ಕೊರೋನಾ ಸೋಂಕು ಪರಿಣಾಮ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಆದರೆ ಈ ಸಮಯವನ್ನು ಯೋಗ ತರಬೇತುದಾರರೊಬ್ಬರು ಸದುಪಯೋಗ ಪಡಿಸಿಕೊಂಡಿದ್ದು, ತಮ್ಮ ಯೋಗ ಕೇಂದ್ರಕ್ಕೆ ಪ್ರತಿದಿನ ಆಗಮಿಸುತ್ತಿದ್ದ ಮಹಿಳೆಯರಿಗೆ ಯೋಗ ಕಲಿಕೆ ಬಿಟ್ಟು ಹೋಗಬಾರದೆಂಬ ದೃಷ್ಟಿಯಿಂದ ಉಚಿತವಾಗಿ ಆನ್‌ಲೈನ್ ಮೂಲಕ ಯೋಗ ತರಬೇತಿ ನಡೆಸುತ್ತಿದ್ದಾರೆ. ಇದಕ್ಕೆ ಮಹಿಳೆಯರು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.
ಮಡಿಕೇರಿ(ಏ.24): ಕೊರೋನಾ ಸೋಂಕು ಪರಿಣಾಮ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಆದರೆ ಈ ಸಮಯವನ್ನು ಯೋಗ ತರಬೇತುದಾರರೊಬ್ಬರು ಸದುಪಯೋಗ ಪಡಿಸಿಕೊಂಡಿದ್ದು, ತಮ್ಮ ಯೋಗ ಕೇಂದ್ರಕ್ಕೆ ಪ್ರತಿದಿನ ಆಗಮಿಸುತ್ತಿದ್ದ ಮಹಿಳೆಯರಿಗೆ ಯೋಗ ಕಲಿಕೆ ಬಿಟ್ಟು ಹೋಗಬಾರದೆಂಬ ದೃಷ್ಟಿಯಿಂದ ಉಚಿತವಾಗಿ ಆನ್‌ಲೈನ್ ಮೂಲಕ ಯೋಗ ತರಬೇತಿ ನಡೆಸುತ್ತಿದ್ದಾರೆ. ಇದಕ್ಕೆ ಮಹಿಳೆಯರು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.
ಮಡಿಕೇರಿಯ ಪ್ರಣವ ಯೋಗ ಕೇಂದ್ರದ ಯೋಗ ತರಬೇತುದಾರರಾದ ಪ್ರತಿಭಾ ರೈ(ಶಿಲ್ಪಾ) ಅವರು, ನಗರದ ಬಾಲ ಭವನದಲ್ಲಿ ತಮ್ಮ ಕೇಂದ್ರದಲ್ಲಿ ಮಹಿಳೆಯರಿಗೆ ಪ್ರತಿ ದಿನ ಸಂಜೆ ಯೋಗ ತರಬೇತಿಯನ್ನು ನಡೆಸುತ್ತಿದ್ದರು. ಕೊರೋನಾ ಲಾಕ್‌ಡೌನ್ ಆದ ಪರಿಣಾಮ ಜೂಮ್ ಆ್ಯಪ್ ಬಳಸಿ ಮನೆಯಲ್ಲೇ ಪ್ರತಿ ದಿನ ಒಂದುವರೆ ತಾಸು ಉಚಿತವಾಗಿ ಯೋಗ ತರಬೇತಿ ಹೇಳಿಕೊಡುತ್ತಿದ್ದಾರೆ. ಪ್ರಸ್ತುತ 25ಕ್ಕೂ ಅಧಿಕ ಮಂದಿ ಮಹಿಳೆಯರು ತರಬೇತಿ ಪಡೆಯುತ್ತಿದ್ದು, ಮತ್ತೊಂದು ಬ್ಯಾಚ್ ಮಾಡುವಂತೆ ಸಲಹೆಗಳು ಕೂಡ ಇವರಿಗೆ ಬರುತ್ತಿದೆ. ಲಾಕ್‌ಡೌನ್ ಮುಂದುವರಿದಲ್ಲಿ ಮತ್ತೊಂದು ಬ್ಯಾಚ್ ಆರಂಭ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಯೋಗ ತರಬೇತುಗಾರರಾದ ಪ್ರತಿಭಾ.
ದಕ್ಷಿಣ ಕನ್ನಡದಲ್ಲಿ ಕೋವಿಡ್ ವೈರಸ್‌ಗೆ ಇಬ್ಬರು ಬಲಿ, ಇನ್ನೊಬ್ಬಾಕೆ ಗಂಭೀರ
ಮಾ.29ರಿಂದಲೇ ಆನ್‌ಲೈನ್‌ನಲ್ಲಿ ಯೋಗ ತರಬೇತಿ ಆರಂಭಿಸಲಾಗಿದ್ದು, ಮಹಿಳೆಯರು ಯೋಗ ಕಲಿಕೆಯಲ್ಲಿ ಪ್ರತಿ ದಿನ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಜೆ 5ರಿಂದ 6.30ರ ವರೆಗೆ ತರಬೇತಿ ನಡೆಯುತ್ತದೆ. 4.45ಕ್ಕೆ ಮಹಿಳೆಯರು ಯೋಗಾಭ್ಯಾಸ ಮಾಡಲು ಸಿದ್ಧರಾಗಿ ಕುಳಿತಿರುತ್ತಾರೆ. ತರಬೇತಿಯಲ್ಲಿ ವಿವಿಧ ಆಸನಗಳನ್ನು ಕಲಿಸಲಾಗುತ್ತದೆ. ಲಾಕ್‌ಡೌನ್‌ನಿಂದಾಗಿ ಯೋಗ ಕಲಿಯುತ್ತಿದ್ದವರು ಫ್ಲೆಕ್ಸಿಬಿಲಿಟಿಯನ್ನು ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಯೋಗ ತರಬೇತಿ ನೀಡಲಾಗುತ್ತಿದೆ. ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಮೂರು ಬಗೆಯ ಪ್ರಾಣಾಯಾಮ ತರಬೇತಿ ಕೂಡ ನೀಡಲಾಗುತ್ತಿದೆ.
