ತುಂಗಾ ನದಿಗೆ ಈಜಲು ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತೀರ್ಥಹಳ್ಳಿಯ ಛತ್ರಕೇರಿಯ ಜಯಲಕ್ಷ್ಮೀ ಸಾಮಿಲ್ ಬಳಿ ನಡೆದಿದೆ.
ಶಿವಮೊಗ್ಗ (ಮೇ.25) : ತುಂಗಾ ನದಿಗೆ ಈಜಲು ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತೀರ್ಥಹಳ್ಳಿಯ ಛತ್ರಕೇರಿಯ ಜಯಲಕ್ಷ್ಮೀ ಸಾಮಿಲ್ ಬಳಿ ನಡೆದಿದೆ.
ಸ್ನೇಹಿತರೊಂದಿಗೆ ಈಜಲು ಹೋಗಿದ್ದ 16 ವರ್ಷದ ಬಾಲಕ ಅಶ್ವತ್ಥ್. ಈಜಾಡಲು ನದಿಗೆ ಇಳಿದಾಗ ಈಜು ಬಾರದೆ ನೀರಲ್ಲಿ ಮುಳುಗಿರುವ ಬಾಲಕ. ಅಶ್ವತ್ಥ್ ನೀರಲ್ಲಿ ಮುಳುಗಿರುವ ಬಗ್ಗೆ ಮನೆಯವರಿಗೆ ಮಾಹಿತಿ. ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿರುವ ಕುಟುಂಬಸ್ಥರು. ಅಗ್ನಿಶಾಮಕ ದಳ ಸಿಬ್ಬಂದಿ ನದಿಯಲ್ಲಿ ಶೋಧಕಾರ್ಯ ನಡೆಸಿದಾಗ ಬಾಲಕನ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
Bengaluru- ಯುವತಿ ಸಾವಿಗೆ ಕಾರಣವಾದ ಕಾರು ಚಾಲಕ ಅರೆಸ್ಟ್: ಬಿಬಿಎಂಪಿ ಅಧಿಕಾರಿಗಳ ಅರೆಸ್ಟ್ ಯಾವಾಗ?
ಹಸು ಮೈ ತೊಳೆಯುವಾಗ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು
ದಾಬಸ್‌ಪೇಟೆ: ಹಸು ಮೈ ತೊಳೆಯಲು ಹೋಗಿ ವ್ಯಕ್ತಿಯೊಬ್ಬ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಂಪುರ ಹೋಬಳಿಯ ಕೆ.ಜಿ.ಶ್ರೀನಿವಾಸಪುರ ಗ್ರಾಮದ ತಿರುಮಲಯ್ಯ (55) ಮೃತ ವ್ಯಕ್ತಿ. ಈತ ಮೇ 24ರಂದು ಬೆಳಗ್ಗೆ ಸುಮಾರು 9ರ ಸಮಯದಲ್ಲಿ ಮನೆಯಿಂದ ಹಸುವನ್ನು ಹೊಡೆದುಕೊಂಡು ಎಡೇಹಳ್ಳಿ ಗ್ರಾಮಕ್ಕೆ ಸೇರಿದ ಕೆಐಡಿಬಿಗೆ ಸೇರಿದ ಕಟ್ಟೆಯಲ್ಲಿ ಮೈ ತೊಳೆಯುವಾಗ ಮುಳುಗಿದ್ದಾನೆ. ಆಗ ಸ್ಥಳೀಯರೊಬ್ಬರು ಮುಳುಗಿದ್ದನ್ನು ಕಂಡಿದ್ದಾರೆ. ತಕ್ಷಣ ಗ್ರಾಮದವರು ಹೋಗಿ ಪ್ರಾಣ ಉಳಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದರು.
ಚಿಕ್ಕಮಗಳೂರಿನ ಭದ್ರಾ ಜಲಾಶಯ ಕಾಲುವೆ ನೀರಿನಲ್ಲಿ ಮುಳುಗಿ ಮೂವರ ಸಾವು