The kerala story ಸಿನಿಮಾ ನೋಡೋಕೆ ಕಾಲೇಜು ಹುಡ್ಗೀರಿಗೆ ಫ್ರೀ ಟಿಕೆಟ್‌

By Sathish Kumar KHFirst Published May 25, 2023, 12:56 PM IST
Highlights

ದಾವಣಗೆರೆ ನಗರದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆ ಮಾಡಲು ಕಾಲೆಜು ಹುಡುಗಿಯರಿಗೆ ಉಚಿತ ಪ್ರದರ್ಶನಾ ವ್ಯವಸ್ಥೆಯನ್ನು ಮಾಡಲಾಗಿದೆ.

ದಾವಣಗೆರೆ (ಮೇ 25): ಜಾಗತಿಕ ಮಟ್ಟದಲ್ಲಿ ಐಸಿಸ್ ಭಯೋತ್ಪಾದನೆ, ಲವ್ ಜಿಹಾದ್ ಷಡ್ಯಂತ್ರ ಸೇರಿದಂತೆ ದೇಶದ ಭದ್ರತೆಗೆ ಸವಾಲೊಡ್ಡುವ ಕಥಾಹಂದರ ಹೊಂದಿರುವ ದಿ ಕೇರಳ ಸ್ಟೋರಿ ಚಿತ್ರವನ್ನು ವೀಕ್ಷಣೆ ಮಾಡಲು ದಾವಣಗೆರೆಯಲ್ಲಿ ಕಾಲೇಜು ಹುಡುಗಿಯರಿಗೆ ಉಚಿತ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ.

ಇಡೀ ದೇಶದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ವಿವಾವದ ಸ್ವರೂಪವನ್ನು ಪಡೆದುಕೊಂಡಿದೆ. ಕೆಲವು ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ ಹೇರಿದ್ದರೆ ಇನ್ನು ಕೆಲವೆಡೆ ಕೋರ್ಟ್‌ ವಿಚಾರಣೆಯಲ್ಲಿದೆ. ಆದರೆ, ಕರ್ನಾಟಕ ಸೇರಿದಂತೆ ವಿವಿಧೆಡೆ ದಿ ಕೇರಳ ಸ್ಟೋರಿ (The kerala story) ಸಿನಿಮಾ ವೀಕ್ಷಣೆಗೆ ಯಾವುದೇ ತಡೆಯನ್ನು ನೀಡದೇ ಪ್ರದರ್ಶನ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಹಿಂದೂ ಯುವತಿಯರಿಗೆ ಈ ಸಿನಿಮಾ ವೀಕ್ಷಣೆಗೆ ಉಚಿತ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಅದೇ ರೀತಿ ದಾವಣಗೆರೆಯಲ್ಲಿ ಶಾಲಾ- ಕಾಲೇಜು ಹುಡುಗಿಯರಿಗೆ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆಗೆ ಉಚಿತ ವ್ಯವಸ್ಥೆಯನ್ನು ಪ್ರೇರಣಾ ಸಂಸ್ಥೆಯಿಂದ ಮಾಡಲಾಗಿದೆ.

Latest Videos

Bengaluru- ಬೇಡ ಬೇಡ ಅಂದ್ರೂ ಆಂಟಿಯೊಂದಿಗೆ ಅನೈತಿಕ ಸಂಬಂಧ: ಮಹಿಳೆ ಗಂಡನಿಂದ ಯುವಕನ ಕೊಲೆ

ತುಂಬಿ ತುಳುಕಿದ ಚಿತ್ರಮಂದಿರ: ಇನ್ನು ದಾವಣಗೆರೆ ನಗರದ ತ್ರಿನೇತ್ರಾ ಚಿತ್ರಮಂದಿರದಲ್ಲಿ ದಿ ಕೇರಳ ಸ್ಟೋರಿ ಸಿನಿಮಾವನ್ನು ಉಚಿತವಾಗಿ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಶಾಲಾ,‌‌ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ. ದಾವಣಗೆರೆಯಲ್ಲಿ ಪ್ರೇರಣಾ ಯುವ ಸಂಸ್ಥೆ ಹಾಗೂ ಹಿಂದೂ ಜಾಗರಣ ವೇದಿಕೆ ಸಹಯೋಗದೊಂದಿಗೆ ಉಚಿತ ಸಿನಿಮಾ ಆಯೋಜನೆ ಮಾಡಲಾಗಿದೆ. ಕಾಲೇಕಜು ವಿದ್ಯಾರ್ಥಿನಿಯರಿಗೆ ಎರಡು ದಿನಗಳ ಕಾಲ ಉಚಿತ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಸಾವಿರಾರು ವಿದ್ಯಾರ್ಥಿನಿಯರು ಸಿನಿಮಾ ವೀಕ್ಷಣೆ ಮಾಡಲು ಚಿತ್ರಮಂದಿರಕ್ಕೆ ಆಗಮಿಸಿದ್ದು, ತುಂಬಿ ತುಳುಕುತ್ತಿತ್ತು. 

