Chikkamagaluru: ಕಸ್ತೂರಿ ರಂಗನ್ ವರದಿಯ ವಿರುದ್ದ ಮಲೆನಾಡಿನ ಜನರ ಆಕ್ರೋಶ: ಅಸಲಿಗೆ ಏನಾಯ್ತು?

Published : Sep 09, 2024, 11:38 PM IST
Chikkamagaluru: ಕಸ್ತೂರಿ ರಂಗನ್ ವರದಿಯ ವಿರುದ್ದ ಮಲೆನಾಡಿನ ಜನರ ಆಕ್ರೋಶ: ಅಸಲಿಗೆ ಏನಾಯ್ತು?

ಸಾರಾಂಶ

ಸ್ವಾತಂತ್ರ್ಯ ಪೂರ್ವ ಸ್ವತಂತ್ರ ಹೋರಾಟಕ್ಕೆ ಭಾರತೀಯರನ್ನ ಒಗ್ಗೂಡಿಸಲು ಬಾಲಗಂಗಾಧರ್ ತಿಲಕರು ಸಾರ್ವಜನಿಕ ಪ್ರದೇಶದಲ್ಲಿ ಗಣಪತಿ ಕೂರಿಸಲು ಕರೆ ನೀಡುವ ಮೂಲಕ ಭಾರತೀಯರನ್ನ ಒಗ್ಗೂಡಿಸಲು ಮುಂದಾಗಿದ್ದಾರು‌.   

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.09): ಸ್ವಾತಂತ್ರ್ಯ ಪೂರ್ವ ಸ್ವತಂತ್ರ ಹೋರಾಟಕ್ಕೆ ಭಾರತೀಯರನ್ನ ಒಗ್ಗೂಡಿಸಲು ಬಾಲಗಂಗಾಧರ್ ತಿಲಕರು ಸಾರ್ವಜನಿಕ ಪ್ರದೇಶದಲ್ಲಿ ಗಣಪತಿ ಕೂರಿಸಲು ಕರೆ ನೀಡುವ ಮೂಲಕ ಭಾರತೀಯರನ್ನ ಒಗ್ಗೂಡಿಸಲು ಮುಂದಾಗಿದ್ದಾರು‌. ಇಂದು ಮಲೆನಾಡಿಗರ ಬದುಕನ್ನ ಉಳಿಸಿಕೊಳ್ಳಲು ಮಲೆನಾಡಿಗರನ್ನ ಒಗ್ಗೂಡಿಸಲು ಅದೇ ಗಣೇಶ ಚತುರ್ಥಿಯನ್ನ ಆಯುಧವಾಗಿದೆ.  

ಕಸ್ತೂರಿ ರಂಗನ್ ವರದಿ ವಿರುದ್ದ ಆಕ್ರೋಶ: ಹೌದು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಅರ್ಧಕರ್ಧ ರೈತರು, ಜನಸಾಮಾನ್ಯರ ಬದುಕಿನ ನೆತ್ತಿಯ ಮೇಲೆ ಕಸ್ತೂರಿ ರಂಗನ್ ವರದಿಯ ತೂಗುಗತ್ತಿ ನೇತಾಡುತ್ತಿದೆ. ಮಲೆನಾಡು ಭಾಗದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಅರ್ಧಕರ್ಧ ಮಲೆನಾಡೇ ಇಲ್ಲದಂತಾಗುತ್ತದೆ. ಹಾಗಾಗಿ, ರೈತರು, ಜನರ ಜೀವನ ಉಳಿಸಲು ಮಲೆನಾಡು ಹೋರಾಟ ಸಮಿತಿ ಗಣಪತಿ ಹಬ್ಬವನ್ನು ಹೋರಾಟದ ಅಸ್ತ್ರವಾಗಿ ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. 

ಜಾಗೃತಿ ಮೂಡಿಸಲು ವೇದಿಕೆ ಬಳಕೆ: ಕಸ್ತೂರಿ ರಂಗನ್ ವರದಿ ಜಾರಿಯಾದರೆ, ಮಲೆನಾಡಿಗರ ಜನ ಜೀವನದ ಜೊತೆ ಎಲ್ಲಾ  ಜಾತಿ-ಧರ್ಮಗಳ ಸಂಪ್ರದಾಯಗಳು ಸಂಪೂರ್ಣ ಬಂದ್ ಅಗಲಿವೆ ಎಂದು ಎಚ್ಚರಿಕೆ ನೀಡುತ್ತಿದೆ. ಮೈಕ್ ಸೆಟ್ ಹಾಕುವಂತಿಲ್ಲ. ಡ್ರಮ್ ಸೆಟ್ ಭಾರಿಸುವಂತಿಲ್ಲ. ಪಟಾಕಿ ಸಿಡಿಸಂಗಿಲ್ಲ, ತಮಟೆ ಶಬ್ಧ ಕೇಳುವಂತಿಲ್ಲ. ಅದ್ಧೂರಿಯಾಗಿ ಯಾವ ಹಬ್ಬವನ್ನೂ ಮಾಡಲಾಗದು. ಹಾಗಾಗಿ, ಒಂದು ಸೈಟ್, ಅರ್ಧ ಗುಂಟೆ ಜಾಗದ ಜನರೂ ಸೇರಿದಂತೆ ಕಸ್ತೂರಿ ರಂಗನ್ ವರದಿ ವಿರುದ್ಧ ಆಕ್ಷೇಪಣೆ ಸಲ್ಲಿಸಿ ಎಂದು ಸಾರ್ವಜನಿಕವಾಗಿ ಗಣಪತಿ ಕೂರಿಸುವ ಸ್ಥಳಗಳಲ್ಲಿ ಭಾಷಣ ಮಾಡುತ್ತಿದ್ದಾರೆ. 

ಎತ್ತಿನಹೊಳೆ ಯೋಜನೆಯಿಂದ ಅನುಕೂಲ: ಸಿಎಂ ಬದಲಾವಣೆ ಹೈಕಮಾಂಡ್ ಬಿಟ್ಟ ವಿಚಾರ ಎಂದ ಶಾಸಕ ಬಾಲಕೃಷ್ಣ

ರೈತರ ಆಕ್ಷೇಪಣೆ ಜೊತೆ ಗ್ರಾಮ ಪಂಚಾಯಿತಿ ಕೂಡ ಅಕ್ಷೇಪಣೆ ಸಲ್ಲಿಸಬೇಕು ಎಂದು ಮಲೆನಾಡಿನಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಬದುಕಿಗಿಂತ ಯಾವ ಯೋಜನೆಗಳು ದೊಡ್ಡದಲ್ಲ. ಕಾಡನ್ನ ಅಧಿಕಾರಿಗಳಿಗಿಂತ ಹೆಚ್ಚಾಗಿ ಉಳಿಸಿರೋದೆ ಮಲೆನಾಡ ರೈತರು. ನಿಜವಾದ ಅರಣ್ಯ ರಕ್ಷಕರು ರೈತರೇ ಆಗಿದ್ದಾರೆ. ಸರ್ಕಾರದ ಯೋಜನೆಗಳು ರೈತರನ್ನ ಬದುಕನ್ನ ಉಳಿಸಬೇಕು. ಅಳಿಸಬಾರದು. ಹಾಗಾಗಿ, ಎಲ್ಲರೂ ಕಸ್ತೂರಿ ರಂಗನ್ ವರದಿ ವಿರುದ್ಧ ಆಕ್ಷೇಪಣೆ ಸಲ್ಲಿಸಿ ಎಂದು ಮಲೆನಾಡು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ್  ಮಲೆನಾಡಿಗರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!