ಉಚಿತ ಸಿಲಿಂಡರ್‌ ಗ್ಯಾಸ್‌ ವಿತರಣೆ

Kannadaprabha News   | Asianet News
Published : Feb 24, 2021, 09:37 AM ISTUpdated : Feb 24, 2021, 09:43 AM IST
ಉಚಿತ  ಸಿಲಿಂಡರ್‌ ಗ್ಯಾಸ್‌ ವಿತರಣೆ

ಸಾರಾಂಶ

ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗಿದೆ. ಉಚಿತವಾಗಿ ಕಡುಬಡವರಿಗೆ ವಿತರಣೆ ಗ್ಯಾಸ್ ಸಿಲಿಂಡರ್  ವಿತರಣೆ ಮಾಡಲಾಗಿದೆ. 

ಪಾವಗಡ (ಫೆ.24):  ಪ್ರತಿಯೊಂದು ಮನೆಯಲ್ಲಿಯೂ ಸಿಲಿಂಡರ್‌ ಗ್ಯಾಸ್‌ ಬಳಸಿ ಪರಿಸರ ಸಂಕ್ಷಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಶಾಸಕ ವೆಂಕಟರಮಣಪ್ಪ ಕರೆ ನೀಡಿದರು.

ತಾಲೂಕಿನ ನಾಗಮಡಿಕೆ ಹೋಬಳಿ ವಳ್ಳೂರು ಗ್ರಾಪಂನ ವೆಂಕಟಮ್ಮನ ಹಳ್ಳಿಯಲ್ಲಿ ನಾಗೇಂದ್ರರಾವ್‌(ನಾಣಿ) ಅವರು ನೀಡಿದ್ದ ಸಿಲಿಂಡರ್‌ ಗ್ಯಾಸ್‌ಗಳನ್ನು ಗ್ರಾಮದ 50 ಮಂದಿ ಕಡುಬಡವರಿಗೆ ಉಚಿತವಾಗಿ ವಿತರಿಸಿ ಮಾತನಾಡಿದರು.

ಸಿಲಿಂಡರ್‌ ಗ್ಯಾಸ್‌ ಇಲ್ಲದ ಗ್ರಾಮದ ಪ್ರತಿಯೊಂದು ಮನೆಗೂ ಸಂಪರ್ಕ ಕಲ್ಪಿಸುವ ಹಿನ್ನೆಲೆಯಲ್ಲಿ ವೆಂಕಟಮ್ಮನಹಳ್ಳಿ ನಾಗೇಂದ್ರರಾವ್‌ ಸ್ವಇಚ್ಛೆಯಿಂದ ಸಿಲಿಂಡರ್‌ ಗ್ಯಾಸ್‌ಗಳ ವಿತರಣೆಗೆ ಮುಂಂದಾಗಿದ್ದಾರೆ. ಇದೇ ರೀತಿ ವಳ್ಳೂರು ಹಾಗೂ ಇತರೆ ತಾಲೂಕಿನ ಗ್ರಾಪಂ ವ್ಯಾಪ್ತಿಯ ಬಡವರ ಮನೆಗಳಿಗೆ ಸಿಲಿಂಡರ್‌ ಗ್ಯಾಸ್‌ ಕಲ್ಪಿಸಲು ಆಸಕ್ತಿ ವಹಿಸಿರುವುದು ಶ್ಲಾಘನೀಯ ಎಂದರು.

LPG ಸಿಲಿಂಡರ್‌ ಖರೀ​ದಿ ಸಬ್ಸಿಡಿ ರದ್ದು: ಪರೋಕ್ಷ ಒಪ್ಪಿದ ಕೇಂದ್ರ ಸರ್ಕಾರ ...

ಗಡಿ ಭಾಗದ ವಳ್ಳೂರು ತಿರುಮಣಿ ಬಿ.ಕೆ.ಹಳ್ಳಿ ರಾಪ್ಚೆ ಇತರೆ ಗ್ರಾಪಂಗಳ ಪ್ರಗತಿಗೆ ಆಸಕ್ತಿವಹಿಸಿದ್ದು ಶಾಸಕರ ನಿಧಿ ಸೇರಿದಂತೆ ಇತರೆ ಸರ್ಕಾರಿ ಹಾಗೂ ಸೋಲಾರ್‌ ಮೀಸಲು ನಿಧಿಗಳ ಯೋಜನೆಗಳಲ್ಲಿ ಹಲವಾರು ಜನಪರ ಕಾರ್ಯಕೈಗೊಳ್ಳುವುದಾಗಿ ಹೇಳಿದರು.

ಇದೇ ವೇಳೆ ಕಾಂಗ್ರೆಸ್‌ ಮುಖಂಡ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಜನಾನುರಾಗಿ ನಾಗೇಂದ್ರರಾವ್‌ (ನಾಣಿ)ವಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷ ಚನ್ನಕೇಶವಲು, ಮುತ್ಯಾಲಪ್ಪ ಹಾಗೂ ತಿರುಮಣಿ ನ್ಯೂ ಇಂಡಿಯನ್‌ ಗ್ರಾಮೀಣ ವಿತರಕ, ಮಾಲೀಕ ತಾಳೇಮರದಹಳ್ಳಿ ನರೇಶ್‌ ಇದ್ದರು.

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