ಮಳೆಗಾಗಿ ನಡೆಯಿತು ಮಂಡೂಕನ ಮದುವೆ: ಭರ್ಜರಿ ಭೋಜನ

By Kannadaprabha NewsFirst Published Jul 17, 2019, 1:23 PM IST
Highlights

ಮಡಿಕೇರಿಯ ಕೂಡಿಗೆಯಲ್ಲಿ ಮಳೆ ಇಲ್ಲದೆ ಜನ ಕಂಗಾಲಾಗಿದ್ದು, ವರುಣನ ಆಗಮನಕ್ಕಾಗಿ ಮಂಡೂಕನಿಗೆ ಮದುವೆ ಮಾಡಿದ್ದಾರೆ. ಶಾಸ್ತ್ರೋಕ್ತವಾಗಿ ಮದುವೆ ನಡೆದಿದ್ದು, ನೆರೆದಿದ್ದವರಿಗೆ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಮಡಿಕೇರಿ(ಜು.17): ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿಸಿದ ವಿಶೇಷ ಘಟನೆ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಬರಗಾಲದ ಛಾಯೆ ಎದ್ದು ಕಾಣುತ್ತಿದ್ದು ರೈತರು ವರುಣನ ಕೃಪೆಗಾಗಿ ಕಪ್ಪೆಗಳ ಮದುವೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಮಾಡಿದ ವಿಶೇಷ ಘಟನೆ ನಡೆಯಿತು.

ಸಮೀಪದ ಹಳ್ಳದಿಂದ ಗಂಡು ಮತ್ತು ಹೆಣ್ಣುಕಪ್ಪೆಯನ್ನು ಹಿಡಿದು ತಂದ ರೈತರು ಜಮೀನೊಂದರ ಕೆಳಭಾಗದಲ್ಲಿ ಚಪ್ಪರ ನಿರ್ಮಿಸಿ ಸಿಂಗರಿಸಿ, ಎರಡು ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದರು. ಕಪ್ಪೆಗಳ ಮದುವೆಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಪ್ಪೆಗಳ ಮದುವೆ ಮಾಡಿದ ನಂತರ ರೈತರು ಮಳೆಗಾಗಿ ಪ್ರಾರ್ಥಿಸಿದರು.

ಉಡುಪಿಯಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ

click me!