ಹುಬ್ಬಳ್ಳಿ: ಪ್ರತ್ಯೇಕ ಅಪಘಾತ; ನಾಲ್ವರ ದುರ್ಮರಣ

Published : Feb 24, 2021, 10:41 AM IST
ಹುಬ್ಬಳ್ಳಿ: ಪ್ರತ್ಯೇಕ ಅಪಘಾತ; ನಾಲ್ವರ ದುರ್ಮರಣ

ಸಾರಾಂಶ

ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಮೂವರ ಸಾವು| ಇನ್ನೊಂದು ಪ್ರಕರಣದಲ್ಲಿ ಬೈಕ್‌ನಿಂದ ಬಿದ್ದು ಮಹಿಳೆ ಸಾವು| ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಹುಬ್ಬಳ್ಳಿ(ಫೆ.24): ಹುಬ್ಬಳ್ಳಿ-ಕುಂದಗೋಳ ರಸ್ತೆ ಮೇಲೆ ಶೆರೆವಾಡ ಟೋಲ್‌ಗೇಟ್‌ ಸಮೀಪದ ಲಂಡೇನಹಳ್ಳದ ಬಳಿ ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.

ಕುಂದಗೋಳದ ಇಸ್ಮಾಯಿಲ್‌ ಬಸೀರಸಾಬ (25), ಖಾಜಾಮೊಹಿನು ಬಾಷಾಸಾಬ ಮಿಶ್ರಿಕೋಟಿ (21), ನೂಲ್ವಿಯ ಶಂಕ್ರಪ್ಪ ಬಸಲಿಂಗಪ್ಪ ಅಂಗಡಿ (27) ಮೃತಪಟ್ಟವರು. ರಾತ್ರಿ ಇಸ್ಮಾಯಿಲ್‌ ಬಸೀರಸಾಬ ಬೈಕ್‌ನಲ್ಲಿ ಖಾಜಾಮೊಹಿನ್‌ ಬಾಷಾಸಾಬ ಮಿಶ್ರಿಕೋಟಿ ಜತೆಗೆ ನೂಲ್ವಿ ಕಡೆಯಿಂದ ಕುಂದಗೋಳ ಕಡೆಗೆ ಹೋಗುವಾಗ ಶಂಕ್ರಪ್ಪ ಹಾಗೂ ಸುರೇಶ ವಲಮಣ್ಣವರ ಇನ್ನೊಂದು ಬೈಕ್‌ನಲ್ಲಿ ಎದುರಿನಿಂದ ಬಂದು ಡಿಕ್ಕಿ ಹೊಡೆದಿದ್ದಾರೆ. ಸುರೇಶ ಕೂಡ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರಲ್ಲಿ ಶೇ.70 ರಷ್ಟು ಯುವಜನಾಂಗ; ಬೆಚ್ಚಿ ಬೀಳಿಸುತ್ತಿದೆ ವರದಿ!

ಮಂಗಳವಾರ ಬೆಳಗ್ಗೆ ನಡೆದ ಇನ್ನೊಂದು ಪ್ರಕರಣದಲ್ಲಿ ಬೈಕ್‌ ಮೂಲಕ ಹಳಿಯಾಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಹಿಂಬದಿ ಕುಳಿತಿದ್ದ ಶಾಂತವ್ವ ಗದಿಗೆಪ್ಪ ಮಡಿವಾಳರ (55) ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

BCCI Centre of Excellence: ಬೆಂಗಳೂರಲ್ಲಿದೆ ಭಾರತದ ಕ್ರಿಕೆಟ್‌ ಫ್ಯಾಕ್ಟ್ರಿ; ₹500 ಕೋಟಿ ವೆಚ್ಚ
ಬೆಂಗಳೂರು ವಾಹನ ಸವಾರರಿಗೆ ಅಲರ್ಟ್; ಅಕ್ಟೋಬರ್‌ನಿಂದ ಜನವರಿವರೆಗೂ ಹೆಚ್ಚಾಗಲಿದೆ ಟ್ರಾಫಿಕ್‌ ತಲೆನೋವು, ಇಲ್ಲಿದೆ ಕಾರಣ!