ಹಿಂದೂ ಯುವತಿಗೆ ಜಾಗೃತಿ ಮೂಡಿಸಲು ಪ್ರದರ್ಶನ: ಐಸಿಸ್ ಭಯೋತ್ಪಾದನೆ, ಲವ್ ಜಿಹಾದ್ ಷಡ್ಯಂತ್ರ ಸೇರಿದಂತೆ ದೇಶದ ಭದ್ರತೆಗೆ ಸವಾಲೊಡ್ಡುವ ಕಥಾಹಂದರ ಹೊಂದಿರುವ ದಿ ಕೇರಳ ಸ್ಟೋರಿ ಚಿತ್ರ ಭಾರಿ ಸಂಚಲನ ಸೃಷ್ಟಿಸಿದೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯ ಸರ್ಕಾರಗಳು ಈ ಚಿತ್ರವನ್ನು ವಿರೋಧಿಸಿದ್ದರೆ, ಹಲವು ರಾಜ್ಯಗಳು ತೆರಿಗೆ ಮುಕ್ತ ಮಾಡಿದೆ. ಇದೀಗ ಕರ್ನಾಟಕದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿನಿಯರನ್ನು ಜಾಗೃತಿ ಮೂಡಿಸುವ ಸಲುವಾಗಿ ಉಚಿತವಾಗಿ ಸಿನಿಮಾ ಆಯೋಜನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಬಜರಂಗದಳ, VHPಯಿಂದ ನಾಳೆಯಿಂದ ಕೇರಳ ಸ್ಟೋರಿ ಚಿತ್ರ ಪ್ರದರ್ಶನ, ರಾಜ್ಯದಲ್ಲಿ ಹೈ ಅಲರ್ಟ್!

ಮುನ್ನೆಚ್ಚರಿಕೆ ವಹಿಸಲು ಪೊಲೀಸರಿಗೆ ಸೂಚನೆ: ಹಿಂದೂ ಜಾಗರಣ ವೇದಿಕೆ ಇಡೀ ದಿನ ಎರಡು ಶೋ ಗಳ ಮೂಲಕ ಉಚಿತವಾಗಿ ಸಿನಿಮಾ ತೋರಿಸಲು ವ್ಯವಸ್ಥೆ ಮಾಡಿದೆ. ಒಟ್ಟು ಎರಡು ದಿನಗಳ ಕಾಲ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ  ಸಿನಿಮಾ ಆಯೋಜನೆ ಮಾಡಲಾಗುತ್ತಿದೆ. ಕೇರಳ ಸ್ಟೋರಿ ಚಿತ್ರ ಪ್ರದರ್ಶನದಿಂದ ಸೃಷ್ಟಿಯಾಗಬಲ್ಲ ಪ್ರತಿಭಟನೆ, ಹಿಂಸಾಚಾರ ತಪ್ಪಿಸಲು ಎಡಿಜಿಪಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಎಲ್ಲಾ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಲಾಗಿದೆ.  ಬೆಂಗಳೂರು ನಗರ, ಮೈಸೂರು, ಹುಬ್ಬಳಿ ಧಾರವಾಡ , ಮಂಗಳೂರು, ಬೆಳಗಾವಿ, ದಾವಣಗೆರೆ, ಕಲಬುರಗಿ ನಗರ  ಸೇರಿದಂತೆ ಎಲ್ಲಾ ಜಿಲ್ಲಾ ಎಸ್ಪಿಗಳು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

click me!