14 ಜಿಲ್ಲೇಲಿ ಲಾಕ್‌ಡೌನ್ ಸಡಿಲ: ಜನಸಂಚಾರ ಹಠಾತ್ ಹೆಚ್ಚಳ
12 ಬಾರಿ ಸೂರ್ಯ ನಮಸ್ಕಾರ ಮಾಡಲಾಗುತ್ತದೆ. ವಾರದಲ್ಲಿ ಒಂದು ದಿನ ನಾದಾನುಸಂಧಾನ ಪ್ರಾಣಾಯಾಮ ಓಂಕಾರ ಹೇಳಿಕೊಡಲಾಗುತ್ತಿದೆ. ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರುವ ಮಹಿಳೆಯರು ಯೋಗ ಕ್ರಮಗಳನ್ನು ಸರಿಯಾಗಿ ಪಾಲಿಸುತ್ತಿದ್ದು, ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ ಎನ್ನುತ್ತಾರೆ ಶಿಲ್ಪಾ ಅವರು.
ನೃತ್ಯ ಮೂಲಕ ಕೊರೋನಾ ಜಾಗೃತಿ!
ಮಡಿಕೇರಿಯ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿ ಮೆನಿತಾ ನಾಗೇಶ್ ಅವರು ನೃತ್ಯದ ಮೂಲಕ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೊರೋನಾ ಸೋಂಕಿನ ಬಗ್ಗೆ ಎಚ್ಚರಿಕೆಯಿಂದಿರಿ, ಮಾಸ್ಕ್ ಧರಿಸಿಕೊಳ್ಳಿ, ನಿಮ್ಮ ಕೈಗಳನ್ನು ಸ್ಯಾನಿಟೈಸರ್‌ಗಳಿಂದ ತೊಳೆಯಿರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ವಿವಿಧ ಭಂಗಿಯಲ್ಲಿ ಮಾಡಿರುವ ಭರತನಾಟ್ಯ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆನ್‌ಲೈನ್‌ನಲ್ಲಿ ಯೋಗ ತರಬೇತಿ ಆರಂಭಿಸಿದ ಎರಡು ದಿನ ಸ್ವಲ್ಪ ಗೊಂದಲವಾಯಿತು. ನಂತರ ಮಹಿಳೆಯರು ನಾನು ಹೇಳಿಕೊಟ್ಟಂತೆ ಉತ್ತಮವಾಗಿ ಪಾಲನೆ ಮಾಡುತ್ತಿದ್ದಾರೆ. ಲಾಕ್‌ಡೌನ್ ಆಗಿರುವುದರಿಂದ ತರಬೇತಿಗೆ ವಿರಾಮ ಎಂದು ಅನಿಸಿಲ್ಲ. ನಾನು ಯೋಗ ಮಾಡಿ ಅವರಿಗೆ ಸೂಚನೆ ನೀಡುತ್ತೇನೆ. ಸ್ಕ್ರೀನ್‌ನಲ್ಲಿ ವೀಕ್ಷಿಸುತ್ತಿರುತ್ತೇನೆ. ತಪ್ಪು ಕಂಡು ಬಂದರೆ ಅಲ್ಲೇ ಅದನ್ನು ಸರಿಪಡಿಸುತ್ತೇನೆ. ವಿಡಿಯೋ ನೋಡಿಕೊಂಡು ಅದರಂತೆ ಯೋಗವನ್ನು ಕಲಿಯುತ್ತಿದ್ದಾರೆ ಎಂದು ಪ್ರಣವ ಯೋಗ ಕೇಂದ್ರದ ತರಬೇತುದಾರ ಪ್ರತಿಭಾ ರೈ ತಿಳಿಸಿದ್ದಾರೆ.
ಲಾಕ್‌ಡೌನ್: ಕಾರ್ಮಿಕ ಮಹಿಳೆಯ ಅಂತ್ಯಸಂಸ್ಕಾರ ನಡೆಸಿದ ಯುವಕರು
ನಮ್ಮ ಒತ್ತಾಯದ ಮೇರೆಗೆ ಕಳೆದ ಒಂದು ತಿಂಗಳಿನಿಂದ ಆನ್‌ಲೈನ್‌ನಲ್ಲಿಯೋಗ ತರಗತಿಯನ್ನು ತರಬೇತುದಾರರು ನಡೆಸುತ್ತಿದ್ದಾರೆ. ಒತ್ತಡ, ಏಕಾಂಗಿತನ ಹಾಗೂ ಲಾಕ್‌ಡೌನ್ ದಿನಗಳನ್ನು ಸುಂದರವಾಗಿಡಲು ಸಹಕರಿಸುತ್ತಾ ಮನೆಯಿಂದ ತರಬೇತಿ ನೀಡುತ್ತಿದ್ದಾರೆ. ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನದೊಂದಿಗೆ ಮನಸ್ಸು ಏಕಾಗ್ರತೆಯಿಂದರಲು ಸಹಕಾರಿಯಾಗಿದೆ ಎಂದು ಆನ್‌ಲೈನ್ ಯೋಗದಲ್ಲಿ ಪಾಲ್ಗೊಂಡ ಮಹಿಳೆ ಅನಿತಾ ಸುಧಾಕರ್ ತಿಳಿಸಿದ್ದಾರೆ.
-ವಿಘ್ನೇಶ್ ಎಂ. ಭೂತನಕಾಡು