಟ ಸ್ವರೂಪ ಅದಕ್ಕೆ ಭಾರಿ ಅಭಿಮಾನಿಗಳನ್ನೂ ದೊಡ್ಡ ಸಂಖ್ಯೆಯ ಭಕ್ತರನ್ನೂ ತಂದುಕೊಟ್ಟಿತ್ತು. ಜನ ಅದನ್ನು ಮಹಾವಿಷ್ಣುವಿನ ಕೂರ್ಮ ಮತ್ತೊಮ್ಮೆ ಅವತಾರವೆತ್ತಿ ಬಂದಿದ್ದಾನೆಂದೇ ಭಾವಿಸಲು ಶುರು ಮಾಡಿದ್ದರು.

ಲಾಕ್ ಡೌನ್ ಪರಿಣಾಮ; ಈ ಹಿಂದೆ   21 ದಿನಗಳ ಲಾಕ್‌ಡೌನ್ ಘೋಷಿಸಿದ್ದ  ವೇಳೆ ಮಾಲಿನ್ಯ  ಪ್ರಮಾಣ ಕಡಿಮೆಯಾಗಿತ್ತು.. ಮನಷ್ಯರು ಬಂಧಿಗಳಾಗಿ ಮನೆಯೊಳಗೆ ಕುಳಿತಿದ್ರೆ ನಿಸರ್ಗ ಜೀವಿಗಳು ಮೆಲ್ಲನೆ ಸ್ವಂತಂತ್ರವಾಗಿದ್ದವು.

ಒಲಿವ್‌ ರಿಡ್ಲಿ ಕಡಲಾಮೆಗಳು ತೀರಕ್ಕೆ ಬಂದಿದ್ದವು. ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ಆಮೆಗಳು ತೀರದಲ್ಲಿ 6 ಕಿಲೋ ಮೀಟರ್‌ನಷ್ಟು ದೂರ ಸಂಚರಿಸುತ್ತಿದ್ದವು. ಎಲ್ಲಿ ನೋಡಿದರೂ ಕಡಲಾಮೆಗಳೆ ಕಾಣುತ್ತಿದ್ದವು. 

 

click me!